AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಸ್ಫೋಟ: ಬಸ್​ ನಿಲ್ದಾಣದಲ್ಲೇ ಬಾಂಬ್​ಗೆ​​ ಟೈಮರ್ ಸೆಟ್‌ ಮಾಡಿದ ಶಂಕಿತ ಉಗ್ರ; ವಿಡಿಯೋ ಇಲ್ಲಿದೆ

ಬೆಂಗಳೂರಿನ ವೈಟ್‌ಫೀಲ್ಡ್‌ನ ಬ್ರೂಕ್‌ ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ವೇಳೆ ಬ್ಯಾಟರಿ, ಟೈಮರ್ ಹಾಗೂ ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಬಳಿಸಿದ್ದ ರಾಸಾಯನಿಕಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ, ಶಂಕಿತ ಆರೋಪಿ ಬಸ್​ ನಿಲ್ದಾಣದಲ್ಲೇ ಬಾಂಬ್​ಗೆ ಟೈಮ್ ಫಿಕ್ಸ್ ಮಾಡುತ್ತಿದ್ದ ವಿಡಿಯೋ ಲಭ್ಯವಾಗಿದೆ.

Kiran HV
| Updated By: Rakesh Nayak Manchi|

Updated on:Mar 04, 2024 | 2:48 PM

Share

ಬೆಂಗಳೂರು, ಮಾ.4: ನಗರದ ವೈಟ್‌ಫೀಲ್ಡ್‌ನ ಬ್ರೂಕ್‌ ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್ ಸ್ಫೋಟ (Bomb Blast) ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ವೇಳೆ ಬ್ಯಾಟರಿ, ಟೈಮರ್ ಹಾಗೂ ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಬಳಿಸಿದ್ದ ರಾಸಾಯನಿಕಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ, ಶಂಕಿತ ಆರೋಪಿ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಮುನ್ನ ಬಸ್​ ನಿಲ್ದಾಣದಲ್ಲಿ ಬಾಂಬ್​ಗೆ ಟೈಮ್ ಫಿಕ್ಸ್ ಮಾಡುತ್ತಿದ್ದ. ಇದರ ವಿಡಿಯೋ Tv9ಗೆ ಲಭ್ಯವಾಗಿದೆ.

ಶಂಕಿತ ಬಾಂಬರ್ ಮಾರ್ಚ್ 1 ರಂದು ಬಸ್ ನಿಲ್ದಾಣಕ್ಕೆ ಬಂದು ಬೆಳಗ್ಗೆ 10.43ಕ್ಕೆ ಬಾಂಬ್​ಗೆ ಟೈಮರ್ ಸೆಟ್‌​ ಮಾಡಿದ್ದಾನೆ. ನಿಲ್ದಾಣದಲ್ಲಿ ಯಾವುದೇ ಭಯ ಇಲ್ಲದೆ ಜನರ ಮುಂದೆಯೇ ಟೈಮ್ ಸೆಟ್ ಮಾಡಿದ್ದಾನೆ. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ, ಇತರೆಡೆ ಸಂಚರಿಸುತ್ತಿರುವ ವಿಡಿಯೋ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ತನಿಖೆ ಅಖಾಡಕ್ಕೆ ಎನ್​ಐಎ: ಕಾರ್ಯಾಚರಣೆ ಹೇಗಿರಲಿದೆ ಗೊತ್ತೇ?

ಶುಕ್ರವಾರ ಬೆಳಗ್ಗೆ 10 ಗಂಟೆ 40 ನಿಮಿಷಕ್ಕೆ ಬಿಎಂಟಿಸಿ ವೋಲ್ವೋ ಬಸ್​ನಲ್ಲಿ ಬಂದಿದ್ದ ಶಂಕಿತ ಉಗ್ರ, ರಾಮೇಶ್ವರಂ ಕೆಫೆಯ ಬಳಿ ಬಸ್ ನಿಲ್ದಾಣದಲ್ಲಿ ಇಳಿದು ಕೆಫೆಗೆ ತೆರಳಿ ಬಾಂಬ್ ಇಟ್ಟು ಬಂದಿದ್ದ. ಆದರೆ ಬಾಂಬ್ ಇಟ್ಟಾದಮೇಲೆ ಮಾರ್ಗ ಬದಲಿಸಿದ್ದ ಆತ, ಬೇರೆ ಮಾರ್ಗವಾಗಿ ತೆರಳಿದ್ದ.

ಬ್ಯಾಟರಿ, ಟೈಮರ್, ಕೆಮಿಕಲ್ಸ್ ಪತ್ತೆ

ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ಮುಂದುವರಿಸಲಾಗಿದೆ. ಈಗಾಗಲೇ ಸ್ಫೋಟಗೊಂಡ ಸ್ಥಳದಲ್ಲಿ ಬ್ಯಾಟರಿ ಜೊತೆಗೆ ಟೈಮರ್ ಪತ್ತೆಯಾಗಿತ್ತು. ಬಳಿಕ ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಬಳಿಸಿದ್ದ ರಾಸಾಯನಿಕಗಳು ಪತ್ತೆಯಾಗಿವೆ. ಈ ಬಗ್ಗೆ ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಪೊಟ್ಯಾಷಿಯಂ ನೈಟ್ರೇಟ್ ಮತ್ತು ಹೈಡ್ರೋಜನ್ ಪರಾಕ್ಸೈಡ್ ಬಳಸಿ ಕೃತ್ಯ ಎಸಗಲಾಗಿದೆ. ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಈ ರಾಸಾಯನಿಕಗಳನ್ನು ಬಳಕೆ ಮಾಡಲಾಗಿದೆ. ಸದ್ಯ, ಸ್ಫೋಟದ ಅವಶೇಷಗಳ ಮಾದರಿಗಳನ್ನು ಎಫ್ಎಸ್​ಎಲ್ ಮತ್ತು ಸೋಕೋ ಟೀಂ ಸಂಗ್ರಹಿಸಿದೆ.

ಸಿಗದ ಶಂಕಿತನ ಸುಳಿವು

ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆರೋಪಿಯ ಚಲನವಲನಗಳ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ ಮುಖ ಪರಿಚಯ ಸಿಗದಂತೆ ಮಾಸ್ಕ್​, ಟೊಪ್ಪಿ ಧರಿಸಿದ್ದಾನೆ. ಹೀಗಾಗಿ ಈತನನ್ನು ಪತ್ತೆ ಹಚ್ಚುವುದೇ ಸಿಸಿಬಿ ಪೊಲೀಸರಿಗೆ ತಲೆನೋವಾಗಿದೆ. ಈ ನಡುವೆ ಎನ್​ಐಎ ಕೂಡ ಅಖಾಡಕ್ಕಿಳಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Mon, 4 March 24