ಆಗಸ್ಟ್ 31ರೊಳಗೆ 200 ಕ್ಕೂ ಹೆಚ್ಚು ಸಾಕುಪ್ರಾಣಿಗಳನ್ನು ಅಪಘಾನಿಸ್ತಾನದಿಂದ ಹೊರಗೆ ಸಾಗಿಸುವ ಗುರಿ ಈ ಸಂಸ್ಥೆಯದು
ಆದರೆ, ನೌಜಾದ್ ಸಂಸ್ಥೆಯ ಕಳಕಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಮಾನವರ ಸ್ಥಿತಿ ಪ್ರಾಣಿಗಳಿಗಿಂತ ಕೆಟ್ಟದಾಗಿರುವಾಗ ಪ್ರಾಣಿಗಳನ್ನು ರಕ್ಷಿಸುವ ಕೆಲಸಕ್ಕೆ ಇವರು ಯಾಕೆ ಮುಂದಾಗಿದ್ದಾರೆ ಅಂತ ಅನೇಕರು ಕೇಳುತ್ತಿದ್ದಾರೆ.
ತಾಲಿಬಾನಿಗಳ ಕೈಗೆ ಸಿಕ್ಕಿರುವ ಅಫಘಾನಿಸ್ತಾನದಲ್ಲಿ ತಾವು ಸುರಕ್ಷಿತರಲ್ಲ ಅಂತ ಭಾವಿಸಿರುವ ಸಾವಿರಾರು ಜನ ದೇಶ ತೊರೆಯುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸುಮಾರು 50,000 ಜಮಾಯಿಸಿದ್ದು ಬೇರೆ ದೇಶಗಳಿಗೆ ಹಾರಿ ಹೋಗಲು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ತಾಲಿಬಾನಿಗಳು ಜನರನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಜನ ಪಲಾಯನ ಮಾಡಲು ನಿರ್ಧರಿಸಿರುವುದು ಆಶ್ಚರ್ಯ ಹುಟ್ಟಿಸುವುದಿಲ್ಲ. ಅದು ಸರಿ, ತಾಲಿಬಾನಿಗಳಿಂದ ನಾಯಿ, ಬೆಕ್ಕು, ಕತ್ತೆ ಮೊದಲಾದ ಸಾಕಿ ಪ್ರಾಣಿಗಳಿಗೂ ಅಪಾಯವಿದೆಯೇ?
ಹೌದೆನ್ನುತ್ತದೆ ಕಾಬೂಲ ನಗರದ ಒಂದು ಚಿಕ್ಕ ಪ್ರಾಣಿ ದಯಾ ಸಂಸ್ಥೆ. ಈ ವಿಡಿಯೋನಲ್ಲಿ ನೋಡಿ. ಹಲವಾರು ಸಾಕು ಪ್ರಾಣಿಗಳನ್ನು ಅಫಘಾನಿಸ್ತಾನದಿಂದ ಹೊರಗೆ ಕಳಿಸುವ ಪ್ರಯತ್ನ ಮಾಡಲಾಗುತ್ತಿದೆ. ನೌಜಾದ್ ಹೆಸರಿನ ಈ ಸಂಸ್ಥೆಯು ಒಂದು ವಿಮಾನವನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಸುಮಾರು 200 ನಾಯಿ ಮತ್ತು ಬೆಕ್ಕುಗಳನ್ನು ಸಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದು ಕಾರ್ಗೊ ವಿಮಾನಕ್ಕೆ ತಗುಲುವ ಹಣವನ್ನು ಚಂದಾ ಮೂಲಕ ಸಂಗ್ರಹಿಸುತ್ತಿದೆ.
ಈ ಕೆಲಸ ವಿದೇಶಿ ಸೇನೆಗಳು ಆಫಘಾನಿಸ್ತನ ತೆರವುಗೊಳಿಸಲು ತಾಲಿಬಾನ್ ನೀಡಿರುವ ಆಗಸ್ಟ್ 31 ರ ಗಡುವಿನೊಳಗೆ ಆಗಬೇಕು. ಇಲ್ಲದೆ ಹೋದರೆ, ಪ್ರಾಣಿಗಳ ಗತಿ ಏನಾಗುವುದೋ ಅಂತ ನೌಜಾದ್ ಸಂಸ್ಥೆಯನ್ನು ಹುಟ್ಟುಹಾಕಿರುವ ಮತ್ತು ಅದರ ನಿರ್ದೇಶಕಿಯೂ ಆಗಿರುವ ಶಾರ್ಲೆಟ್ ಮ್ಯಾಕ್ಸ್ವೆಲ್-ಜೋನ್ಸ್ ಆತಂಕ ವ್ಯಕ್ತಪಡಿಸಿದ್ದಾರೆ. ಆ ಗಡುವಿನ ನಂತರ ವಿಮಾನ ನಿಲ್ದಾಣದಲ್ಲಿ ಉಳಿದುಬಿಡುವ ಜನರ ಗತಿ ಏನಾಗಲಿದೆಯೋ ಎಂದು ಅವರು ಹೇಳಿದ್ದಾರೆ.
ಆದರೆ, ನೌಜಾದ್ ಸಂಸ್ಥೆಯ ಕಳಕಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಮಾನವರ ಸ್ಥಿತಿ ಪ್ರಾಣಿಗಳಿಗಿಂತ ಕೆಟ್ಟದಾಗಿರುವಾಗ ಪ್ರಾಣಿಗಳನ್ನು ರಕ್ಷಿಸುವ ಕೆಲಸಕ್ಕೆ ಇವರು ಯಾಕೆ ಮುಂದಾಗಿದ್ದಾರೆ ಅಂತ ಅನೇಕರು ಕೇಳುತ್ತಿದ್ದಾರೆ. ಪ್ರಾಣಗಳನ್ನು ಏರ್ಲಿಫ್ಟ್ ಮಾಡಲು ತನ್ನ ವಿಮಾನಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಬ್ರಿಟನ್ ಹೇಳಿದೆ.
ಇದನ್ನೂ ಓದಿ: CPL 2021: ಡ್ರೆಸಿಂಗ್ ಕೋಣೆಯ ಕಿಟಕಿ ಗಾಜು ಒಡೆದ ಕ್ರಿಸ್ ಗೇಲ್ ಸಿಡಿಲಬ್ಬರದ ಸಿಕ್ಸರ್! ವಿಡಿಯೋ ನೋಡಿ