ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಬಂದ್: ಬಸ್​ಗಳಿಲ್ಲದೆ ​​ನಿಲ್ದಾಣ ಖಾಲಿ

| Updated By: Ganapathi Sharma

Updated on: Dec 24, 2024 | 10:40 AM

ಅಂಬೇಡ್ಕರ್ ವಿರುದ್ದ ಅಮಿತ್ ಶಾ ಹೇಳಿಕೆ ಖಂಡಿಸಿ ಸಂವಿಧಾನ ಉಳಿಸಿ ಸಂಘಟನೆ ಹಾಗೂ ದಲಿತ ಸಂಘಟನೆಗಳು ಕರೆ ನೀಡಿರುವ ಕಲಬುರಗಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ನಗರದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ‌ ಮಾಡಲಾಗಿದೆ. ನಗರದ ಪರಿಸ್ಥಿತಿ ಹೇಗಿದೆ ಎಂಬ ವಿಡಿಯೋ ಇಲ್ಲಿದೆ.

ಕಲಬುರಗಿ, ಡಿಸೆಂಬರ್ 24: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ‘‘ಸಂವಿಧಾನ ಉಳಿಸಿ ಸಂಘಟನೆ’’ ಕರೆ ನೀಡಿದ ಕಲಬುರಗಿ ಬಂದ್​ಗೆ ಬೆಳಗ್ಗೆ 6 ರಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ನಗರದ ಪ್ರಮುಖ ವೃತ್ತದ ಜೇವರ್ಗಿ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್​​​ಗೆ ಬೆಂಕಿ ಹಚ್ಚಿ ಅಮಿತ್ ಶಾ ಅವರ ವಿರುದ್ಧ ಘೋಷಣೆ ಕೂಗಿದರು. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಬೆಳಗ್ಗೆ ಬೇರೆ ಬೇರೆ ಊರುಗಳಿಂದ ಬಂದ ಸಾರ್ವಜನಿಕರು ಆಟೋ ಸೇರಿದಂತೆ ಸಂಚಾರಿ ವಾಹನಗಳು ಸಿಗದೇ ಪರದಾಡಿದರು. ಕೆಲವೊಂದು ಆಟೋಗಳು ದುಪ್ಪಟ್ಟು ಪ್ರಯಾಣ ದರ ತೆಗೆದುಕೊಳ್ಳುವುದು ಕಂಡುಬಂತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Dec 24, 2024 10:38 AM