‘ಕರ್ನಾಟಕದ ಪರ ಏರುಧ್ವನಿಯಲ್ಲಿ ಮಾತನಾಡಿದ ಸುದೀಪ್​ಗೆ ಅಭಿನಂದನೆ’

| Updated By: ರಾಜೇಶ್ ದುಗ್ಗುಮನೆ

Updated on: Apr 28, 2022 | 10:09 PM

ಸುದೀಪ್ ಅವರು ನೀಡಿದ ಕೌಂಟರ್ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ. ಕನ್ನಡ ಪರ ಸಂಘಟನೆಯ ಹೋರಾಟಗಾರ ಪ್ರವೀಣ್ ಶೆಟ್ಟಿ (Praveen Shetty) ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಹಿಂದಿ ನಮ್ಮ ರಾಷ್ಟ್ರಭಾಷೆ’ ಎಂದು ಹೇಳಿದ ಅಜಯ್​ ದೇವಗನ್  (Ajay Devgn) ಅವರಿಗೆ ಕಿಚ್ಚ ಸುದೀಪ್ (Kichcha Sudeep) ಅವರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಅಜಯ್​ ದೇವಗನ್ ನಂತರ ಕ್ಷಮೆ ಕೇಳಿದ್ದರು. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸುದೀಪ್ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ಅವರು ನೀಡಿದ ಕೌಂಟರ್ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ. ಕನ್ನಡ ಪರ ಸಂಘಟನೆಯ ಹೋರಾಟಗಾರ ಪ್ರವೀಣ್ ಶೆಟ್ಟಿ (Praveen Shetty) ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಕರ್ನಾಟಕದ ಪರ ಏರುಧ್ವನಿಯಲ್ಲಿ ಮಾತನಾಡಿದ ಸುದೀಪ್​ಗೆ ಅಭಿನಂದನೆಗಳು’ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಚಿತ್ರರಂಗದವರಿಂದಲೂ ಸುದೀಪ್​ಗೆ ಬೆಂಬಲ ಸಿಗುತ್ತಿದೆ. ನಟಿ ರಮ್ಯಾ ಸೇರಿ ಸಾಕಷ್ಟು ಮಂದಿ ಸುದೀಪ್ ಪರ ಟ್ವೀಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಧನಂಜಯಗೆ ಸುದೀಪ್ ಸ್ಪೆಷಲ್ ಟ್ರೀಟ್​; ಕಿಚ್ಚನ ಕೈರುಚಿ ಸವಿದ ಡಾಲಿ ಫುಲ್​ ಖುಷ್

ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ; ಹಿಂದಿ ಬಗ್ಗೆ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿ ಸಿಎಂ ಬೊಮ್ಮಾಯಿ