ದೇವೇಗೌಡ ಕುಟುಂಬದ ಬಗ್ಗೆ ಜನರಲ್ಲಿ ಅನುಮಾನ ಹೆಚ್ಚಿಸಲು ಶಿವಕುಮಾರ್ ಶತ್ರು ಭೈರವಿ ಯಾಗ ಕತೆ ಕಟ್ಟಿದ್ದಾರೆ: ಕುಮಾರಸ್ವಾಮಿ
ಒಬ್ಬ ರಾಜ್ಯದ ಮುಖ್ಯಮಂತ್ರಿ ಹೀಗೆ ಕತೆಗಳನ್ನು ಕಟ್ಟುತ್ತಾರೆಂದರೆ, ಅವರಿಗೆ ತಮ್ಮ ಸ್ಥಾನದ ಘನತೆಯ ಬಗ್ಗೆ ಕಿಂಚಿತ್ತ್ತೂ ಕೂಡ ಗೌರವವಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಾನು ಸಹ ಪೂಜೆ ಸಲ್ಲಿಸಿದ್ದೇನೆಂದು ಹೇಳುವ ಶಿವಕುಮಾರ್ ಗೆ ಅಲ್ಲಿ ಪೂಜಾ ವಿಧಿಗಳು ಹೇಗೆ ನಡೆಯುತ್ತವೆ ಅಂತ ಗೊತ್ತಿಲ್ಲವೇ? ಅಂತ ಕುಮಾರಸ್ವಾಮಿ ಪ್ರಶ್ನಿಸಿದರು
ಬೆಂಗಳೂರು: ಪಕ್ಷದ ಅಭ್ಯರ್ಥಿಗಳ ಪರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯೊಂದನ್ನು ನಡೆಸಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹಲವಾರು ವಿಷಯಗಳ ಬಗ್ಗೆ ಮಾತಾಡಿದರು. ಕಳೆದ ಒಂದೂವರೆ-ಎರಡು ತಿಂಗಳುಗಳಿಂದ ಹೆಚ್ ಡಿ ದೇವೇಗೌಡರ (HD Devegowda) ಕುಟುಂಬವನ್ನು ಮುಗಿಸುವ ಕೆಲಸದಲ್ಲಿ ತೊಡಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಶತ್ರು ಭೈರವಿ ಯಾಗದ ಕಾಲ್ಪನಿಕ ಕತೆ ಸೃಷ್ಟಿಸಿ ಕುಟುಂಬದ ವಿರುದ್ಧ ಜನರ ಅನುಮಾನ ಹೆಚ್ಚಿಸುವ ಹುನ್ನಾರ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಒಬ್ಬ ರಾಜ್ಯದ ಮುಖ್ಯಮಂತ್ರಿ ಹೀಗೆ ಕತೆಗಳನ್ನು ಕಟ್ಟುತ್ತಾರೆಂದರೆ, ಅವರಿಗೆ ತಮ್ಮ ಸ್ಥಾನದ ಘನತೆಯ ಬಗ್ಗೆ ಕಿಂಚಿತ್ತ್ತೂ ಕೂಡ ಗೌರವವಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಾನು ಸಹ ಪೂಜೆ ಸಲ್ಲಿಸಿದ್ದೇನೆಂದು ಹೇಳುವ ಶಿವಕುಮಾರ್ ಗೆ ಅಲ್ಲಿ ಪೂಜಾ ವಿಧಿಗಳು ಹೇಗೆ ನಡೆಯುತ್ತವೆ ಅಂತ ಗೊತ್ತಿಲ್ಲವೇ? ಅಂತ ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಅವರು ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಹಾಡನ್ನು ಉಲ್ಲೇಖಿಸಿದರು ಮತ್ತು ಹಿಂದೊಮ್ಮೆ ಶಿವಕುಮಾರ್ ಅವರು ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯವರ ದುಃಖಕ್ಕೆ ಅಳುವವವರ ಮೆಚ್ಚ ಕೂಡಲಸಂಗಮದೇವ ಅಂತ ಬಸವಣ್ಣನವರ ವಚನ ಹೇಳಿದ್ದನ್ನು ಪ್ರಸ್ತಾಪಿಸಿ, ಇದನ್ನು ತಾನು ಶಿವಕುಮಾರ್ ಅವರಿಗೆ ಹೇಳಬೇಕಿದೆ, ಅವರು ಬೇರೆಯವರ ಡೊಂಕು ತಿದ್ದುವ ಪ್ರಯತ್ನಕ್ಕಿಳಿಯದೆ ತಮ್ಮ ಡೊಂಕುಗಳನ್ನು ತಿದ್ದಿಕೊಳ್ಳಲಿ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಚ್ ಡಿ ಕುಮಾರಸ್ವಾಮಿ ಈಗ ಹಿಂದೂ ಬಲವರ್ಧಿತ ನಾಯಕ : ಒಕ್ಕಲಿಗರ ಸೀಮೆಯಲ್ಲಿ “ಧರ್ಮ”ಸಂಕಟ..!