AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ ಬಗ್ಗೆ ಇರೋ ಆತಂಕ ಹೇಳಿದ ಅಮೃತವರ್ಷಿಣಿ ರಜಿನಿ

ಪತಿ ಬಗ್ಗೆ ಇರೋ ಆತಂಕ ಹೇಳಿದ ಅಮೃತವರ್ಷಿಣಿ ರಜಿನಿ

ರಾಜೇಶ್ ದುಗ್ಗುಮನೆ
|

Updated on:Jun 11, 2026 | 8:38 AM

Share

ನಟಿ ರಜಿನಿ ಹಾಗೂ ಅರುಣ್ ಗೌಡ ಅವರದ್ದು ಜಿಮ್‌ನಲ್ಲಿ ಮೊಳಕೆಯೊಡೆದ ಪ್ರೀತಿ. ಅರುಣ್ ಅವರು ವೃತ್ತಿಯಲ್ಲಿ ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ಹಾಗೂ ಬಾಡಿಬಿಲ್ಡರ್. ಇಬ್ಬರೂ ಫಿಟ್ನೆಸ್ ಫ್ರೀಕ್ಸ್ ಆಗಿದ್ದರಿಂದ ಆರಂಭದಲ್ಲಿ ಜಿಮ್‌ನಲ್ಲಿ ವರ್ಕೌಟ್ ಪಾರ್ಟ್ನರ್‌ಗಳಾಗಿ ಭೇಟಿಯಾಗಿದ್ದರು. ನಂತರ ಈ ಪರಿಚಯ ಗಾಢವಾದ ಸ್ನೇಹಕ್ಕೆ ತಿರುಗಿ, ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದರು.

ನಟಿ ರಜಿನಿ ಹಾಗೂ ಅರುಣ್ ಗೌಡ ಅವರ ಮಧ್ಯೆ ಜಿಮ್​​ನಲ್ಲಿ ಪ್ರೀತಿ ಮೂಡಿತು. ಆ ಬಳಿಕ ಇಬ್ಬರೂ ಮದುವೆ ಆದರು. ಈಗ ಪತಿ ಅರುಣ್ ಕುಮಾರ್ ಬಗ್ಗೆ ಇರುವ ಭಯದ ಬಗ್ಗೆ ರಜಿನಿ ಹೇಳಿಕೊಂಡಿದ್ದಾರೆ. ‘ಜೋಡಿ ನಂಬರ್ 1’ ಶೋನಲ್ಲಿ ಇವರು ಸ್ಪರ್ಧಿಗಳಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಮನದಾಳದ ಮಾತನ್ನು ಹೇಳಿಕೊಳ್ಳುವ ಅವಕಾಶ ಇತ್ತು. ಈ ವೇಳೆ ರಜಿನಿ ಅವರು, ‘ಬಾಡಿ ಬಿಲ್ಡರ್​​ಗಳಿಗೆ ಆಯಸ್ಸು ಕಡಿಮೆ ಎಂಬ ಮಾತಿದೆ’ ಎಂದು ಆತಂಕ ಹೊರಹಾಕಿದ್ದಾರೆ. ಆಗ ಅರುಣ್ ಕುಮಾರ್ ಅವರು ಪತ್ನಿಗೆ ಧೈರ್ಯ ತುಂಬಿದ್ದಾರೆ. (VIDEO Source: Zee Kannada)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 11, 2026 08:34 AM

Follow Us