ಕಳೆದೊಂದು ವರ್ಷದಲ್ಲಿ ಕಳೆದುಕೊಂಡಿದ್ದೇನು ಅನ್ನೋದು ಚಿಕ್ಕಬಳ್ಳಾಪುರ ಜನ ಅರ್ಥಮಾಡಿಕೊಂಡಿದ್ದಾರೆ: ಡಾ ಕೆ ಸುಧಾಕರ್

|

Updated on: Jun 05, 2024 | 1:58 PM

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಇಬ್ಬರು ಸಚಿವರನ್ನೊಳಗೊಂಡಂತೆ 6 ಶಾಸಕರಿದ್ದರೂ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ದಿನವಿಡೀ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ಜನ ತನ್ನನ್ನು ಗೆಲ್ಲಿಸಿದ್ದಾರೆ, ಅವರು ತನ್ನ ಮೇಲಿಟ್ಟರಿರುವ ವಿಶ್ವಾಸ ದೊಡ್ಡದು, ಜನರ ಪ್ರೀತಿಗೆ ತಾನು ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ಸುಧಾಕರ್ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಾ ಕೆ ಸುಧಾಕರ್ (Dr K Sudhakar), ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಬಗ್ಗೆ ಕೇಳಿದ ಪ್ರಶ್ನೆಗೆ ಆ ಪ್ರಬುದ್ಧ ರಾಜಕಾರಣಿ ಬಗ್ಗೆ ಮಾತಾಡಲ್ಲ ಎಂದು ಕುಹುಕವಾಡಿದರು. ತಮ್ಮ ಗೆಲುವಿನ ಬಗ್ಗೆ ಮಾತಾಡಿದ ಡಾ ಸುಧಾಕರ್, ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಿನ (shock defeat) ನಂತರದ ಒಂದು ವರ್ಷದ ಅವಧಿಯಲ್ಲಿ ಜನ ತಾವೇನು ಕಳೆದುಕೊಂಡಿದ್ದೆವು ಅನ್ನೋದನ್ನು ಅರ್ಥಮಾಡಿಕೊಂಡಿದ್ದಾರೆ. ಈಗ ಕ್ಷೇತ್ರದ ವ್ಯಾಪ್ತಿ ಹೆಚ್ಚಾಗಿದೆ, 8 ವಿಧಾನಸಭಾ ಕ್ಷೇತ್ರಗಳಲ್ಲಿ ಸೇವೆ ಮಾಡುವ ಸೌಭಾಗ್ಯ ತನಗೆ ಸಿಕ್ಕಿದೆ, ತನ್ನ ದೃಷ್ಟಿ ಕೇವಲ ಅಭೀವೃದ್ಧಿ ಮೇಲಿದೆ, ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ನಿಷ್ಠೆಯಿಂದ ಕೆಲಸ ಮಾಡುವೆ ಎಂದು ಸುಧಾಕರ್ ಹೇಳಿದರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಇಬ್ಬರು ಸಚಿವರನ್ನೊಳಗೊಂಡಂತೆ 6 ಶಾಸಕರಿದ್ದರೂ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ದಿನವಿಡೀ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ಜನ ತನ್ನನ್ನು ಗೆಲ್ಲಿಸಿದ್ದಾರೆ, ಅವರು ತನ್ನ ಮೇಲಿಟ್ಟರಿರುವ ವಿಶ್ವಾಸ ದೊಡ್ಡದು, ಜನರ ಪ್ರೀತಿಗೆ ತಾನು ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ಸುಧಾಕರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದೇಶದ ಅಖಂಡತೆ ಮತ್ತು ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಅಂತ ಜನಕ್ಕೆ ಅರ್ಥವಾಗಿದೆ: ಡಾ ಕೆ ಸುಧಾಕರ್

Follow us on