ಕಾಂಗ್ರೆಸ್​ ಸರ್ಕಾರದಲ್ಲಿ ಶೆ.50ರಷ್ಟು ಕಮಿಷನ್​: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಶೇ.13ರಷ್ಟು ಕಮಿಷನ್ ಇಲ್ಲದೆ ಗುತ್ತಿಗೆದಾರರಿಗೆ ಎನ್ಒಸಿ ನೀಡುತ್ತಿಲ್ಲ. ಎಲ್ಲವೂ ಸೇರಿದರೆ ಶೇಕಡಾ 50ರಷ್ಟು ಕಮಿಷನ್​ಗೆ ಬಂದು ನಿಲ್ಲುತ್ತದೆ. ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್​ ಆರೋಪ ಮಾಡುತ್ತಿದ್ದರು. ಆದರೆ ಇವರು 50 ಪರ್ಸೆಂಟ್ ಕಮಿಷನ್​ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕಾಂಗ್ರೆಸ್​ ಸರ್ಕಾರದಲ್ಲಿ ಶೆ.50ರಷ್ಟು ಕಮಿಷನ್​: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Mar 04, 2024 | 3:12 PM

ವಿಜಯಪುರ, ಮಾರ್ಚ್​ 4: ಈ ಸರ್ಕಾರದಲ್ಲಿ 50% ಭ್ರಷ್ಟಾಚಾರ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೇ.13ರಷ್ಟು ಕಮಿಷನ್ ಇಲ್ಲದೆ ಗುತ್ತಿಗೆದಾರರಿಗೆ ಎನ್ಒಸಿ ನೀಡುತ್ತಿಲ್ಲ. ಎಲ್ಲವೂ ಸೇರಿದರೆ ಶೇಕಡಾ 50ರಷ್ಟು ಕಮಿಷನ್​ಗೆ ಬಂದು ನಿಲ್ಲುತ್ತದೆ. ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್​ ಆರೋಪ ಮಾಡುತ್ತಿದ್ದರು. ಆದರೆ ಇವರು 50 ಪರ್ಸೆಂಟ್ ಕಮಿಷನ್​ ಪಡೆಯುತ್ತಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ನಿಮ್ಮ ಸರ್ಕಾರವೇ ಉತ್ತಮ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ವಿಜಯೇಂದ್ರ ಉತ್ತಮವಾಗಿದ್ದರು ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ತಡರಾತ್ರಿ ಕರೆ ಮಾಡಿದ್ದರು ಬೆಳಗಾವಿಯಲ್ಲಿ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇಂದು ವಿಜಯಪುರದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ನಾಳೆ ನಾನು ಬೆಳಗಾವಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷರ ಸಭೆಯಲ್ಲಿ ಭಾಗಿಯಾಗುತ್ತೇನೆ. ವಿಜಯಪುರ ಲೋಕಸಭಾ ಚುನಾವಣೆ ಟಿಕೆಟ್ ಯಾರಿಗೆ ನೀಡಿದರು ನಾವು ಕೆಲಸ ಮಾಡುತ್ತೇವೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡೋದು ನಮ್ಮ ಗುರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆ ನಿಲ್ಲಿಸಲಾಗದಿದ್ದರೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿ ವಿಧಾನಸಭೆಯನ್ನು ವಿಸರ್ಜಿಸಲಿ: ಬಸನಗೌಡ ಪಾಟೀಲ್ ಯತ್ನಾಳ್

ಜಿಗಜಿಣಗಿಗೆ ಆಗಲಿ ಅಥವಾ ಬೇರೆಯಾರೇ ಆಗಲಿ ನಾವು ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ದಲಿತ ಸಮುದಾಯದ ಯುವಕನಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಮೋದಿ ಪ್ರಧಾನಿ ಮಾಡಿಲು ಎಲ್ಲರೂ ಕೈಜೋಡಸಲಿದ್ದೇವೆ ಎಂದಿದ್ದಾರೆ.

ಸುಳ್ಳು ವಂದತಿ ಬಗ್ಗೆ ನನಗೆ ಗೊತ್ತಿಲ್ಲ

ರಮೇಶ ಜಿಗಜಿಣಗಿಗೆ ಅನಾರೋಗ್ಯದ ವದಂತಿ ವಿಚಾರವಾಗಿ ಮಾತನಾಡಿದ ಅವರು, ಜಿಗಜಿಣಗಿಗೆ ಆರೋಗ್ಯದ ಬಗ್ಗೆ ಅವರ ಪುತ್ರನೇ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಕಾರಣಕ್ಕಾಗಿ ಸುಳ್ಳು ವಂದತಿ ಹಬ್ಬಿಸುತ್ತಿದ್ದಾರೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರ ಸಮಾವೇಶದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ! ಕಾರಣ ಇದೆ

ಜಾತಿ ಗಣತಿ ವರದಿ ಸ್ವೀಕಾರದಿಂದ ಸರ್ಕಾರ ಪತನ ಗ್ಯಾರಂಟಿ ಎಂದು ಯತ್ನಾಳ್​ ಹೊಸ ಬಾಂಬ್ ಸಿಡಿಸಿದ್ದಾರೆ. ಲೋಕಾಸಭಾ ಚುನಾವಣೆಯ ನಂತರ ಸರ್ಕಾರ ಬೀಳಲಿದೆ. 50 – 60 ಶಾಸಕರಿಂದ ಸರ್ಕಾರ ಬೀಳುತ್ತಾ ಅನ್ನೋದು ಆಗ ಗೊತ್ತಾಗುತ್ತೆ. ಈ ಸರ್ಕಾರ ಬಹಳ ದಿನ ಮುಂದೆ ವರೆಯುವುದಿಲ್ಲ. ಜಾತಿ ಗಣತಿ ಸ್ವೀಕಾರ ವಿಚಾರವಾಗಿ ಕಾಂಗ್ರೆಸ್​ನಲ್ಲೆ ಅಸಮಧಾನ ಭುಗಿಲೆದ್ದಿದೆ. ಕಾಂಗ್ರೆಸ್​ನ ಶಾಮನೂರ ಶಿವಶಂಕ್ರಪ್ಪ, ಲಕ್ಷ್ಮಿ ಹೆಬ್ಬಾಳಕರ್, ಮಧು ಬಂಗಾರಪ್ಪ, ವಿನಯ ಕುಲಕರ್ಣಿ ಅವರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಸರಕಾರ ಪತನ ನಿಶ್ಚಿತ ಎಂದು ಕಿಡಿಕಾರಿದ್ದಾರೆ.

ಎಫ್​ಎಸ್​​ವರದಿ ದೃಢ ವಿಚಾರವಾಗಿ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಆಗಿದ್ದನ್ನ ಸಮರ್ಥಿಸಿಕೊಂಡವರ ವಿರುದ್ಧ ಯತ್ನಾಳ್ ಕಿಡಿಕಾರಿದ್ದು, ನಾಸೀರ ಜಿಂದಾಬಾದ ಅಂದರೆ ನಮ್ಮ ತಕರಾರಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನ ಎಲ್ಲ ಮಾಧ್ಯಮದವರು ಬಿತ್ತರಿಸಿದ್ದರು. ಅದನ್ನ ಸರ್ಕಾರ ನಂಬಲಿಲ್ಲ. ಈ ಪ್ರಕರಣವನ್ನ ಜಮೀರ್ ಅಹ್ಮದ್, ಸಿಎಂ ಇಬ್ರಾಹಿಂ ಆಗಲಿ ಯಾವೊಬ್ಬ ಮುಸ್ಲಿಂ ನಾಯಕರು, ಸಚಿವರು ಖಂಡಿಸಲಿಲ್ಲ. ಈ ಮೂಲಕ ಸಿದ್ದರಾಮಯ್ಯ ಅವರ ಮರ್ಯಾದೆ ತೆಗೆದಿದ್ದಾರೆ. ಈಗಲಾದರೂ ಸಿದ್ಧರಾಮಯ್ಯ ಮುಸ್ಲಿಂ‌ ತುಷ್ಠಿಕರಣ ಬಿಡಲಿ, ಮುಸ್ಲಿಂ ತುಷ್ಠಿಕರಣ ಅತೀಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ