ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ಹತ್ಯಾಕಾಂಡಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಶ್ರೀಮುರಳಿ

Updated on: Apr 27, 2025 | 2:40 PM

26 ಜನರ ಪ್ರಾಣಹಾನಿಗೆ ಕಾರಣವಾದ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಈಗಾಗಲೇ ಅನೇಕ ನಟ-ನಟಿಯರು ಮಾತನಾಡಿದ್ದಾರೆ. ಈಗ ಸ್ಯಾಂಡಲ್​ವುಡ್​ ನಟ ಶ್ರೀಮುರಳಿ ಕೂಡ ಈ ಕುರಿತು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವರು ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದರು.

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿ ಬಗ್ಗೆ ನಟ ಶ್ರೀಮುರಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಉಗ್ರರ ದಾಳಿಗೆ ಜನರು ಪ್ರಾಣ ಕಳೆದುಕೊಂಡಿದ್ದಕ್ಕೆ ನನಗೆ ಬಹಳ ನೋವು ಉಂಟಾಗಿದೆ. ಇದನ್ನು ಯಾರು ಮಾಡಿದ್ದಾರೋ ಅವರನ್ನೆಲ್ಲ ಹುಡುಕಿಕೊಂಡು ಹೋಗಿ ಅಂತ್ಯ ಮಾಡಬೇಕು. ಬೇರೆ ರೀತಿಯಲ್ಲಿ ನಾವು ಹೇಳುವುದು ಬೇಡ. ಅದಕ್ಕೆ ಒಂದು ಕಾನೂನು, ಸರ್ಕಾರ ಇದೆ. ಅವರು ನೋಡಿಕೊಳ್ಳುತ್ತಾರೆ. ಭಾರತೀಯ ಪ್ರಜೆಯಾಗಿ ಹೇಳಬೇಕು ಎಂದರೆ, ಮೈಯಲ್ಲಿ ರಕ್ತ ಕುದಿಯುತ್ತಿದೆ. ಅವರನ್ನು ಸಂಹಾರ ಮಾಡುವವರೆಗೆ ನಮಗೆ ನೆಮ್ಮದಿ ಇಲ್ಲ. ಅಮಾಯಕರ ಜೀವ ತೆಗೆದಿದ್ದಕ್ಕೆ ಅವರನ್ನು ನಾಶ ಮಾಡಬೇಕು. ಜೈ ಹಿಂದ್’ ಎಂದು ಶ್ರೀಮುರಳಿ (Srimurali) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.