ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ ಸೈಬರ್ ಖದೀಮರಿಂದ 4 ಲಕ್ಷ ರೂಪಾಯಿ ವಂಚನೆ

Updated By: ಮದನ್​ ಕುಮಾರ್​

Updated on: Sep 29, 2025 | 7:04 PM

ಸ್ಯಾಂಡಲ್​ವುಡ್​ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ ವಂಚನೆ ಆಗಿದೆ. ‘ರಕ್ತ ಕಾಶ್ಮೀರ’ ಚಿತ್ರದ ಡಬ್ಬಿಂಗ್ ವ್ಯವಹಾರದ ನೆಪದಲ್ಲಿ ಬಂದ ಸೈಬರ್ ಖದೀಮರು 4 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದಾರೆ. ಈ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಟಿವಿ9 ಜತೆ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರಿಗೆ ವಂಚನೆ ಆಗಿದೆ. ‘ರಕ್ತ ಕಾಶ್ಮೀರ’ ಸಿನಿಮಾದ ಡಬ್ಬಿಂಗ್ ವ್ಯವಹಾರದ ನೆಪದಲ್ಲಿ ಬಂದ ಸೈಬರ್ ಕ್ರಿಮಿನಲ್​​ಗಳು 4 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದಾರೆ. ಈ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ವಂಚನೆ ಹೇಗೆ ನಡೆಯಿತು ಎಂಬುದನ್ನು ವಿವರಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಸೈಬರ್ (Cyber Crime) ವಂಚಕರಿಂದ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಆಗಿತ್ತು. ಈಗ ರಾಜೇಂದ್ರ ಸಿಂಗ್ ಬಾಬು ಅವರಿಗೆ ಮೋಸ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.