ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..

Updated on: Dec 28, 2025 | 2:25 PM

ನಟ ಡಾಲಿ ಧನಂಜಯ್ ಅವರು ಬೆಳಗಾವಿ ಉತ್ಸವಕ್ಕೆ ತೆರಳಿದ್ದಾರೆ. ಆ ಅವರು ವೇದಿಕೆಯಲ್ಲಿ ಮಾತನಾಡಿದ ವಿಡಿಯೋ ಇಲ್ಲಿದೆ. ಸಿನಿಮಾದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ‘ಸುಬ್ಬಿ ಅಂಕಲ್​​ನ ಹೊಡಿತೀನಿ ಸುಬ್ಬಿ’ ಎನ್ನುವ ಡೈಲಾಗ್ ಹೇಳಿದಾಗ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿದರು.

ನಟ ಡಾಲಿ ಧನಂಜಯ್ ಅವರು ಬೆಳಗಾವಿ ಉತ್ಸವಕ್ಕೆ (Belagavi Utsava) ತೆರಳಿದ್ದಾರೆ. ಅವರು ವೇದಿಕೆಯಲ್ಲಿ ಮಾತನಾಡಿದ ವಿಡಿಯೋ ಇಲ್ಲಿದೆ. ಸಿನಿಮಾದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ‘ಈ ಜನಸಾಗರ ನೋಡಿ ಬಹಳ ಖುಷಿ ಆಯಿತು. ಪ್ರತಿ ಬಾರಿ ಇಲ್ಲಿಗೆ ಬಂದಿದ್ದೇನೆ. ಆದರೆ ಈ ಬಾರಿ ಸೇರಿದ್ದಷ್ಟು ಜನರನ್ನು ನಾನು ನೋಡಿಲ್ಲ. ಬಹಳ ಚೆನ್ನಾಗಿ ಆಯೋಜನೆ ಮಾಡಿದ್ದಾರೆ. ಎಲ್ಲರೂ ಸೇರಿ ಪ್ರೀತಿಯಿಂದ ಮಾಡಿದಾಗ ಎಷ್ಟು ಖುಷಿಯಿಂದ ಜನರು ಸೇರುತ್ತಾರೆ ಎಂಬುದಕ್ಕೆ ಬೆಸ್ಟ್ ಉದಾಹರಣೆ ಇದು. ಬೆಳಗಾವಿಯಲ್ಲಿ ಕನ್ನಡದ ಉತ್ಸವಕ್ಕೆ ಇಷ್ಟು ಜನರು ಸೇರಿರುವುದು ಬಹಳ ಖುಷಿ’ ಎಂದು ಡಾಲಿ ಧನಂಜಯ (Daali Dhananjaya) ಅವರು ಹೇಳಿದರು. ಅಲ್ಲದೇ ‘ಸುಬ್ಬಿ ಅಂಕಲ್​​ನ ಹೊಡಿತೀನಿ ಸುಬ್ಬಿ’ ಎನ್ನುವ ಡೈಲಾಗ್ ಹೇಳಿದಾಗ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 28, 2025 01:27 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More