ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತಾಡಿದ ಬಿಎಸ್ ಯಡಿಯೂರಪ್ಪ, ವಯಸ್ಸು 80 ಆದರೂ ಚೈತನ್ಯ ಉಡುಗಿಲ್ಲ ಅಂತ ಸಾಬೀತು ಮಾಡಿದರು!
ಇಂದಿನಿಂದ ಪ್ರಾರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆ ರಾಜ್ಯದ ಎಲ್ಲ 224 ಕ್ಷೇತ್ರಗಳ ಮೂಲಕ ಯಾತ್ರೆ ಹಾದುಹೋಗಲಿದ್ದು ಸುಮಾರು 8,000 ಕಿಮೀ ಗಳನ್ನು ಈ ಅವಧಿಯಲ್ಲಿ ಕ್ರಮಿಸಲಾಗುವುದು ಎಂದು ಬಿಎಸ್ವೈ ಹೇಳಿದರು.
ಚಾಮರಾಜನಗರ: ಜಿಲ್ಲೆಯ ಹನ್ನೂರಲ್ಲಿ ನಡೆದ ಬಿಜೆಪಿ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರು (BS Yediyurappa) ತಮಗೆ ವಯಸ್ಸು ಎಂಭತ್ತಾದರೂ ಶಕ್ತಿಯಿನ್ನೂ ಕುಂದಿಲ್ಲ ಅನ್ನೋದನ್ನು ಭಾಷಣದ ಆರಂಭದಲ್ಲೇ ಪ್ರದರ್ಶಿಸಿದರು. ಇಂದಿನಿಂದ ಪ್ರಾರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆ (Vijaya Sankalp Yatre) 20 ನೇ ತಾರೀಖಿನರೆಗೆ ನಡೆಯಲಿದ್ದು ರಾಜ್ಯದ ಎಲ್ಲ 224 ಕ್ಷೇತ್ರಗಳ (constituencies) ಮೂಲಕ ಯಾತ್ರೆ ಹಾದುಹೋಗಲಿದ್ದು ಸುಮಾರು 8,000 ಕಿಮೀ ಗಳನ್ನು ಈ ಅವಧಿಯಲ್ಲಿ ಕ್ರಮಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಾಸಕ ನಿರಂಜನ್ ಕುಮಾರ್ ಭಾಗಿಯಾಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 01, 2023 06:25 PM
Latest Videos