ವಾತಾನುಕೂಲಿತ ಹೆಲ್ಮೆಟ್ ಬಗ್ಗೆ ಕೇಳಿದ್ದೀರಾ? ಕಲಬುರಗಿ ಸಂಚಾರಿ ಪೊಲೀಸರಿಗೆ ವಿತರಿಸಲಾಗುತ್ತಿದೆ!
ಸಂಚಾರಿ ವಿಭಾಗದ ಪೊಲೀಸರಿಗೆ ದಣಿವಾರಿಸಿಕೊಳ್ಳಲು ಮತ್ತು ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳಲು ನೀರು, ಮಜ್ಜಿಗೆ ಮತ್ತು ಶರಬತ್ತನ್ನು ವಿತರಿಸುವ ಕಾರ್ಯ ಈಗಾಗಲೇ ಶುರುವಾಗಿದೆ ಎಂದು ಪೊಲೀಸ್ ಆಯುಕ್ತ ಹೇಳಿದರು. ತಮ್ಮ ಸಿಬ್ಬಂದಿಯ ಬಗ್ಗೆ ನಗರ ಪೊಲೀಸ್ ವ್ಯವಸ್ಥೆ ಯೋಚನೆ ಮಾಡಿರುವುದು ಶ್ಲಾಘನೀಯ. ಮಳೆ ಇರಲಿ, ಬಿಸಿಲಿರಲಿ ಪೊಲೀಸ್ ಬಂದೋಬಸ್ತ್ಗಾಗಿ ಓಡಾಡುವುದು ಸಿಬ್ಬಂದಿಗೆ ತಪ್ಪಿದ್ದಲ್ಲ.
ಕಲಬುರಗಿ, ಮೇ 6: ನಗರದ ಅಸಹನೀಯ ತಾಪಮಾನದಿಂದ ತಮ್ಮ ಸಿಬ್ಬಂದಿಯನ್ನು ರಕ್ಷಿಸಲು ಇಲ್ಲಿನ ಪೊಲೀಸ್ ವ್ಯವಸ್ಥೆ ವಿನೂತನ ಮತ್ತು ರಾಜ್ಯದಲ್ಲೇ ಪ್ರಥಮ ಬಾರಿಗೆ ಎನ್ನಲಾಗಿರುವ ಪ್ರಯೋಗ ಮಾಡುತ್ತಿದೆ. ಕಲಬುರಗಿಯಲ್ಲಿ ಬಿಸಿಲಿನ ತಾಪ ಜಾಸ್ತಿ ಮತ್ತು ಮೇ ತಿಂಗಳಲ್ಲಿ ಉಷ್ಣಾಂಶ 44-45 ಡಿಗ್ರೀ ಸೆಲ್ಸಿಯಸ್ ತಲುಪೋದುಂಟು. ಹಾಗಾಗಿ, ನಗರದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಅದರಲ್ಲೂ ವಿಶೇಷವಾಗಿ ಸಂಚಾರಿ ವಿಭಾಗದ ಪೊಲೀಸರನ್ನು ಬಿಸಿಲಿನ ಝಳದಿಂದ ತಪ್ಪಿಸಲು ವಾತಾನುಕೂಲಿತ ಹೆಲ್ಮೆಟ್, ವಾಯು ಮಾಲಿನ್ಯ ಮತ್ತು ಧೂಳಿನಿಂದ ಸಂರಕ್ಷಿಸಲು 3 ಎಂ ಮಾಸ್ಕ್ಗಳನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಪೊಲೀಸ್ ಕಮೀಷನರ್ ಡಾ ಶರಣಪ್ಪ ಎಸ್ ಡಿ (police commissioner Dr Sharanappa SD ) ಹೇಳಿದರು.
ಇದನ್ನೂ ಓದಿ: ಅಪಹರಿಸಲಾಗಿದ್ದ ನವಜಾತ ಶಿಶುವನ್ನು ಎರಡೇ ದಿನಗಳಲ್ಲಿ ತಾಯಿ ಮಡಿಲು ಸೇರಿಸಿದ ಕಲಬುರಗಿ ಪೊಲೀಸರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ