ಸೀನಿಯರ್ ಮಾತು ಹಾಗಿರಲಿ, 1985ರಲ್ಲಿ ನಾನು ಸಾತನೂರುನಿಂದ ಸ್ಪರ್ಧಿಸಿದ್ದರೆ ಶಿವಕುಮಾರ್ ಯಾವತ್ತೂ ಶಾಸಕನಾಗುತ್ತಿರಲಿಲ್ಲ: ಕುಮಾರಸ್ವಾಮಿ

|

Updated on: Jun 25, 2024 | 1:28 PM

ಆಗ ದೇವೇಗೌಡರು ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರು ಮತ್ತು ಸಾತನೂರು ಕ್ಷೇತ್ರವನ್ನು ತೆರವು ಮಾಡಿ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿ ಎಂದು ಆಗಿನ ಜನತಾ ಪಕ್ಷದ ಮುಖಂಡರ ಮಾತನ್ನು ಅವರು ಆಲಿಸಿದ್ದರೆ ಮತ್ತು ತಾನು ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರೆ (1985ರಲ್ಲಿ) ಶಿವಕುಮಾರ್ ಯಾವತ್ತೂ ಶಾಸಕನಾಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ದೆಹಲಿ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವೆ ಮಾತಿನ ಕಾಳಗ ಮುಂದುವರಿದಿದೆಯಾದರೂ ಇಬ್ಬರೂ ಟೋನ್ ಡೌನ್ ಮಾಡಿರೋದು ಗಮನಾರ್ಹ. ಈಗ ಅವರ ನಡುವೆ ಸೀನಿಯಾರಿಟಿಗೆ (seniority) ಸಂಬಂಧಿಸಿದಂತೆ ವಾಗ್ವಾದ ನಡೆಯುತ್ತಿದೆ. ರಾಜಕಾರಣದಲ್ಲಿ ಕುಮಾರಸ್ವಾಮಿಗಿಂತ ತಾನು ಹತ್ತು ವರ್ಷ ಸೀನಿಯರ್ ಅಂತ ಶಿವಕುಮಾರ್ ಹೇಳಿರುವುದಕ್ಕೆ ದೆಹಲಿಯಲ್ಲಿಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, 1985ರಲ್ಲಿ ಹೆಚ್ ಡಿ ದೇವೇಗೌಡರ ವಿರುದ್ಧ ಶಿವಕುಮಾರ್ ಸ್ಪರ್ಧಿಸಿದ್ದಾಗ ಸಾತನೂರು ವಿಧಾನಸಭಾ ಕ್ಷೇತ್ರದ ಉಸ್ತವಾರಿಹಿಸಿಕೊಂಡಿದ್ದು ತಾನು, ಅಗಲೇ ತಾನು ಕ್ಷೇತ್ರದ ಎಲ್ಲ ಹಳ್ಳಿಗಳ ಜನರ ಪರಿಚಯ ಮಾಡಿಕೊಂಡಿದ್ದೆ. ಆಗ ದೇವೇಗೌಡರು ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರು ಮತ್ತು ಸಾತನೂರು ಕ್ಷೇತ್ರವನ್ನು ತೆರವು ಮಾಡಿ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿ ಎಂದು ಆಗಿನ ಜನತಾ ಪಕ್ಷದ ಮುಖಂಡರ ಮಾತನ್ನು ಅವರು ಆಲಿಸಿದ್ದರೆ ಮತ್ತು ತಾನು ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರೆ (1985ರಲ್ಲಿ) ಶಿವಕುಮಾರ್ ಯಾವತ್ತೂ ಶಾಸಕನಾಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣದಲ್ಲಿ ನಿನ್ನೆ ಶಿವಕುಮಾರ್ ಜನಸ್ಪಂದನ ಕಾರ್ಯಕ್ರಮ ನಡೆಸಿ ಜನರ ಕುಂದುಕೊರತೆಗಳನ್ನು ಆಲಿಸಿದಕ್ಕೆ ಆಭಾರಿಯಾಗಿದ್ದೇನೆಂದ ಕುಮಾರಸ್ವಾಮಿ, ಈಗಲಾದರೂ ಅವರಿಗೆ ಚನ್ನಪಟ್ಟಣ ನೆನಪಾಗಿದೆಯಲ್ಲ ಅಂತ ಸಂತೋಷಿಸುತ್ತೇನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯದಲ್ಲಿ ಕುಮಾರಸ್ವಾಮಿಯವರ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣನ ಫೋಟೋಗೆ ಜಾಗವಿಲ್ಲ!

Follow us on