ಬಾತುಕೋಳಿ ಸುರಕ್ಷಿತವಾಗಿ ರಸ್ತೆ ದಾಟಲು ಸಹಾಯ ಮಾಡಿ ಮಾನವೀಯತೆ ಮೆರೆದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್
Viral Video: ಮಾನವೀಯತೆ ಮೆರೆದ ವ್ಯಕ್ತಿಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಆತನ ಕಾಳಜಿಯಿಂದ ಬಾತುಕೋಳಿ ತನ್ನ ಮರಿಗಳೊಂದಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಸಹಾಯವಾಯಿತು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ನಾವಾಯಿತು ನಮ್ಮ ಪಾಡಾಯಿತು ಎಂದು ಅವರವರ ಪಾಡಿಗೆ ಅವರಿರುವ ಈ ಜಾಯಮಾನದಲ್ಲಿ ಅಪಘಾತಕ್ಕೆ ಒಳಗಾಗಿ ರಸ್ತೆಯಲ್ಲಿ ಬಿದ್ದ ಮನುಷ್ಯರನ್ನೂ ನೋಡಿಯೂ ನೋಡಂತೆ ಹೋಗುತ್ತಾರೆ ಜನರು. ಅಂಥಹುದರಲ್ಲಿ ಬಾತುಕೋಳಿ ರಸ್ತೆ ದಾಟುತ್ತಿರುವುದನ್ನು ನೋಡಿ ಅಪಘಾತ ಸಂಭವಿಸಬಹುದು ಎಂಬ ಕಾಳಜಿಯಿಂದ ವ್ಯಕ್ತಿ, ಬಾತುಕೋಳಿಗೆ ಸಹಾಯ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋ ಫುಲ್ ವೈರಲ್ ಆಗಿದ್ದು ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
19 ಸೆಕೆಂಡುಗಳಿರುವ ವಿಡಿಯೋ ಕ್ಲಿಪ್ಅನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳನ್ನು ಗಳಸಿಕೊಂಡಿದೆ. ಬಾತುಕೋಳಿಯನ್ನು ರಕ್ಷಿಸಿದ ವ್ಯಕ್ತಿಗೆ ಮೆಚ್ಚುಗೆ ಸೂಚಿಸಿದ್ದಾರೆ. ವಿಡಿಯೋವನ್ನು ಗಮನಿಸುವಂತೆ, ಬಾತುಕೋಳಿಯು ಅದರ ಮರಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಿರುವುದನ್ನು ನೋಡಬಹುದು. ರಸ್ತೆ ದಾಟುವ ವೇಳೆ ವಾಹನಗಳು ಬರುತ್ತಿರುವುದನ್ನು ವ್ಯಕ್ತಿ ಗಮನಿಸಿದ್ದಾರೆ. ಈ ವೇಳೆ ವ್ಯಕ್ತಿ ಬಾತುಕೋಳಿ ಸುರಕ್ಷತೆಗಾಗಿ ಸಹಾಯ ಮಾಡಿದ್ದಾರೆ.
Humanity ?❤️ pic.twitter.com/9BEMLIZrbR
— ❤️ A page to make you smile ❤️ (@hopkinsBRFC21) August 26, 2021
ಮಾನವೀಯತೆ ಮೆರೆದ ವ್ಯಕ್ತಿಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಆತನ ಕಾಳಜಿಯಿಂದ ಬಾತುಕೋಳಿ ತನ್ನ ಮರಿಗಳೊಂದಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಸಹಾಯವಾಯಿತು ಎಂದು ಹೇಳಿದ್ದಾರೆ. ಎಲ್ಲಾ ಜನರಿಗೂ ಈ ಗುಣಗಳಿರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:
(Man helps to ducklings for road cross video goes viral)