ವಾತಾನುಕೂಲಿತ ಹೆಲ್ಮೆಟ್ ಬಗ್ಗೆ ಕೇಳಿದ್ದೀರಾ? ಕಲಬುರಗಿ ಸಂಚಾರಿ ಪೊಲೀಸರಿಗೆ ವಿತರಿಸಲಾಗುತ್ತಿದೆ!

ಅರುಣ್​ ಕುಮಾರ್​ ಬೆಳ್ಳಿ

Updated on: May 06, 2025 | 8:51 PM

ಸಂಚಾರಿ ವಿಭಾಗದ ಪೊಲೀಸರಿಗೆ ದಣಿವಾರಿಸಿಕೊಳ್ಳಲು ಮತ್ತು ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳಲು ನೀರು, ಮಜ್ಜಿಗೆ ಮತ್ತು ಶರಬತ್ತನ್ನು ವಿತರಿಸುವ ಕಾರ್ಯ ಈಗಾಗಲೇ ಶುರುವಾಗಿದೆ ಎಂದು ಪೊಲೀಸ್ ಆಯುಕ್ತ ಹೇಳಿದರು. ತಮ್ಮ ಸಿಬ್ಬಂದಿಯ ಬಗ್ಗೆ ನಗರ ಪೊಲೀಸ್ ವ್ಯವಸ್ಥೆ ಯೋಚನೆ ಮಾಡಿರುವುದು ಶ್ಲಾಘನೀಯ. ಮಳೆ ಇರಲಿ, ಬಿಸಿಲಿರಲಿ ಪೊಲೀಸ್ ಬಂದೋಬಸ್ತ್​ಗಾಗಿ ಓಡಾಡುವುದು ಸಿಬ್ಬಂದಿಗೆ ತಪ್ಪಿದ್ದಲ್ಲ.

ಕಲಬುರಗಿ, ಮೇ 6: ನಗರದ ಅಸಹನೀಯ ತಾಪಮಾನದಿಂದ ತಮ್ಮ ಸಿಬ್ಬಂದಿಯನ್ನು ರಕ್ಷಿಸಲು ಇಲ್ಲಿನ ಪೊಲೀಸ್ ವ್ಯವಸ್ಥೆ ವಿನೂತನ ಮತ್ತು ರಾಜ್ಯದಲ್ಲೇ ಪ್ರಥಮ ಬಾರಿಗೆ ಎನ್ನಲಾಗಿರುವ ಪ್ರಯೋಗ ಮಾಡುತ್ತಿದೆ. ಕಲಬುರಗಿಯಲ್ಲಿ ಬಿಸಿಲಿನ ತಾಪ ಜಾಸ್ತಿ ಮತ್ತು ಮೇ ತಿಂಗಳಲ್ಲಿ ಉಷ್ಣಾಂಶ 44-45 ಡಿಗ್ರೀ ಸೆಲ್ಸಿಯಸ್ ತಲುಪೋದುಂಟು. ಹಾಗಾಗಿ, ನಗರದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಅದರಲ್ಲೂ ವಿಶೇಷವಾಗಿ ಸಂಚಾರಿ ವಿಭಾಗದ ಪೊಲೀಸರನ್ನು ಬಿಸಿಲಿನ ಝಳದಿಂದ ತಪ್ಪಿಸಲು ವಾತಾನುಕೂಲಿತ ಹೆಲ್ಮೆಟ್, ವಾಯು ಮಾಲಿನ್ಯ ಮತ್ತು ಧೂಳಿನಿಂದ ಸಂರಕ್ಷಿಸಲು 3 ಎಂ ಮಾಸ್ಕ್​ಗಳನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಪೊಲೀಸ್ ಕಮೀಷನರ್ ಡಾ ಶರಣಪ್ಪ ಎಸ್ ಡಿ (police commissioner Dr Sharanappa SD ) ಹೇಳಿದರು.

ಇದನ್ನೂ ಓದಿ: ಅಪಹರಿಸಲಾಗಿದ್ದ ನವಜಾತ ಶಿಶುವನ್ನು ಎರಡೇ ದಿನಗಳಲ್ಲಿ ತಾಯಿ ಮಡಿಲು ಸೇರಿಸಿದ ಕಲಬುರಗಿ ಪೊಲೀಸರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.