ಚುನಾವಣೆಯಲ್ಲಿ ಜವಾಬ್ದಾರಿವಹಿಸಿಕೊಂಡವರು ಎಸಗಿದ ಪ್ರಮಾದಗಳಿಂದ ಪಕ್ಷಕ್ಕೆ ಹಲವಾರು ಕಡೆ ಸೋಲಾಯಿತು: ಬಸನಗೌಡ ಯತ್ನಾಳ್
ಹಲವಾರು ಲೋಕಸಭಾ ಕ್ಷೇತ್ರಗಳಲ್ಲಿನ ಹಾಲಿ ಸದಸ್ಯರಾಗಿದ್ದವರು ಕ್ಷೇತ್ರಗಳಲ್ಲಿ ಕೆಲಸವೇ ಮಾಡಿರಲಿಲ್ಲ ಮತ್ತು ಜನರೊಂದಿಗೆ ಸಂಪರ್ಕ ಕೂಡ ಇಟ್ಟುಕೊಂಡಿರಲಿಲ್ಲ. ಅಂಥವರಿಗೆ ಪಕ್ಷದ ವರಿಷ್ಠರು ನಿರ್ದಾಕ್ಷಿಣ್ಯವಾಗಿ ಟಿಕೆಟ್ ನಿರಾಕರಿಸಬೇಕಿತ್ತು, ಅವರಿಂದಾಗೇ ಪಕ್ಷಕ್ಕೆ 350 ಸ್ಥಾನ ಸಿಗೋದು ತಪ್ಪಿತು ಎಂದು ಯತ್ನಾಳ್ ಹೇಳಿದರು.
ವಿಜಯಪುರ: ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಟೀಕೆ ಮಾಡುವುದನ್ನು ಮುಂದುವರಿಸಿರುವರಾದರೂ ಅವರ ಧೋರಣೆಯಲ್ಲಿ ಕೊಂಚ ಬದಲಾವಣೆ ಬಂದಿದೆ. ಅವರ ಮಾತುಗಳಲ್ಲಿ ಮೊದಲಿನ ಉಗ್ರತೆ, ತೀಕ್ಷ್ಣತೆ ಮಾಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕೆಲ ಅಭ್ಯರ್ಥಿಗಳ ಸೋಲಿಗೆ ವಿಜಯೇಂದ್ರ ಕಾರಣವಾಗಿದ್ದಾರೆ ಎಂದು ಯತ್ನಾಳ್ ಸೌಮ್ಯವಾಗಿ ಹೇಳುತ್ತಾರೆ. ತನ್ನನ್ನು ಸೋಲಿಸಲು ಬಿಜೆಪಿಯಿಂದ ಹಣ ಕಳಿಸಲಾಗಿತ್ತು ಎಂದು ತುಮಕೂರು ಕ್ಷೇತ್ರದಿಂದ ಗೆದ್ದ ವಿ ಸೋಮಣ್ಣ ಹೇಳಿದ್ದಾರೆ. ಅವರಂತೆಯೇ ಡಾ ಉಮೇಶ್ ಜಾಧವ್, ಭಗವಂತ ಖೂಬಾ ಮತ್ತು ಬೇರೆ ಕೆಲ ನಾಯಕರು ಸಹ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ. ದಾವಣಗೆರೆ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಅವರು ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಲ್ಲರ ದೂರುಗಳ ಪರಾಮರ್ಶೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ಯತ್ನಾಳ್ ಹೇಳಿದರು. ಹಲವಾರು ಲೋಕಸಭಾ ಕ್ಷೇತ್ರಗಳಲ್ಲಿನ ಹಾಲಿ ಸದಸ್ಯರಾಗಿದ್ದವರು ಕ್ಷೇತ್ರಗಳಲ್ಲಿ ಕೆಲಸವೇ ಮಾಡಿರಲಿಲ್ಲ ಮತ್ತು ಜನರೊಂದಿಗೆ ಸಂಪರ್ಕ ಕೂಡ ಇಟ್ಟುಕೊಂಡಿರಲಿಲ್ಲ. ಅಂಥವರಿಗೆ ಪಕ್ಷದ ವರಿಷ್ಠರು ನಿರ್ದಾಕ್ಷಿಣ್ಯವಾಗಿ ಟಿಕೆಟ್ ನಿರಾಕರಿಸಬೇಕಿತ್ತು, ಅವರಿಂದಾಗೇ ಪಕ್ಷಕ್ಕೆ 350 ಸ್ಥಾನ ಸಿಗೋದು ತಪ್ಪಿತು ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಶೆ.50ರಷ್ಟು ಕಮಿಷನ್: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ

ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ

ಹಕ್ಕಿ ಜ್ವರ: ಕೋಳಿ ಫಾರ್ಮ್ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ

ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ

ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
