ನ್ಯಾಯಾಲಯದಲ್ಲಿ ರಿಟ್ ಅರ್ಜಿ ಪುಸ್ಕೃತಗೊಂಡರೆ ದರ್ಶನ್ ಮತ್ತು ಇತರ ಆರೋಪಿಗಳ ಬಿಡುಗಡೆ ಖಚಿತವಾದಂತೆ: ದರ್ಶನ್ ವಕೀಲ

|

Updated on: Jun 22, 2024 | 7:55 PM

ಏತನ್ಮಧ್ಯೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದರ್ಶನ್ ವಕೀಲ, ವಿಚಾರಾಧೀನ ಕೈದಿಗಳನ್ನು (under trials) ಬೇರೆ ಬೇರೆ ಜೈಲಿನಲ್ಲಿರಿಸುವ ಬಗ್ಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ, ಅರ್ಜಿಗಳ ವಿಚಾರಣೆಯನ್ನು ನ್ಯಾಯಾಧೀಶರು ಸೋಮವಾರ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಿದರು.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (actor Darshan) ಮತ್ತು ಇತರ ಆರೋಪಿಗಳಿಳೊಹೆ
ಬೆಂಗಳೂರಿನ 24ನೇ ಎಸಿಎಂಎಂ ಜಡ್ಜ್ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಅವರನ್ನು ಪರಪ್ಪನ ಆಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ (central jail) ಒಯ್ಯಲಾಗಿದೆ. ಏತನ್ಮಧ್ಯೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದರ್ಶನ್ ವಕೀಲ, ವಿಚಾರಾಧೀನ ಕೈದಿಗಳನ್ನು (under trials) ಬೇರೆ ಬೇರೆ ಜೈಲಿನಲ್ಲಿರಿಸುವ ಬಗ್ಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ, ಅರ್ಜಿಗಳ ವಿಚಾರಣೆಯನ್ನು ನ್ಯಾಯಾಧೀಶರು ಸೋಮವಾರ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಿದರು. ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿರುವ ಕೆಲ ಅರೋಪಿಗಳಿಗೆ ದರ್ಶನ್ ಅಭಿಮಾನಿ ಕೈದಿಗಳಿಂದ ಜೀವಬೆದರಿಕೆ ಇರೋದ್ರಿಂದ ಅವರನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಮುಂದುವರಿದು ಮಾತಾಡಿದ ದರ್ಶನ್ ವಕೀಲ, ಜಾಮೀನು ಅರ್ಜಿಯನ್ನು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಬೇಕು ಮತ್ತು ರಿಟ್ ಅರ್ಜಿಯು ನ್ಯಾಯಾಲಯದಲ್ಲಿ ಪುರಸ್ಕೃತಗೊಂಡರೆ ಅರೋಪಿಗಳ ಬಿಡುಗಡೆ ಖಚಿತವಾದಂತೆಯೇ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರೇಣುಕಾ ಸ್ವಾಮಿ ಹತ್ಯೆ ಪ್ರಕರಣ: ಪಟ್ಟಣಗೆರೆ ಶೆಡ್​ ಮಾಲೀಕರಿಗೆ ಬಿಬಿಎಂಪಿ ನೋಟಿಸ್; ಕಾರಣ?

Published on: Jun 22, 2024 06:57 PM