ಗೃಹ ಸಚಿವ ಜಿ ಪರಮೇಶ್ವರ್​​ ಹೇಳಿಕೆ ಭಾರತ ವಿರೋಧಿ, ದುಃಖಕರ, ಆತಂಕಕಾರಿ: ಗೌರವ್ ಭಾಟಿಯಾ

ಗೃಹ ಸಚಿವ ಜಿ ಪರಮೇಶ್ವರ ಅವರು ಭಾರತ ವಿರೋಧಿ, ದುಃಖಕರ ಮತ್ತು ಆತಂಕಕಾರಿ ಹೇಳಿಕೆ ನೀಡಿದ್ದಾರೆ, ಅವರು ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ಪುಲ್ವಾಮಾ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಇದು ನಂಬಲಾಗದು. ಇದು ಕಾಂಗ್ರೆಸ್‌ನ ಗುಣವನ್ನು ತೋರಿಸುತ್ತದೆ. ಕಾಂಗ್ರೆಸ್​​​ ಇಂದು ಭಾರತ ವಿರೋಧಿ ಪಕ್ಷವಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ ಅವರ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ್​​ ಹೇಳಿಕೆ ಭಾರತ ವಿರೋಧಿ, ದುಃಖಕರ, ಆತಂಕಕಾರಿ: ಗೌರವ್ ಭಾಟಿಯಾ
Follow us
|

Updated on:Apr 06, 2024 | 3:26 PM

ದೆಹಲಿ. ಎ.06: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವರದಿ ಸಲ್ಲಿಸುವ ಗುಪ್ತಚಾರ ಇಲಾಖೆ, ಅವರ ಸೂಚನೆಯ ಮೇರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳನ್ನು ಕೊಲ್ಲುತ್ತಿದೆ ಎಂದು ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ವರದಿ ಮಾಡಿದ ನಂತರ ಕರ್ನಾಟಕದ ಗೃಹಸಚಿವ ಡಾ. ಜಿ ಪರಮೇಶ್ವರ್ (G Parameshwar) ​​​ ಅವರು ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಭಾರತದಲ್ಲಿ ನಡೆದ ಪುಲ್ವಾಮಾ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ನಿರ್ದೇಶನದಂತೆ ಈ ದಾಳಿಯನ್ನು ನಡೆಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೀಗ ಡಾ. ಜಿ ಪರಮೇಶ್ವರ್ ಅವರು ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ(Gaurav Bhatia) ಅವರು ಖಡಕ್​​ ಉತ್ತರ​​ ನೀಡಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ ಅವರು ಭಾರತ ವಿರೋಧಿ, ದುಃಖಕರ ಮತ್ತು ಆತಂಕಕಾರಿ ಹೇಳಿಕೆ ನೀಡಿದ್ದಾರೆ, ಅವರು ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ಪುಲ್ವಾಮಾ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಇದು ನಂಬಲಾಗದು. ಇದು ಕಾಂಗ್ರೆಸ್‌ನ ಗುಣವನ್ನು ತೋರಿಸುತ್ತದೆ. ಕಾಂಗ್ರೆಸ್​​​ ಇಂದು ಭಾರತ ವಿರೋಧಿ ಪಕ್ಷವಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ ಅವರ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.

ಈ ಹಿಂದೆ ಬಾಲಕೋಟ್ ವೈಮಾನಿಕ ದಾಳಿ ಬಗ್ಗೆ ಕಾಂಗ್ರೆಸ್, ಎಸ್‌ಪಿ ಮತ್ತು ಎಎಪಿಯಂತಹ ಪಕ್ಷಗಳು ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿ ಪುರಾವೆ ಕೇಳಿದರು. ಶತ್ರು ರಾಷ್ಟ್ರದ ಸಂಬಂಧಗಳು ಹಾಗೇ ಇರಬೇಕು ಎಂದು ರಣದೀಪ್ ಸುರ್ಜೆವಾಲಾ ಅವರು ಇದನ್ನು ಸ್ವದೇಶಿ ಭಯೋತ್ಪಾದನೆ ಎಂದು ಕರೆದಿದ್ದರು. ಇದೀಗ ಅದೇ ಭಾರತ ವಿರೋಧಿ ಮನಸ್ಥಿತಿ ಜಿ ಪರಮೇಶ್ವರ ಅವರ ಹೇಳಿಕೆಯ ಮೂಲಕ ಬಹಿರಂಗವಾಗಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಹೇಳಿಕೆಗೆ ಸ್ಥಾನವಿಲ್ಲ ಮತ್ತು ಕಾಂಗ್ರೆಸ್‌ಗೆ ಈ ನಿಲುವು ಇದ್ದರೆ, ಕಾಂಗ್ರೆಸ್​​ ಕಾರ್ಯಗಳಿಗೆ ಭಾರತದಲ್ಲಿ ಸ್ಥಾನವಿಲ್ಲ. ನೀವು ಭಾರತೀಯ ಸೇನೆಯಿಂದ ಪುರಾವೆ ಕೇಳಿದ್ದೀರಿ, ಈಗ ಭಾರತದ ಜನರು ನೀವು (ಕಾಂಗ್ರೆಸ್​​​) ಭಾರತೀಯನೋ ಅಲ್ಲವೋ ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಹತ್ಯೆಗೂ ಮೋದಿಗೂ ಸಂಬಂಧವಿದೆ ಎಂದ ಬ್ರಿಟಿಷ್ ಪತ್ರಿಕೆ, ಭಾರತ ಪ್ರತಿಕ್ರಿಯಿಸಿದ್ದು ಹೀಗೆ

ಜಿ ಪರಮೇಶ್ವರ ಅವರು ಕೇಂದ್ರದ ಸೂಚನೆ ಮೇರೆಗೆ ಪಿತೂರಿಯ ಭಾಗವಾಗಿ ಪುಲ್ವಾಮಾ ಘಟನೆ ನಡೆದಿದೆಯೇ ಎಂಬ ಅನುಮಾನವಿದೆ ಎಂದು ಅವರು ಹೇಳಿದರು. ಇದನ್ನು ಚುನಾವಣಾ ತಂತ್ರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಈ ವಿಚಾರ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್​​​ ಆರೋಪ ಪ್ರತ್ಯಾರೋಪ ಮಾಡುತ್ತಿದೆ. ಪುಲ್ವಾಮಾ ದಾಳಿಯ ನಂತರ ಭಾರತ ತನ್ನ ತಂತ್ರವನ್ನು ಬದಲಿಸಿ ಶತ್ರುಗಳ ಸ್ಥಾನಕ್ಕೆ ನುಗ್ಗಿ ಶತ್ರುಗಳನ್ನು ಕೊಂದಿದೆ ಎಂಬ ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ನಲ್ಲಿ ಪ್ರಕಟವಾದ ವರದಿಗೆ ಜಿ ಪರಮೇಶ್ವರ ಪ್ರತಿಕ್ರಿಯಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:45 pm, Sat, 6 April 24

ತಾಜಾ ಸುದ್ದಿ