‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್

Updated on: Jun 26, 2025 | 10:51 PM

ಇದು ಆನ್​ಲೈನ್ ಜಮಾನ. ಸಿನಿಮಾ ಪ್ರಚಾರವೂ ಆನ್​ಲೈನ್​ನಲ್ಲೇ ಆಗಿ ಹೋಗುತ್ತದೆ. ಆದರೆ ‘ಕಾಲವೇ ಮೋಸಗಾರ’ ಸಿನಿಮಾದ ನಟ ಭರತ್ ಸಾಗರ್ ಅವರು ನೇರವಾಗಿ ಜನರನ್ನು ಭೇಟಿ ಮಾಡಿ ಸಿನಿಮಾ ಬಗ್ಗೆ ತಿಳಿಸಿದ್ದಾರೆ. ಹಲವು ಕಾಲೇಜುಗಳಿಗೆ ಅವರು ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳ ಜೊತೆ ಕಾಲ ಕಳೆದು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದು ಆನ್​ಲೈನ್ ಯುಗ. ಸಿನಿಮಾ ಪ್ರಚಾರ ಕೂಡ ಆನ್​ಲೈನ್​ನಲ್ಲೇ ಆಗಿ ಹೋಗುತ್ತದೆ. ಆದರೆ ‘ಕಾಲವೇ ಮೋಸಗಾರ’ ಸಿನಿಮಾದ ನಟ ಭರತ್ ಸಾಗರ್ (Bharath Sagar) ಅವರು ನೇರವಾಗಿ ಜನರನ್ನು ಭೇಟಿ ಮಾಡಿ ಸಿನಿಮಾ ಬಗ್ಗೆ ತಿಳಿಸಿದ್ದಾರೆ. ಅನೇಕ ಕಾಲೇಜುಗಳಿಗೆ ಅವರು ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳ ಜೊತೆ ಕಾಲ ಕಳೆದು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅವರು ಸಿನಿಮಾದ ಡೈಲಾಗ್ ಹೇಳಿ ರಂಜಿಸಿದ್ದಾರೆ. ‘ಕಾಲವೇ ಮೋಸಗಾರ’ (Kalave Mosagara) ಮೂಲಕ ಭರತ್ ಸಾಗರ್ ಅವರು ಮೊದಲ ಬಾರಿ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಜಯ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.