ಒಂದೇ ಮಳೆಗೆ ಕೆರೆಯಂತಾದ ಹೊನ್ನಾಳಿಯ ಖಾಸಗಿ ಬಸ್ ನಿಲ್ದಾಣ, ಶಾಸಕ ಶಾಂತನಗೌಡರೇ ಈ ಕಡೆ ಬರಬೇಡಿ!

|

Updated on: Jun 07, 2024 | 5:28 PM

ಬಸ್ ನಿಲ್ಧಾಣದಲ್ಲಿ ಈ ಪಾಟಿ ನೀರು ಹರಿದು ಬಂದರೆ, ಮಹಿಳೆಯರು, ವಯಸ್ಸಾದವರು ಬಸ್ ಹತ್ತುವುದು ಹೇಗೆ ಶಾಂತನಗೌಡರೇ? ನಿಮ್ಮ ಮುಖ್ಯಮಂತ್ರಿ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರಂತೆ, ಹೋಗಿ ಸರತಿ ಸಾಲಲ್ಲಿ ನಿಂತು ಅನುದಾನ ಬಿಡುಗಡೆ ಮಾಡಿಸಿಕೊಂಡು ಕೆಲಸಗಳನ್ನ ಮಾಡಿಸಿ ಕೃತಾರ್ಥರಾಗಿ.

ದಾವಣಗೆರೆ: ವಿಡಿಯೋದ ಆರಂಭಿಕ ಭಾಗದಲ್ಲಿ ಕಾಣೋದು ಒಂದು ಬಸ್ ನಿಲ್ದಾಣ ಅಂತ ನಾವು ಹೇಳಿದರೆ ನೀವು ನಂಬಲೇಬೇಕು ಮಾರಾಯ್ರೇ. ಜಿಲ್ಲೆಯ ಹೊನ್ನಾಳಿ ಪಟ್ಟಣ (Honnali Town) ಚಿಕ್ಕ ಊರೇನೂ ಅಲ್ಲ. ಅದು ತಾಲ್ಲೂಕು ಕೇಂದ್ರ ಮತ್ತು ವಿಧಾನಸಭಾ ಕ್ಷೇತ್ರ. ಮೊದಲು ಬಿಜೆಪಿಯ ಎಂಪಿ ರೇಣುಕಾಚಾರ್ಯ (MP Renukacharya) ಪ್ರತಿನಿಧಿಸುತ್ತಿದ್ದರು ಮತ್ತು ಈಗ ಕಾಂಗ್ರೆಸ್ ಪಕ್ಷದ ಡಿಜಿ ಶಾಂತನಗೌಡ (DG Shantanagowda). ಇವರ ನಡುವೆ ಕೆಸರೆರಚಾಟ, ಮಣ್ಣೆರಚಾಟ, ನೀರೆರಚಾಟ ವಿಧಾನಸಭಾ ಚುನಾವಣೆನ ಸಮಯದಿಂದ ಜಾರಿಯಲ್ಲಿದೆ. ಹೊನ್ನಾಳಿಯಲ್ಲಿ ಇವತ್ತು ಭರ್ಜರಿ ಮಳೆಯಾಗಿದೆ. ದೃಶ್ಯದಲ್ಲಿ ಕಂಡಿದ್ದು ಖಾಸಗಿ ಬಸ್ ನಿಲ್ದಾಣವಂತೆ. ಖಾಸಗಿಯಾದರೇನು ಸರ್ಕಾರಿಯಾದರರೇನು? ಅಲ್ಲಿ ಓಡಾಡುವ ಜನ ಖಾಸಗಿಯವರಲ್ಲವಲ್ಲ? ಬಸ್ ನಿಲ್ಧಾಣದಲ್ಲಿ ಈ ಪಾಟಿ ನೀರು ಹರಿದು ಬಂದರೆ, ಮಹಿಳೆಯರು, ವಯಸ್ಸಾದವರು ಬಸ್ ಹತ್ತುವುದು ಹೇಗೆ ಶಾಂತನಗೌಡರೇ? ನಿಮ್ಮ ಮುಖ್ಯಮಂತ್ರಿ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರಂತೆ, ಹೋಗಿ ಸರತಿ ಸಾಲಲ್ಲಿ ನಿಂತು ಅನುದಾನ ಬಿಡುಗಡೆ ಮಾಡಿಸಿಕೊಂಡು ಕೆಲಸಗಳನ್ನ ಮಾಡಿಸಿ ಕೃತಾರ್ಥರಾಗಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗಿನಿಂದ ಯಡಿಯೂರಪ್ಪ ಬಗ್ಗೆ ಸೋಮಣ್ಣ ಹಗುರವಾಗಿ ಮಾತಾಡುತ್ತಿದ್ದಾರೆ: ಎಂಪಿ ರೇಣುಕಾಚಾರ್ಯ