AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಿಯ ವಯಸ್ಸಿನ ಸಂಸದನಾಗಿರುವೆ, ಶ್ರಮವಹಿಸಿ ಜನಸೇವೆ ಮಾಡು ಅಂತ ಸಿದ್ದರಾಮಯ್ಯ ಸರ್ ಹೇಳಿದ್ದಾರೆ: ಸಾಗರ್ ಖಂಡ್ರೆ

ಕಿರಿಯ ವಯಸ್ಸಿನ ಸಂಸದನಾಗಿರುವೆ, ಶ್ರಮವಹಿಸಿ ಜನಸೇವೆ ಮಾಡು ಅಂತ ಸಿದ್ದರಾಮಯ್ಯ ಸರ್ ಹೇಳಿದ್ದಾರೆ: ಸಾಗರ್ ಖಂಡ್ರೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 07, 2024 | 1:19 PM

Share

ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸದನಾಗಿ ಅಯ್ಕೆಯಾಗಿರುವೆ, ಶ್ರಮವಹಿಸಿ ಜನರ ಸೇವೆ ಮಾಡು, ಓದುವ ಹವ್ಯಾಸ ಬೆಳಸಿಕೊಂಡು ದಿನಕ್ಕೆ ಕನಿಷ್ಟ ಎರಡು ತಾಸು ಬೇರೆ ಬೇರೆ ವಿಷಯಗಳ ಪಠಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಸಲಹೆ ನೀಡಿದ್ದಾರೆ ಎಂದು ಸಾಗರ್ ಖಂಡ್ರೆ ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿ ಅರಣ್ಯ ಸಚಿವರಾಗಿರುವ ಈಶ್ವರ್ ಖಂಡ್ರೆ (Eshwar Khandre) ಅವರ ಮಗ ಸಾಗರ್ ಖಂಡ್ರೆಯನ್ನು (Sagar Khandre) ಕಾಂಗ್ರೆಸ್ ಪಕ್ಷವು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಳೆಹುಲಿ ಮತ್ತು ಪಳಗಿದ ರಾಜಕಾರಣಿ ಭಗವಂತ ಖೂಬಾ (Bhagwant Khuba) ವಿರುದ್ಧ ಕಣಕ್ಕಿಳಿಸಿದಾಗ ಕಾಂಗ್ರೆಸ್ ನಡೆಯಿಂದ ಜನ ಆಶ್ಚರ್ಯಚಕಿತರಾಗಿದ್ದರು. ಆದರೆ ರಾಜಕೀಯದಲ್ಲಿ ಎಳಸಾಗಿರುವ 26-ವರ್ಷ ವಯಸ್ಸಿನ ಸಾಗರ್ ಇತಿಹಾಸ ನಿರ್ಮಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸುತ್ತಿರುವ ಯುವ ಪೀಳಿಗೆಯ ನಾಯಕರಲ್ಲಿ ಸಾಗರ್ ಕೂಡ ಒಬ್ಬರು. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯುವ ನೇತಾರ, ತನ್ನ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಆಯ್ಕೆ ಮಾಡಿರುವ ಬೀದರ್ ಮಹಾಜನತೆಗೆ ಕೃತಜ್ಞತೆ ಸಲ್ಲಿಸಿದರು. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದಾಗಿ ಹೇಳಿದ ಸಾಗರ್, ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸದನಾಗಿ ಅಯ್ಕೆಯಾಗಿರುವೆ, ಶ್ರಮವಹಿಸಿ ಜನರ ಸೇವೆ ಮಾಡು, ಓದುವ ಹವ್ಯಾಸ ಬೆಳಸಿಕೊಂಡು ದಿನಕ್ಕೆ ಕನಿಷ್ಟ ಎರಡು ತಾಸು ಬೇರೆ ಬೇರೆ ವಿಷಯಗಳ ಪಠಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಸಲಹೆ ನೀಡಿದ್ದಾರೆ ಎಂದು ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಪರ ಮತ ಯಾಚಿಸಿದ ಸಿದ್ದರಾಮಯ್ಯ