‘ಲತಾ ಮಂಗೇಶ್ಕರ್ ಹಾಡುಗಳು ಔಷಧಿ ಇದ್ದಂತೆ’; ಖ್ಯಾತ ಗಾಯಕಿಗೆ ನುಡಿ ನಮನ ಸಲ್ಲಿಸಿದ ಕೆ. ಕಲ್ಯಾಣ್
ಲತಾ ಮಂಗೇಶ್ಕರ್ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಮಹಾನ್ ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಲತಾಜೀ ಬಗ್ಗೆ ಕೆ. ಕಲ್ಯಾಣ್ ಆಡಿದ ಮಾತುಗಳು ಇಲ್ಲಿವೆ..
ಲತಾ ಮಂಗೇಶ್ಕರ್ (Lata Mangeshkar) ಅವರು ಹೆಚ್ಚಾಗಿ ಹಾಡಿದ್ದು ಹಿಂದಿಯಲ್ಲಾದರೂ ಎಲ್ಲ ಭಾಷೆಯ ಕೇಳುಗರಿಗೂ ಅವರೆಂದರೆ ಸಖತ್ ಇಷ್ಟ. ಇಂದು (ಫೆ.6) ಅವರ ನಿಧನದ (Lata Mangeshkar Death) ಸುದ್ದಿ ಕೇಳಿ ಎಲ್ಲರಿಗೂ ನೋವುಂಟಾಗಿದೆ. ಈ ಸಂದರ್ಭದಲ್ಲಿ ಖ್ಯಾತ ಗೀತರಚನಕಾರ, ಸಂಗೀತ ನಿರ್ದೇಶಕ ಕೆ. ಕಲ್ಯಾಣ್ (K Kalyan) ಅವರು ಲತಾಜೀ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮಹಾನ್ ಗಾಯಕಿಯ ಸಾಧನೆಗಳನ್ನು ಅವರು ಕೊಂಡಾಡಿದ್ದಾರೆ. ‘ಲಾತಾಜೀ ಎಂದರೆ ಕೋಗಿಲೆಗಳ ಸಾಮ್ರಾಜ್ಯದ ಮಹಾರಾಣಿ, ಮಹಾದೇವತೆ. ಇಡೀ ಸಂಗೀತ ಪ್ರಪಂಚದ ಕಿರೀಟ ಅವರು. ಅವರ ಒಂದೊಂದು ಹಾಡುಗಳನ್ನು ನಮ್ಮನ್ನು ಮನರಂಜಿಸಿವೆ ಅನ್ನೋದಕ್ಕಿಂತಲೂ ನಮ್ಮೊಳಗೆ ಔಷಧೀಯ ಗುಣಗಳನ್ನು ತುಂಬಿವೆ. ಅವರ ಪ್ರತಿ ಹಾಡು ಕೂಡ ಔಷಧಿ. ಅವರ ಹಾಡನ್ನು ಕೇಳುತ್ತಿದ್ದರೆ ಎಷ್ಟೋ ಕಾಯಿಲೆಗಳು ವಾಸಿ ಆಗುತ್ತವೆ. ಮನಸ್ಸಿನ ಎಷ್ಟೋ ಕ್ಲೀಷೆಗಳು ನಾಶವಾಗುತ್ತವೆ. ಅಂಥ ಒಂದು ದೈವಿಕ ಕಂಠ ಅವರದ್ದು. ಆ ಮಹಾನ್ ಗಾನ ಸರಸ್ವತಿ ಈಗ ಇಲ್ಲ ಎಂದಾಗ ಬಹಳ ದುಃಖ ಆಗುತ್ತದೆ’ ಎಂದು ಕೆ. ಕಲ್ಯಾಣ್ ಹೇಳಿದ್ದಾರೆ. ಅದೇ ರೀತಿ ಕನ್ನಡ ಚಿತ್ರರಂಗದ ಅನೇಕರು ಲತಾ ಮಂಗೇಶ್ಕರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶಿವರಾಜ್ಕುಮಾರ್, ರಮೇಶ್ ಅರವಿಂದ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಇದನ್ನೂ ಓದಿ:
ಲತಾ ಮಂಗೇಶ್ಕರ್ ಜತೆ ಬಾಲಿವುಡ್ ತಾರೆಯರ ಸವಿ ನೆನಪು; ಆ ಕ್ಷಣಗಳನ್ನು ನೆನಪಿಸಿದ ಫೋಟೋಗಳು
‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ