ಹೊಸಕೋಟೆಯ ಶ್ರೀಗುರು ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕೆಇಬಿ ವೃತ್ತದ ಶ್ರೀಗುರು ನಳಪಾಕ ಹೋಟೆಲ್​ನಲ್ಲಿ ಖರೀದಿಸಿದ್ದ ಗೋಬಿ ಮಂಚೂರಿಯಲ್ಲಿ ಹುಳ ಪತ್ತೆ ಆಗಿರುವಂತಹ ಘಟನೆ ನಡೆದಿದೆ. 190 ರೂ. ಪಡೆದು ಹುಳವಿರುವ ಗೋಬಿ ಕೊಟ್ಟಿದ್ದೀರಾ ಅಂತ ಗ್ರಾಹಕ ಮಹಿಳೆ ಹೋಟೆಲ್​ನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಬಿ ಮಂಚೂರಿಯಲ್ಲಿ ಹುಳವಿದ್ದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದೆ.

ಹೊಸಕೋಟೆಯ ಶ್ರೀಗುರು ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 24, 2024 | 10:37 PM

ಬೆಂಗಳೂರು ಗ್ರಾಮಾಂತರ, ಜೂನ್​ 24: 190 ರೂ. ಹಣ ನೀಡಿ ಖರೀದಿಸಿದ ಗೋಬಿ ಮಂಚೂರಿಯಲ್ಲಿ (Gobi Manchurian) ಹುಳ ಪತ್ತೆಯಾಗಿದ್ದು, ಹುಳ (worm) ಕಂಡ ಗ್ರಾಹಕರು ಹೋಟೆಲ್ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕೆಇಬಿ ವೃತ್ತದ ಶ್ರೀಗುರು ನಳಪಾಕ ಹೋಟೆಲ್ ನಲ್ಲಿ ಘಟನೆ ನಡೆದಿದ್ದು ಮಹಿಳೆಯ ಕ್ಲಾಸ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅಂದಹಾಗೆ ಇಂದು ಮಧ್ಯಾಹ್ನ ತೇಜಸ್ವಿನಿ ಅನ್ನೂ ಗ್ರಾಹಕರು ಕುಟುಂಬದ ಜೊತೆ ಹೋಟೆಲ್​ಗೆ ತೆರಳಿ ಗೋಬಿ ಮಂಚೂರಿ ಆರ್ಡರ್ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಕೊಟ್ಟ ಗೋಬಿಯನ್ನ ಮಗುವಿಗೆ ತಿನ್ನಿಸಲು ಮುಂದಾಗಿದ್ದಾರೆ. ಈ ವೇಳೆ ಗೋಬಿ ಮಂಚೂರಿ ಒಳಗಡೆ ಹುಳವಿರುವುದು ಪತ್ತೆಯಾಗಿದ್ದು ಹೆಚ್ಚು ಹಣ ಪಡೆದು ಗುಣಮಟ್ಟದ ಗೋಬಿ ಮಂಚೂರಿ ಕೊಟ್ಟಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಪುಟ್ ಪಾತ್​ನಲ್ಲಿ ಕಡಿಮೆ ಬೆಲೆಗೆ ಗೋಬಿ ಮಂಚೂರಿ ಸಿಕ್ಕಿದ್ರು ಹೆಚ್ಚು ಹಣ ಕೊಟ್ಟು ಸ್ವಚ್ಚವಾಗಿರುತ್ತೆ ಅಂತ ಖರೀದಿಸಿದರೆ ಇಲ್ಲು ಇದೇ ಪರಿಸ್ಥಿತಿಯಾದ್ರೆ ಹೇಗೆ ಅಂತ ಹೋಟೆಲ್ ಸಿಬ್ಬಂದಿಗೆ ಮಹಿಳೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ: ರಾಜಣ್ಣ
ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ: ರಾಜಣ್ಣ
'13 ಜನ ಸ್ಪಾಟ್​ನಲ್ಲೇ ಸಾವನಪ್ಪಿದ್ದು ಕೇಳಿ ಇಡೀ ಗ್ರಾಮ ಆಘಾತಕ್ಕೊಳಗಾಗಿದೆ’
'13 ಜನ ಸ್ಪಾಟ್​ನಲ್ಲೇ ಸಾವನಪ್ಪಿದ್ದು ಕೇಳಿ ಇಡೀ ಗ್ರಾಮ ಆಘಾತಕ್ಕೊಳಗಾಗಿದೆ’
ಅಪಘಾತಕ್ಕೀಡಾದ ಟಿಟಿಯನ್ನು15 ದಿನಗಳ ಹಿಂದೆ ಖರೀದಿಸಲಾಗಿತ್ತು: ಮೃತರ ಸಂಬಂಧಿ
ಅಪಘಾತಕ್ಕೀಡಾದ ಟಿಟಿಯನ್ನು15 ದಿನಗಳ ಹಿಂದೆ ಖರೀದಿಸಲಾಗಿತ್ತು: ಮೃತರ ಸಂಬಂಧಿ
ಪೂಜೆ ಮಾಡಿಸಿ ಬರುವಾಗ ಘೋರ ದುರಂತ; ಮೃತನ ಸ್ನೇಹಿತರು ಹೇಳಿದ್ದೇನು ನೋಡಿ
ಪೂಜೆ ಮಾಡಿಸಿ ಬರುವಾಗ ಘೋರ ದುರಂತ; ಮೃತನ ಸ್ನೇಹಿತರು ಹೇಳಿದ್ದೇನು ನೋಡಿ
ಕೊಲೆ ಕೇಸ್​ನಲ್ಲಿ ದರ್ಶನ್ ಪಾತ್ರದ ಬಗ್ಗೆ ಸಿಕ್ಕಿವೆ 30ಕ್ಕೂ ಅಧಿಕ ಸಾಕ್ಷಿ
ಕೊಲೆ ಕೇಸ್​ನಲ್ಲಿ ದರ್ಶನ್ ಪಾತ್ರದ ಬಗ್ಗೆ ಸಿಕ್ಕಿವೆ 30ಕ್ಕೂ ಅಧಿಕ ಸಾಕ್ಷಿ
Daily Devotional: ವಾಹನ ಯೋಗ ಹೇಗೆ ಪಡೆದುಕೊಳ್ಳುವುದು? ಈ ವಿಡಿಯೋ ನೋಡಿ
Daily Devotional: ವಾಹನ ಯೋಗ ಹೇಗೆ ಪಡೆದುಕೊಳ್ಳುವುದು? ಈ ವಿಡಿಯೋ ನೋಡಿ
ರೆಡ್ಮಿ Note 13 Pro ಸ್ಮಾರ್ಟ್​ಫೋನ್ ಈಗ ಹೊಸ ಬಣ್ಣದಲ್ಲಿ ಲಭ್ಯ
ರೆಡ್ಮಿ Note 13 Pro ಸ್ಮಾರ್ಟ್​ಫೋನ್ ಈಗ ಹೊಸ ಬಣ್ಣದಲ್ಲಿ ಲಭ್ಯ