ಅಪಹರಿಸಲಾಗಿದ್ದ ನವಜಾತ ಶಿಶುವನ್ನು ಎರಡೇ ದಿನಗಳಲ್ಲಿ ತಾಯಿ ಮಡಿಲು ಸೇರಿಸಿದ ಕಲಬುರಗಿ ಪೊಲೀಸರು
ನವೆಂಬರ್ 25ರಂದು ಉಮ್ಮೇರಾ, ನಸ್ರೀನ್ ಮತ್ತು ಫಾತಿಮಾ ಹೆಸರಿನ ಮಹಿಳೆಯರು ಶಿಶುವನ್ನು ಜಿಮ್ಸ್ ನಿಂದ ಅಪಹರಿಸಿ ಬೈರೂನ್ ಹೆಸರಿನ ಮಹಿಳೆಗೆ ₹25,000 ಗಳಿಗೆ ಮಾರಿದ್ದಾರೆ. ಅವರ ಜಾಡು ಪತ್ತೆ ಮಾಡಿದ ಪೊಲೀಸರು ಕಳ್ಳಿಯರನ್ನು ಬಂಧಿಸಿ ಶಿಶುವನ್ನು ರಕ್ಷಿಸಿದ್ದಾರೆ. ಈ ಮಹಿಳೆಯರದ್ದು ಒಂದು ಜಾಲವೇ ಇರುವಂತಿದೆ.
ಕಲಬುರಗಿ: ಜಿಮ್ಸ್ ಆಸ್ಪತ್ರೆಯಿಂದ ಅಪಹರಿಸಲಾಗಿದ್ದ ನವಜಾತ ಶಿಶುವನ್ನು ನಗರದ ಪೊಲೀಸರು ಕೇವಲ ಎರಡು ದಿನಗಳಲ್ಲೇ ಅದನ್ನು ಹುಡುಕಿ ತಂದು ತಂದೆ-ತಾಯಿಗೆ ಒಪ್ಪಿಸಿದ್ದಾರೆ. ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್ ಡಿ ಮತ್ತವರ ಸಿಬ್ಬಂದಿಯ ದಕ್ಷತೆ ಮತ್ತು ಕಾರ್ಯಕ್ಷಮತೆ ಶ್ಲಾಘನೀಯ. ಶಿಶುವನ್ನು ತಾಯಿಯ ಮಡಿಲಿಗೆ ಹಾಕುತ್ತಿರುವ ದೃಶ್ಯವನ್ನು ದೃಶ್ಯಗಳಲ್ಲಿ ನೋಡಬಹುದು. ಮಗುವನ್ನು ವಾಪಸ್ಸು ಪಡೆದು ಆನಂದ ಸಾಗರದಲ್ಲಿ ಮುಳುಗಿರುವ ತಂದೆ-ತಾಯಿ ಪೊಲೀಸರಿಗೆ ಕೃತಜ್ಞತೆ ಮತ್ತು ಧನ್ಯವಾದ ಸಲ್ಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿನ ಗಂಡು ಮಗು ಅಪಹರಣ