ಮಾಜಿ ಸಂಸದ ಚಲ್ಲಕುಮಾರ್ ಮತ್ತು ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿಗೆ ಗೃಹಸಚಿವರನ್ನು ಭೇಟಿಯಾಗುವ ಅವಕಾಶ ನಿರಾಕರಣೆ!

|

Updated on: Jun 22, 2024 | 11:48 AM

ಆದರೆ, ಅವರೊಂದಿಗೆ ಸ್ವಲ್ಪ ಹೊತ್ತು ವಾದಿಸುವ ಚಲ್ಲಕುಮಾರ್ ಮತ್ತು ಕೊಂಡಜ್ಜಿ ದುರ್ದಾನ ತೆಗೆದುಕೊಂಡವರ ಹಾಗೆ ಪೊಲೀಸರನ್ನು ಶಪಿಸುತ್ತಾ ಅಲ್ಲಿಂದ ನಿರ್ಗಮಿಸುತ್ತಾರೆ. ಆದರೆ, ಗಮನಿಸಬೇಕಾದ ಮತ್ತು ಅಚ್ಚರಿ ಹುಟ್ಟಿಸುವ ಸಂಗತಿಯೇನೆಂದರೆ ಸೆಕ್ಯುರಿಟಿಯವರು ಮಾಜಿ ಶಾಸಕ ರಾಜೂಗೌಡರನ್ನು ಒಳಗೆ ಬಿಡುತ್ತಾರೆ!

ಬೆಂಗಳೂರು: ಕೆಲವು ಸಲ ನಮ್ಮ ಗಣ್ಯರನ್ನು ಮತ್ತು ಅವರ ಮನೋಭಾವವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವರು ವಿಚಿತ್ರವಾಗಿ ವರ್ತಿಸುವ ಸಂದರ್ಭಗಳನ್ನು ನಾವು ಹಿಂದೆಯೂ ವರದಿ ಮಾಡಿದ್ದೇವೆ. ಇವತ್ತು ಬೆಳಗ್ಗೆ ಬೆಂಗಳೂರಲ್ಲಿ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಅವರ ಮನೆ ಮುಂದೆ ನಡೆದ ದೃಶ್ಯವನ್ನು ಗಮನಿಸಿ. ಸಚಿವರನ್ನು ಭೇಟಿಯಾಗಲು ಮಾಜಿ ಸಂಸದ ಚಲ್ಲಕುಮಾರ್ (Challakumar) ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ (Mohan Kondajji) ಬಂದಿದ್ದಾರೆ. ಇವರಿಬ್ಬರು ಪರಮೇಶ್ವರ್ ಭೇಟಿಯಾಗಲು ಅಪಾಂಯಿಂಟ್ಮೆಂಟ್ ತೆಗೆದುಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ. ಅದ್ಯಾವ ಕಾರಣಕ್ಕೋ? ಸಚಿವರ ನಿವಾಸದ ಬಳಿ ಭದ್ರತೆ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ಚಲ್ಲಕುಮಾರ್ ಮತ್ತು ಕೊಂಡಜ್ಜಿ ಅವರನ್ನು ಒಳಗಡೆ ಪ್ರವೇಶಿಸಿದಂತೆ ತಡೆಯುತ್ತಾರೆ ಮತ್ತು ಅವರನ್ನು ಒಳಗಡೆ ಹೋಗಲು ಬಿಡೋದಿಲ್ಲ. ಯಾರನ್ನೂ ಒಳಗೆ ಬಿಡಕೂಡದೆಂಬ ಆದೇಶವನ್ನು ಪೊಲೀಸರು ಪಾಲಿಸುತ್ತಿದ್ದರೆ? ಇರಬಹುದು. ಆದರೆ, ಅವರೊಂದಿಗೆ ಸ್ವಲ್ಪ ಹೊತ್ತು ವಾದಿಸುವ ಚಲ್ಲಕುಮಾರ್ ಮತ್ತು ಕೊಂಡಜ್ಜಿ ದುರ್ದಾನ ತೆಗೆದುಕೊಂಡವರ ಹಾಗೆ ಪೊಲೀಸರನ್ನು ಶಪಿಸುತ್ತಾ ಅಲ್ಲಿಂದ ನಿರ್ಗಮಿಸುತ್ತಾರೆ. ಆದರೆ, ಗಮನಿಸಬೇಕಾದ ಮತ್ತು ಅಚ್ಚರಿ ಹುಟ್ಟಿಸುವ ಸಂಗತಿಯೇನೆಂದರೆ ಸೆಕ್ಯುರಿಟಿಯವರು ಮಾಜಿ ಶಾಸಕ ರಾಜೂಗೌಡರನ್ನು ಒಳಗೆ ಬಿಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಂಜಲಿ ತಂಗಿಗೆ ಶಿಕ್ಷಣ, ಮನೆ ಮತ್ತು ನೌಕರಿಯ ಭರವಸೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್

Follow us on