AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಕಸ್ಟಡಿ, ಮೂರನೇ ಬಾರಿ ಸೆಂಟ್ರಲ್ ಜೈಲಿಗೆ ಬಂದ ಮಾಜಿ ಸಂಸದ

ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಕಸ್ಟಡಿ, ಮೂರನೇ ಬಾರಿ ಸೆಂಟ್ರಲ್ ಜೈಲಿಗೆ ಬಂದ ಮಾಜಿ ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 24, 2024 | 7:31 PM

ಪ್ರಜ್ವಲ್ ಗ್ಯಾಸ್ಟ್ರಿಕ್ ಮತ್ತು ಬೆನ್ನುನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಅವರ ಪರ ವಕೀಲ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಇದೇ ಮನವಿಯನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸುವಂತೆ ನ್ಯಾಯಾಧೀಶರು ವಕೀರಿಗೆ ಸೂಚಿಸಿದ್ದಾರೆ. ಒಂದು ಪಕ್ಷ ಜೈಲು ಅಧಿಕಾರಿಗಳು ಚಿಕಿತ್ಸೆ ಒದಗಿಸಲು ನಿರಾಕರಿಸಿದ್ದೇಯಾದಲ್ಲಿ ತಮಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಹೇಳಿದ್ದಾರಂತೆ.

ಆನೇಕಲ್ (ಬೆಂಗಳೂರು): ಜನಪ್ರತಿನಿಧಿಗಳ ವಿಶೇಷ ಕೋರ್ಟ್ (People’s Representative Court) ನ್ಯಾಯಾಧೀಶ ಕೆಎನ್ ಶಿವಕುಮಾರ್ (judge KN Shivakumar) ಅವರು, ಹಲವಾರು ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣರನ್ನು (Prajwal Revanna) ಜುಲೈ 8ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ಬಳಿಕ ಮಾಜಿ ಸಂಸದನ್ನು ಪುನಃ ಆನೇಕಲ್ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಕರೆತರಲಾಯಿತು. ಜರ್ಮನಿಯಿಂದ ವಾಪಸ್ಸಾದ ಬಳಿಕ ಅರೆಸ್ಟ್ ಆದ ಪ್ರಜ್ವಲ್ ರನ್ನು ಮೂರನೇ ಬಾರಿಗೆ ಸೆಂಟ್ರಲ್ ಜೈಲಿಗೆ ಕರೆತರಲಾಗಿದೆ. ಪ್ರಜ್ವಲ್ ಗ್ಯಾಸ್ಟ್ರಿಕ್ ಮತ್ತು ಬೆನ್ನುನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಅವರ ಪರ ವಕೀಲ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಇದೇ ಮನವಿಯನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸುವಂತೆ ನ್ಯಾಯಾಧೀಶರು ವಕೀರಿಗೆ ಸೂಚಿಸಿದ್ದಾರೆ. ಒಂದು ಪಕ್ಷ ಜೈಲು ಅಧಿಕಾರಿಗಳು ಚಿಕಿತ್ಸೆ ಒದಗಿಸಲು ನಿರಾಕರಿಸಿದ್ದೇಯಾದಲ್ಲಿ ತಮಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಹೇಳಿದ್ದಾರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ದಂಧೆ, ಕಣ್ಮುಚ್ಚಿ ಕುಳಿತಿದೆಯಾ ಎಸ್​ಐಟಿ