AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಕ್ಲಾಸಿಕ್ 350 ಬುಲೆಟ್ ಸೆಪ್ಟಂಬರ್ 1 ರಂದು ಎಲೀಟ್ ಗ್ರಾಹಕರ ಕೈ ಸೇರಲಿದೆ, ಇದು ಮೆಟಾಯರ್ 350 ಕ್ಕಿಂತ ಭಿನ್ನ!

ಹೊಸ ಕ್ಲಾಸಿಕ್ 350 ಬುಲೆಟ್ ಸೆಪ್ಟಂಬರ್ 1 ರಂದು ಎಲೀಟ್ ಗ್ರಾಹಕರ ಕೈ ಸೇರಲಿದೆ, ಇದು ಮೆಟಾಯರ್ 350 ಕ್ಕಿಂತ ಭಿನ್ನ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 27, 2021 | 8:09 PM

Share

ಮೆಟಾಯರ್ 350 ಬುಲೆಟ್ನೊಂದಿಗೆ ರಂಗ ಪ್ರವೇಶಿಸಿದ ಜೆ-ಪ್ಲಾಟ್ಫಾರ್ಮ್ ಮೇಲೆ ಹೊಸ ಕ್ಲಾಸಿಕ್ 350 ಅನ್ನು ಕಟ್ಟಲಾಗುತ್ತದೆ. ಹೆಚ್ಚುವರಿ ಸ್ಥಿರತೆಯನ್ನು ಒದಗಿಸಲು ಡಬಲ್ ಕ್ರ್ಯಾಡಲ್ ಫ್ರೇಮಿನ ಮೇಲೆ ಗಾಡಿಯ ಇಂಜಿನ್ ಕೂತುಕೊಳ್ಳುತ್ತದೆ.

ಗಾಡಿ ಅಂದ್ರೆ ಇದಪ್ಪಾ! ಅಂತ ರಾಯಲ್ ಎನ್​ಪೀಲ್ಡ್​​ ಕಂಪನಿಯ ಮೊಟಾರ್ ಬೈಕ್​ಗಳನ್ನು ನೋಡಿದಾಕ್ಷಣ ಉದ್ಗರಿಸದವರು ಬಹಳ ಕಮ್ಮಿ. ಈ ಗಾಡಿಯ ಖದರ್ ಅಸಾಮಾನ್ಯವಾದದ್ದು. ರಸ್ತೆ ಮೇಲೆ ಅದು ಓಡುತ್ತಿದರೆ ಹೆಸರಿಗೆ ತಕ್ಕಂತೆ ಚಕ್ರಾಧಿಪತಿಯೇ! ಹಲವು ವರ್ಷಗಳ ಕಾಲ ತೆರೆಮರೆಗೆ ಸರಿದಿದ್ದ ಈ ಕಂಪನಿಯ ಬುಲೆಟ್ ವಾಹನಗಳು ಮತ್ತೆ ದ್ವಿಚಕ್ರ ವಾಹನಗಳ ಮಾರ್ಕೆಟ್​ನಲ್ಲಿ ರಾರಾಜಿಸುತ್ತಿವೆ. ಈಗ ಕಂಪನಿಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯೆಂದರೆ, ಕ್ಲಾಸಿಕ್ 350 ಬೈಕಿನ ಅಪ್ಡೇಟೆಡ್ ಆವೃತ್ತಿ ಇಷ್ಷರಲ್ಲೇ ಮಾರ್ಕೆಟ್​ಗೆ ದಾಂಗುಡಿ ಇಡಲಿದೆ. ಹಲವು ಸುಧಾರಿತ ಕಾಸ್ಮೆಟಿಕ್ ಮತ್ತು ಕಾರ್ಯವಿಧಾನ ಅಪ್ಗ್ರೇಡ್​ಗಳೊಂದಿಗೆ ಅದು ಗ್ರಾಹಕರ ಕೈ ಸೆರಲಿದೆ.

ನಿಮಗೆ ನೆನಪಿರಬಹುದು. ಕಳೆದ ವರ್ಷ ಸಂಸ್ಥೆಯು ಮೆಟಾಯರ್ 350 ವಾಹನವನ್ನು ಲಾಂಚ್ ಮಾಡಿತ್ತು. ಹೊಸ ಕ್ಲಾಸಿಕ್ 350 ಗಾಡಿಯು ಯುನಿಟ್ ಕನ್ಸ್ಟ್ರಕ್ಷನ್ ಇಂಜಿನ್ ಬದಲಿಗೆ ಮಾರ್ಪಾಟು ಹೊಂದಿ 349ಸಿಸಿ ಮೆಟಾಯರ್ ಇಂಜಿನ್ನೊಂದಿಗೆ ಬರಲಿದೆ. ಹೊಸ ಎಂಜಿನ್ 20 ಪಿಎಸ್ ಪವರ್ ಮತ್ತು 28 ಎನ್ಎಂ ಟಾರ್ಕ್ ಗಳ ಸಂಯೋಗವಾಗಿರುವ ನಿರೀಕ್ಷೆಯಿದೆ. ಅಷ್ಟಾಗಿಯೂ, ಕ್ಲಾಸಿಕ್ 350, 2021 ಗಾಗಿ ಎಂಜಿನ್ ಸ್ವಲ್ಪ ಭಿನ್ನ ಸ್ಥಿತಿಯ ಟ್ಯೂನ್‌ನೊಂದಿಗೆ ಬರಬಹುದು.

ಮೆಟಾಯರ್ 350 ಬುಲೆಟ್ನೊಂದಿಗೆ ರಂಗ ಪ್ರವೇಶಿಸಿದ ಜೆ-ಪ್ಲಾಟ್ಫಾರ್ಮ್ ಮೇಲೆ ಹೊಸ ಕ್ಲಾಸಿಕ್ 350 ಅನ್ನು ಕಟ್ಟಲಾಗುತ್ತದೆ. ಹೆಚ್ಚುವರಿ ಸ್ಥಿರತೆಯನ್ನು ಒದಗಿಸಲು ಡಬಲ್ ಕ್ರ್ಯಾಡಲ್ ಫ್ರೇಮಿನ ಮೇಲೆ ಗಾಡಿಯ ಇಂಜಿನ್ ಕೂತುಕೊಳ್ಳುತ್ತದೆ. ಹೊಸ ಗಾಡಿಗೆ ಮೆಟಾಯರ್ 350 ಬುಲೆಟ್​​ನ ವ್ಹೀಲ್​ಗಳನ್ನೇ  ಜೋಡಿಸಲಾಗುತ್ತದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಅಂದಹಾಗೆ, ಸೆಪ್ಟೆಂಬರ್ 1 ರಂದು ಹೊಸ ಕ್ಲಾಸಿಕ್ 350 ಬುಲೆಟ್ ಮಾರ್ಕೆಟ್​ಗೆ ಬರಲಿದೆ. ಇದರ ಎಕ್ಸ್ ಶೋರೂಮ್ ಬೆಲೆ ರೂ. 1.75 ಲಕ್ಷಗಳಿಂದ ರೂ. 2.10 ಲಕ್ಷಗಳಾಗಿರಲಿದೆ.

ಇದನ್ನೂ ಓದಿ: ಬಾತುಕೋಳಿ ಸುರಕ್ಷಿತವಾಗಿ ರಸ್ತೆ ದಾಟಲು ಸಹಾಯ ಮಾಡಿ ಮಾನವೀಯತೆ ಮೆರೆದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್