AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ಸಿನಿಮಾ ಬಗ್ಗೆ ಅಣ್ಣಾವ್ರ ಪುತ್ರಿ ಪೂರ್ಣಿಮಾ ಹೇಳಿದ್ದು ಹೀಗೆ

ಮಗಳ ಸಿನಿಮಾ ಬಗ್ಗೆ ಅಣ್ಣಾವ್ರ ಪುತ್ರಿ ಪೂರ್ಣಿಮಾ ಹೇಳಿದ್ದು ಹೀಗೆ

ಮಂಜುನಾಥ ಸಿ.
|

Updated on: Oct 11, 2023 | 10:26 PM

Share

Dhanya Ramkumar: ಅಣ್ಣಾವ್ರ ಮೊಮ್ಮಗಳು ಧನ್ಯಾ ನಾಯಕಿಯಾಗಿ ನಟಿಸಿರುವ 'ಕಾಲಾಪತ್ಥರ್' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶ್ವಿನಿ ಪುನೀತ್ ರಾಜ್​ಕುಮಾರ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್​ಕುಮಾರ್ (Dhanya Ramkumar) ನಟನೆಯ ‘ಕಾಲಾಪತ್ಥರ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶ್ವಿನಿ ಪುನೀತ್ ರಾಜ್​ಕುಮಾರ್ ಹಾಗೂ ನಟಿ ತಾರಾ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾವ್ರ ಪುತ್ರಿ, ಧನ್ಯಾರ ತಾಯಿ ಪೂರ್ಣಿಮಾ ಸಿನಿಮಾದ ಬಗ್ಗೆ ಮಾತನಾಡಿ, ”ಮಗಳು ಧನ್ಯಾಗೆ ಈ ಸಿನಿಮಾ ಸಿಕ್ಕಿದ್ದು ಅವಳ ಅದೃಷ್ಟ ಎಂದರು. ಸಿನಿಮಾಕ್ಕಾಗಿ ಹಾಡು ಹಾಡಿದ ಗಾಯಕಿಯನ್ನು ಅಭಿನಂದಿಸಿ ಅವರಿಗೆ ಒಂದೊಳ್ಳೆ ಭವಿಷ್ಯ ಈ ಸಿನಿಮಾದಿಂದ ಸಿಗಲಿ ಎಂದು ಹಾರೈಸಿದರು. ಸಿನಿಮಾದಲ್ಲಿ ವಿಕ್ಕಿ ವರುಣ್ ನಾಯಕನಾಗಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More