AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಬ್ ಸ್ಫೋಟ: ರಾಮೇಶ್ವರಂ ಕೆಫೆ ಪುನರಾರಂಭಿಸಲು ಅನುಮತಿ ನೀಡದ ಪೊಲೀಸರು

ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತನಿಖಾ ಹಂತದಲ್ಲಿರುವಾಗಲೇ ರಾಮೇಶ್ವರಂ ಕೆಫೆ ಪುನರಾರಂಭಿಸಲು ಕೆಫೆ ಮಾಲೀಕರು ಮುಂದಾಗಿದ್ದಾರೆ. ಶಿವರಾತ್ರಿ ದಿನದಂದೇ ಕೆಫೆ ಮತ್ತೆ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ, ಸ್ಫೋಟ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಹಿನ್ನೆಲೆ ಮಾರ್ಚ್ 8 ರಂದು ಕಫೆ ಆರಂಭಕ್ಕೆ ಅನುಮತಿ ಸಿಗುವುದು ಅನುಮಾನವಾಗಿದೆ.

ಬಾಂಬ್ ಸ್ಫೋಟ: ರಾಮೇಶ್ವರಂ ಕೆಫೆ ಪುನರಾರಂಭಿಸಲು ಅನುಮತಿ ನೀಡದ ಪೊಲೀಸರು
ಬಾಂಬ್ ಸ್ಫೋಟ: ರಾಮೇಶ್ವರಂ ಕೆಫೆ ಪುನರಾರಂಭಿಸಲು ಅನುಮತಿ ನಿರಾಕರಿಸಿದ ಪೊಲೀಸರು
Follow us
Jagadisha B
| Updated By: Rakesh Nayak Manchi

Updated on: Mar 04, 2024 | 3:20 PM

ಬೆಂಗಳೂರು, ಮಾ.4: ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್ ಸ್ಫೋಟ (Bomb Blast) ಪ್ರಕರಣ ಸಂಬಂಧ ಸಿಸಿಬಿ (CCB) ಪೊಲೀಸರು ಹಾಗೂ ಎನ್​ಐಎ (NIA) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಕೆಫೆ ಮಾಲೀಕರು ಶಿವರಾತ್ರಿ ದಿನದಂದು ಕೆಫೆ ಪುನರಾರಂಭಿಸಲು ಮುಂದಾಗಿದ್ದಾರೆ. ಆದರೆ, ತನಿಖೆ ಹಂತದಲ್ಲಿ ಇರುವುದರಿಂದ ಮಾರ್ಚ್ 8 ರಂದು ಕೆಫೆ ರೀ ಓಪನ್ ಮಾಡಲು ಅನುಮತಿ ಸಿಗುವುದು ಬಹುತೇಕ ಅನುಮಾನವಾಗಿದೆ.

ಸ್ಫೋಟ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್​ಐಎ ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕಿಳಿದಿದೆ. ಈ ನಡುವೆ ಕೆಫೆ ಪುನರಾರಂಭಕ್ಕೆ ಮಾಲೀಕರು ಮುಂದಾಗಿದ್ದರೂ ಸ್ಥಳೀಯ ಪೊಲೀಸರಿಂದ ಎನ್​ಒಸಿ ಪಡೆಯುವುದು ಅವಶ್ಯಕವಾಗಿದೆ. ಆದರೆ, ತನಿಖಾ ಹಂತವಾಗಿ ಕೆಫೆ ತೆರೆಯಲು ಪೊಲೀಸರು ಅನುಮತಿ ನೀಡಿಲ್ಲ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪರಿಣಾಮ: ಬೆಂಗಳೂರಿನ ಹೋಟೆಲ್​​ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು, ಇಲ್ಲಿದೆ ವಿವರ

ಕಫೆ ಆರಂಭದ ಬಗ್ಗೆ ಮಾತನಾಡಿದ್ದ ಮಾಲೀಕ ರಾಘವೇಂದ್ರ ರಾವ್, ಶಿವರಾತ್ರಿಯಂದು ರಾಮೇಶ್ವರಂ ಪುನರ್ ಜನ್ಮವಾಗುತ್ತೆ. ಯಾವುದೇ ವ್ಯವಹಾರಿಕ ದ್ವೇಷದಿಂದ ಕೃತ್ಯ ನಡೆದಿಲ್ಲ. ಹೋಟೆಲ್ ಬ್ಯುಸಿನೆಸ್ ಮಾಡುವವರು ಈ ರೀತಿ ಕೃತ್ಯ ಮಾಡುವುದಿಲ್ಲ. ಅನ್ ಐಡೆಂಟಿಪೈಡ್ ಐಟಂ ಆಗಿದ್ದರೆ ನಾವು ಅದನ್ನು ಆ್ಯಪ್​ನಲ್ಲಿ ಹಾಕುತ್ತಿದೆವು ಎಂದರು.

ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸಲಿರುವ ಕೆಫೆ

ನವಂಬರ್​ನಲ್ಲಿ ಬಸವೇಶ್ವರ ನಗರದ ಬ್ರಾಂಚ್​ನಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಕೂಡಲೆ ಪೊಲೀಸರ ಗಮನಕ್ಕೆ ತಂದಿದ್ದೇವೆ. ಅದು ಯಾವುದೇ ಸಂಶಯಾಸ್ಪದ ವಸ್ತುಗಳು ಇರಲಿಲ್ಲ. ಪಂಚೆ ಮತ್ತು ವಸ್ತ್ರ ಇತ್ತು ಅಷ್ಟೇ. ಆದರೀಗ ಬಾಂಬ್ ಸ್ಫೋಟಗೊಂಡಿದೆ. ನಾವು ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸಲಿದ್ದೇವೆ ಎಂದು ರಾಘವೇಂದ್ರ ರಾವ್ ಈಗಾಗಲೇ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ