ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ

Updated on: Aug 30, 2026 | 10:22 AM

ನಟ ಚಿಕ್ಕಣ್ಣ ಅವರ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಈ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಶುಭಕೋರಿದ್ದಾರೆ. ನಟರಾದ ಮಂಡ್ಯ ರಮೇಶ್, ಡಾಲಿ ಧನಂಜಯ, ನಿರ್ದೇಶಕ ಎ.ಪಿ. ಅರ್ಜುನ್ ಮುಂತಾದವರು ಈ ಕ್ಷಣಕ್ಕೆ ಸಾಕ್ಷಿ ಆಗಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ.

ನಟ ಚಿಕ್ಕಣ್ಣ (Chikkanna) ಅವರ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಈ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಶುಭಕೋರಿದ್ದಾರೆ. ನಟರಾದ ಮಂಡ್ಯ ರಮೇಶ್, ಡಾಲಿ ಧನಂಜಯ, ನಿರ್ದೇಶಕ ಎ.ಪಿ. ಅರ್ಜುನ್ ಮುಂತಾದವರು ಈ ಕ್ಷಣಕ್ಕೆ ಸಾಕ್ಷಿ ಆಗಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಮಂಡ್ಯ ರಮೇಶ್, ‘ಕರ್ನಾಟಕದ ದಿಗ್ಗಜ ನಟರು ಮದುವೆಗೆ ಬರುವ ರೀತಿಯಲ್ಲಿ ಚಿಕ್ಕಣ್ಣ ಬೆಳೆದಿದ್ದಾರೆ. ಜನರು ತುಂಬಿರುವುದು ನೋಡಿದರೆ ಆ ಪ್ರೀತಿ ಏನೆಂಬುದು ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ. ‘ನಮ್ಮ ಚಿಕ್ಕಣ್ಣ ಮದುವೆ ಆಗುತ್ತಿರುವುದಕ್ಕೆ ಬಹಳ ಖುಷಿ ಆಗಿದೆ. ಅವರ ವೈವಾಹಿಕ ಜೀವನ ತುಂಬ ಚೆನ್ನಾಗಿರಲಿ ಅಂತ ವಿಶ್ ಮಾಡುತ್ತೇನೆ. ಫ್ಯಾಮಿಲಿ ಲೈಫ್ ಚೆನ್ನಾಗಿ ಇರುತ್ತದೆ’ ಎಂದು ಡಾಲಿ ಧನಂಜಯ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು (ಆಗಸ್ಟ್ 30) ಒಕ್ಕಲಿಗ ಸಂಪ್ರದಾಯದಂತೆ ಪಾವನಾ ಜೊತೆ ಚಿಕ್ಕಣ್ಣ ಅವರ ಮದುವೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More