ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರು ಭಾರತದ ಜೊತೆ ಇದ್ದರು, ಯಾರು ಪಾಕಿಸ್ತಾನದ ಜೊತೆ ಅಂತ ಇತಿಹಾಸದಲ್ಲಿ ದಾಖಲಾಗಿದೆ: ಜಮೀರ್ ಅಹ್ಮದ್
ನೀವು ಪಾಕಿಸ್ತಾನಕ್ಕೆ ಹೋಗಬೇಕು ಎಂದಿದ್ದಾರೆ ಅಂತ ಮಾಧ್ಯಮದವರು ಹೇಳಿದಾಗ ಈ ದೇಶ ನಂದು, ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದಾಗ ಕಾಂಗ್ರೆಸ್ ದೇಶದ ಜೊತೆ ನಿಂತಿದ್ದರೆ ಬಿಜೆಪಿ ಮತ್ತು ಆರೆಸ್ಸಸ್ ಯಾರ ಜೊತೆ ಇದ್ದರು ಅಂತ ಇತಿಹಾಸದಲ್ಲಿ ಸವಿಸ್ತಾರವಾಗಿ ನಮೂದಾಗಿದೆ, ಈ ದೇಶ ಯಾವತ್ತಿಗೂ ನಮ್ಮದು, ಅದರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ಬೀದರ್: ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಾವು ಜಗಳ ಮಾಡೋದಲ್ಲದೆ ತಮ್ಮ ತಮ್ಮ ಅಪ್ಪಂದಿರನ್ನೂ ಅದರಲ್ಲಿ ಎಳೆತರುತ್ತಿದ್ದಾರೆ! ವಕ್ಫ್ ಆಸ್ತಿ ಯತ್ನಾಳ್ ಅಪ್ಪನಲ್ಲದಲ್ಲ ಅಂತ ಜಮೀರ್ ಹೇಳಿದ ಬಳಿಕ ಎದಿರೇಟು ನೀಡಿದ ಯತ್ನಾಳ್ ಅದು ಅವರಪ್ಪನ ಆಸ್ತಿನೂ ಅಲ್ಲ ಎಂದರು. ಇವತ್ತು ಬೀದರ್ ನಲ್ಲಿ (Bidar) ಮಾಧ್ಯಮದವರು ಜಮೀರ್ ಗೆ ಯತ್ನಾಳ್ ಹೇಳಿದ್ದನ್ನು ತಿಳಿಸಿದಾಗ ಸಚಿವ, ಅದು ಅವರಪ್ಪನ ಅಸ್ತಿಯೂ ಅಲ್ಲ ನಮ್ಮಪ್ಪನ ಆಸ್ತಿಯೂ ಅಲ್ಲ, ಅದು ದಾನಿಗಳ ಕೊಡುಗೆಯಿಂದ ಸ್ಥಾಪಿತವಾಗಿರುವ ಆಸ್ತಿ ಎಂದು ಹೇಳಿದರು. ನೀವು ಪಾಕಿಸ್ತಾನಕ್ಕೆ ಹೋಗಬೇಕು ಎಂದಿದ್ದಾರೆ ಅಂತ ಮಾಧ್ಯಮದವರು ಹೇಳಿದಾಗ ಈ ದೇಶ ನಂದು, ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದಾಗ ಕಾಂಗ್ರೆಸ್ ದೇಶದ ಜೊತೆ ನಿಂತಿದ್ದರೆ ಬಿಜೆಪಿ ಮತ್ತು ಆರೆಸ್ಸಸ್ ಯಾರ ಜೊತೆ ಇದ್ದರು ಅಂತ ಇತಿಹಾಸದಲ್ಲಿ ಸವಿಸ್ತಾರವಾಗಿ ನಮೂದಾಗಿದೆ, ಈ ದೇಶ ಯಾವತ್ತಿಗೂ ನಮ್ಮದು, ಅದರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ