Kalaburagi: ಜನನಿಬಿಡ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಉರುಳಿಬಿದ್ದ ಮರ, ದ್ವಿಚಕ್ರ ವಾಹನಗಳು ಜಖಂ
ವಸಂತ ಋತುವಿನ ಕಾರಣ ಮರದ ಎಲೆಗಳೆಲ್ಲ ಉದುರಿರುವುದರಿಂದ ಅದು ಬೋಳುಬೋಳಾಗಿ ಕಾಣುತ್ತಿದೆ. ಆದರೆ ಜನನಿಬಿಡ ಪ್ರದೇಶದಲ್ಲಿ ಮರವೊಂದು ಉರುಳಿದ್ದು ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಕಲಬುರಗಿ: ಮಳೆಯಿಲ್ಲ, ಜೋರು ಗಾಳಿಯಿಲ್ಲ ಆದರೆ ನಗರದ ಸೂಪರ್ ಮಾರ್ಕೆಟ್ (super market) ಪ್ರದೇಶದಲ್ಲಿ ಮರವೊಂದು ಕಳೆದ ರಾತ್ರಿ ಉರುಳಿ ಬಿದ್ದಿದೆ. ಮರದ ಕೆಳಗೆ ಬೈಕ್ ಗಳನ್ನು ಪಾರ್ಕ್ ಮಾಡಿದ್ದರಿಂದ ಸುಮಾರು 10 ದ್ವಿಚಕ್ರವಾಹನಗಳು ಜಖಂಗೊಂಡಿವೆ. ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದ (electricity poll) ಮೇಲೂ ಉರುಳಿದ ಕಾರಣ ವಿದ್ಯುತ್ ಪೂರೈಕೆ ಪ್ರಭಾವಕ್ಕೊಳಗಾಗಿದೆ. ಅದೇ ಪ್ರದೇಶದಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರಾದರೂ ಯಾರಿಗೂ ಅಪಾಯ ಸಂಭವಿಸಿಲ್ಲ. ವಸಂತ ಋತುವಿನ (spring season) ಕಾರಣ ಮರದ ಎಲೆಗಳೆಲ್ಲ ಉದುರಿರುವುದರಿಂದ ಅದು ಬೋಳುಬೋಳಾಗಿ ಕಾಣುತ್ತಿದೆ. ಆದರೆ ಜನನಿಬಿಡ ಪ್ರದೇಶದಲ್ಲಿ ಮರವೊಂದು ಉರುಳಿದ್ದು ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 02, 2023 10:38 AM