AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಸ್ಫೋಟ ಪರಿಣಾಮ: ಬೆಂಗಳೂರಿನ ಹೋಟೆಲ್​​ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು, ಇಲ್ಲಿದೆ ವಿವರ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ ಬೆಂಗಳೂರಿನ ಹೋಟೆಲ್​ಗಳಲ್ಲಿ ಕಠಿಣ ಭದ್ರತಾ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜಾರಿಗೊಳಿಸುವ ಬಗ್ಗೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸಭೆ ನಡೆಸಿದ್ದು, ಹಲವು ವಿಚಾರಗಳ ಚರ್ಚೆಯಾಗಿದೆ. ಆ ಕುರಿತು ಮಾಹಿತಿ ಇಲ್ಲಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪರಿಣಾಮ: ಬೆಂಗಳೂರಿನ ಹೋಟೆಲ್​​ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Poornima Agali Nagaraj
| Edited By: |

Updated on: Mar 04, 2024 | 2:40 PM

Share

ಬೆಂಗಳೂರು, ಮಾರ್ಚ್​​ 4: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ (Bomb Blast) ಪ್ರಕರಣದ ಬೆನ್ನಲ್ಲೇ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (Bengaluru Hotel Assosiation) ಅಲರ್ಟ್ ಆಗಿದೆ. ನಗರದ ಹೋಟೆಲ್​​ಗಳಲ್ಲಿ ಭದ್ರತೆ ವಿಚಾರವಾಗಿ ಕಟ್ಟೆಚ್ಚರ ವಹಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ನೇತೃತ್ವದಲ್ಲಿ ಅಸೋಸಿಯೇಷನ್ ಸಭೆ ಸೇರಿದ್ದು, ಇದೇ ಮೊದಲ ಬಾರಿಗೆ ಹೋಟೆಲ್​ಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

ಹೋಟೆಲ್ ತಜ್ಞರು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜಾರಿಗೊಳಿಸುವ ಸಂಬಂಧ ಹೋಟೆಲ್ ಗಳಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಒಂದು ವೇಳೆ ಇದು ಜಾರಿಯಾಗಿದ್ದೇ ಆದರೆ ಇನ್ಮುಂದೆ ಹೋಟೆಲ್​​ಗಳಲ್ಲಿಯೂ ಕಠಿಣ ಭದ್ರತಾ ನಿಯಮಗಳು ಅನ್ವಯವಾಗಲಿವೆ. ಬೇರೆ ರಾಜ್ಯಗಳಲ್ಲಿರುವ ಭದ್ರತಾ ಕ್ರಮಗಳನ್ನು ಅನುಸರಿಸಲು ಕೂಡ ಚಿಂತನೆ ಮಾಡಲಾಗಿದೆ.

ಹೋಟೆಲ್​​ಗಳಲ್ಲಿ ಯಾವೆಲ್ಲ ನಿಮಯ ಜಾರಿಗೆ ಬರಲಿದೆ?

  • ಹೋಟೆಲ್​​ಗಳಲ್ಲಿ ಸೈರನ್ ಅಳವಡಿಸುವುದು
  • ಮೈಕ್ ವಾಕ್ ಟಾಕಿ ಅಳವಡಿಸುವುದು
  • ಪೈರಿಸ್ಟಿಂಗ್ ಮಿಷನ್ ಅಳವಡಿಸಿಸುವುದು
  • ಪೋಲಿಸ್ ನಂಬರ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಯ ನಂಬರ್ ನೋಟಿಸ್ ಬೋರ್ಡ್​ಮೇಲೆ ಹಾಕುವುದು
  • ಮೆಟಲ್ ಸ್ಕ್ರೀನಿಂಗ್ ಅಳವಡಿಸುವುದು
  • ಅನುಮಾನ್ಪದ ಗ್ರಾಹಕರನ್ನು ವಾಚಿಂಗ್ ಮಾಡಲು ಸ್ಪೇಷಲ್ ಸಿಬ್ಬಂದಿಗಳನ್ನ ನೇಮಿಸುವುದು
  • ಹೈ ಟೆಕ್ನಿಕ್ ಸಿಸಿಟಿವಿ ಕ್ಯಾಮರಗಳ ಅಳವಡಿಕೆ ಹೆಚ್ಚಿಸುವುದು
  • ಹೋಟೆಲ್​ಗಳಲ್ಲಿಯೂ ಪೊಲೀಸ್ ಮಾರ್ಗಸೂಚಿ ಅನುಸರಿಸುವುದು
  • ಬ್ಯಾಗ್​​ಗಳನ್ನ ಹೊರಗಿಟ್ಟು ಗ್ರಾಹಕರು ಒಳಗೆ ಬರುವಂತೆ ನಿಯಮ ರೂಪಿಸಿವುದು

ಇಷ್ಟೇ ಅಲ್ಲದೆ, ಭದ್ರತೆ ಹಾಗೂ ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲು ಹೋಟೆಲ್ ಅಸೋಸಿಯೇಷನ್ ಮುಂದಾಗಿದೆ. ಸಣ್ಣಪುಟ್ಟ ಹೋಟೆಲ್​​ಗಳಿಗೆ ಹೊರೆಯಾಗದಂತೆ ನಿಯಮವಳಿಗಳನ್ನು ಜಾರಿಗೊಳಿಸಲಾಗುವುದು ಎಂದು ಪಿಸಿ ರಾವ್ ತಿಳಿಸಿದ್ದಾರೆ. ಆದರೆ, ಕಡ್ಡಾಯವಾಗಿ ಪ್ರತಿಯೊಂದು ಹೋಟೆಲ್‌ಗಳು ಸಿಸಿಟಿವಿ ಕ್ಯಾಮರಾ ಅಳವಡಿಕೆ‌ ಮಾಡಲೇಬೇಕು ಎಂದು ಅಸೋಸಿಯೇಷನ್ ಹೇಳಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಬೇಟೆಗಾಗಿ ಪೊಲೀಸರ ತಲಾಶ್: ಶಂಕಿತನ ಮತ್ತೊಂದು ದೃಶ್ಯ ಲಭ್ಯ, ಇಲ್ಲಿದೆ ಪ್ರಕರಣದ ಸಮಗ್ರ ಮಾಹಿತಿ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್​ 1ರಂದು ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದರು. ಘಟನೆ ನಂತರ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇದೀಗ ದಾಳಿ ಭೀತಿಯಿಂದ ಇತರ ಹೋಟೆಲ್​ಗಳು ಸಹ ಭದ್ರತಾ ನಿಯಮಗಳನ್ನು ಬಿಗಿಗೊಳಿಸಲು ಮುಂದಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ