ಸನ್ಯಾಸತ್ವ ಸ್ವೀಕರಿಸಿದರೂ ಮಗನ ಜೀವ ಉಳಿಸಲು ಕಿಡ್ನಿಯನ್ನೇ ದಾನ ಮಾಡಿದ್ದ ಮಹಾತಾಯಿ!

Edited By:

Updated on: Jan 16, 2026 | 12:02 PM

ಹೃದಯಾಘಾತದಿಂದ ರಾಯಚೂರಿನ ತಿಂಥಣಿ ಬ್ರಿಡ್ಜ್ ಸಮೀಪದ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಸಿದ್ದರಾಮನಂದ ಸ್ವಾಮೀಜಿ ಬ್ರಹ್ಮೈಕ್ಯರಾದ ಬೆನ್ನಲ್ಲೇ ಅವರ ಪೂರ್ವಾಶ್ರಮದ ತಾಯಿ ಮಹತ್ವದ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಶ್ರೀಗಳಿಗೆ ಎರಡೂ ಕಿಡ್ನಿ ವಿಫಲವಾದಾಗ ತಾನೇ ಅವರಿಗೆ ಕಿಡ್ನಿ ದಾನ ಮಾಡಿದ್ದೇ ಎಂಬ ವಿಷಯವನ್ನೀಗ ಅವರು ಬಹಿರಂಗಪಡಿಸಿದ್ದಾರೆ.

ರಾಯಚೂರು, ಜನವರಿ 16: ತಿಂಥಣಿ ಕಾಗಿನೆಲೆ ಪೀಠದ ಸಿದ್ದರಾಮಾನಂದಪುರಿ ಶ್ರೀಗಳು ಬ್ರಹ್ಮೈಕ್ಯರಾದ ಬೆನ್ನಲ್ಲೇ ಅವರ ಪೂರ್ವಾಶ್ರಮದ ತಾಯಿ ಮಹತ್ವದ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಶ್ರೀಗಳಿಗೆ ಎರಡು ಕಿಡ್ನಿ ವಿಫಲವಾದಾಗ ಕಣ್ಣೀರಿಟ್ಟಿದ್ದ ತಾಯಿ ಜಯಮ್ಮ, ಸನ್ಯಾಸತ್ವ ಸ್ವೀಕರಿಸಿದರೂ ಮಗನ ಜೀವ ಉಳಿಸಲು ತಮ್ಮ ಕಿಡ್ನಿಯನ್ನೇ ದಾನ ಮಾಡಿದ್ದರು ಎಂಬ ವಿಷಯ ರಿವೀಲ್​​ ಆಗಿದೆ. ಈ ಬಗ್ಗೆ ಟಿವಿ9 ಜೊತೆ ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಜಯಮ್ಮ ಅವರ ಎಡಭಾಗದ ಕಿಡ್ನಿಯನ್ನು, ಶ್ರೀಗಳ ಬಲಭಾಗಕ್ಕೆ ಕಿಡ್ನಿ ಕಸಿ ಮಾಡಲಾಗಿತ್ತು. 7 ವರ್ಷದ ಹಿಂದೆ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು ಎಂಬ ವಿಷಯ ಪ್ರಸ್ತಾಪಿಸಿ ಜಯಮ್ಮ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು ತಮ್ಮ ಪೂರ್ವಾಶ್ರಮದ ತಾಯಿ ಕಿಡ್ನಿ ಕೊಡುತ್ತೇನೆ ಎಂದಿದ್ದಕ್ಕೆ ಶ್ರೀಗಳು ಬೇಡ ಎಂದಿದ್ದರು. ಬಳಿಕ ಸಿದ್ದರಾಮಯ್ಯನವರಿಂದ ಮನವೊಲಿಕೆ ಬಳಿಕ ಶ್ರೀಗಳು ಒಪ್ಪಿದ್ದರು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.