Poster war: ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ; ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬ್ಯಾನರ್ ಪೈಪೋಟಿ!

Arun Kumar Belly

|

Updated on:Mar 02, 2023 | 12:11 PM

ಬಿಜೆಪಿ ಪಕ್ಷ ಕಟ್ಟುತ್ತಿರುವ ಬ್ಯಾನರ್ ಗಳಲ್ಲಿ ರಮೇಶ್ ಜಾರಕಿಹೊಳಿ ಮತ್ತು ಸಂಜಯ ಪಾಟೀಲ್ ಅವರ ಫೋಟೋಗಳಿದ್ದರೆ ಕಾಂಗ್ರೆಸ್ ಕಟ್ಟುತ್ತಿರುವ ಬ್ಯಾನರ್ ಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಫೋಟೋ ಇದೆ.

ಬೆಳಗಾವಿ: ರಾಜ್ಯ ಸರ್ಕಾರದಿಂದ ಗುರುವಾರ ಬೆಳಗಾವಿ ರಾಜಹಂಸಗಡ್ ದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ (Chhatrapati Shivaji Maharaj) ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ (Basavaraj S Bommai) ಅವರು ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಚುನಾವಣಾ ಸಮಯವಾಗಿರುವುದರಿಂದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಂದ ಪೋಸ್ಟರ್ ಮತ್ತು ಬ್ಯಾನರ್ ಗಳನ್ನು (banner) ಕಟ್ಟಿ ಕಾರ್ಯಕ್ರಮದ ಕ್ರೆಡಿಟ್ ತೆಗೆದುಕೊಳ್ಳಲು ಪೈಪೋಟಿ ನಡೆದಿದೆ. ಬಿಜೆಪಿ ಪಕ್ಷ ಕಟ್ಟುತ್ತಿರುವ ಬ್ಯಾನರ್ ಗಳಲ್ಲಿ ರಮೇಶ್ ಜಾರಕಿಹೊಳಿ ಮತ್ತು ಸಂಜಯ ಪಾಟೀಲ್ ಅವರ ಫೋಟೋಗಳಿದ್ದರೆ ಕಾಂಗ್ರೆಸ್ ಕಟ್ಟುತ್ತಿರುವ ಬ್ಯಾನರ್ ಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಫೋಟೋ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada