AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಶುರುವಾಯ್ತು ಜಲಕ್ಷಾಮ; ಎಗ್ಗಿಲ್ಲದೇ ನಡೀತಿದೆ ಟ್ಯಾಂಕರ್ ಮಾಫಿಯ

ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು ವಾರಕ್ಕೊಮ್ಮೆ ಬರೋ ಅಲ್ಪಸ್ವಲ್ಪ ನೀರನ್ನೇ ಕಾಯುವ ಇಲ್ಲಿನ ಜನರು, ದುಪ್ಪಟ್ಟು ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸಿದ್ರೂ ನೀರಿನ ಬವಣೆ ಮುಗಿಯುತ್ತಿಲ್ಲ. ಜೊತೆಗೆ ನೀರಿನ ಮಾಫಿಯಾದಿಂದ ಬೇಸತ್ತಿದ್ದಾರೆ.

ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಶುರುವಾಯ್ತು ಜಲಕ್ಷಾಮ; ಎಗ್ಗಿಲ್ಲದೇ ನಡೀತಿದೆ ಟ್ಯಾಂಕರ್ ಮಾಫಿಯ
ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಶುರುವಾಯ್ತು ಜಲಕ್ಷಾಮ; ಎಗ್ಗಿಲ್ಲದೇ ನಡೀತಿದೆ ಟ್ಯಾಂಕರ್ ಮಾಫಿಯ
TV9 Web
| Edited By: |

Updated on: Mar 04, 2024 | 3:19 PM

Share

ಬೆಂಗಳೂರು, ಮಾರ್ಚ್​.04: ರಾಜಧಾನಿಯ ಜನರು ನೀರಿಲ್ಲ ನೀರಿಲ್ಲ ಅಂತಾ ಪರದಾಡುತ್ತಿದ್ರೆ, ಅತ್ತ ಭೂಮಿಯ ಒಡಲಲ್ಲಿರೋ ಅಲ್ಪಸ್ವಲ್ಪ ನೀರು ಕೂಡ ಟ್ಯಾಂಕರ್ ಮಾಫಿಯಾದಿಂದ (Tanker Mafia) ಜನರಿಗೆ ಸಿಗದಂತಾಗಿದೆ. ಸಿಲಿಕಾನ್ ಸಿಟಿ (Bengaluru) ಜನರ ನೀರಿನ ಸಮಸ್ಯೆಯನ್ನ (Water Crisis) ಅನಾವರಣ ಮಾಡ್ತಿರೋ ಟಿವಿ9 , ಮಹದೇವಪುರ ವಲಯದ ರಾಮಗೊಂಡನಹಳ್ಳಿಯಲ್ಲಿ ನಡೆಯುತ್ತಿರುವ ಟ್ಯಾಂಕರ್ ಮಾಫಿಯಾ ಬಿಚ್ಚಿಟ್ಟಿದೆ. ಊರಿನ ಜನರು ನೀರಿಲ್ಲದೇ ಪರದಾಡುತ್ತಿದ್ರೆ ಇರೋ ಬೋರ್ ವೆಲ್ ನೀರೆಲ್ಲ ಕಂಡವರ ಪಾಲಾಗ್ತಿದ್ದು, ರಾಮಗೊಂಡನಹಳ್ಳಿಯ ಜನರು ಕಂಗಾಲಾಗಿಬಿಟ್ಟಿದ್ದಾರೆ.

ಸದ್ಯ ರಾಜ್ಯ ರಾಜಧಾನಿಯ ಬಹುತೇಕ ಏರಿಯಾಗಳಲ್ಲಿ ನೀರಿಲ್ಲದೇ ಜನ ನರಳುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಟಿವಿ9 ಕೂಡ ಬೆಂಗಳೂರಿನ ಜಲದಾಹವನ್ನ ನಿರಂತರವಾಗಿ ತೆರೆದಿಡುತ್ತಿದೆ. ಅತ್ತ ಅತಿ ಹೆಚ್ಚು ಕೆರೆಗಳನ್ನ ಹೊಂದಿರೋ ಮಹದೇವಪುರ ವಲಯದ ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿಬಿಟ್ಟಿದೆ. ವಾರಕ್ಕೊಮ್ಮೆ ಬರೋ ಅಲ್ಪಸ್ವಲ್ಪ ನೀರನ್ನೇ ಕಾಯುವ ಇಲ್ಲಿನ ಜನರು, ದುಪ್ಪಟ್ಟು ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸಿದ್ರೂ ನೀರಿನ ಬವಣೆ ಮುಗಿಯುತ್ತಿಲ್ಲ.

ಈ ಊರಿನ ಜನ ನೀರಿಲ್ಲ ಅಂತಾ ಪರದಾಡುತ್ತಿದ್ರೆ, ಇದೇ ಊರಿನ ಮುಖ್ಯ ರಸ್ತೆಯಲ್ಲೇ ಸ್ಥಳೀಯರಿಂದಲೇ ಟ್ಯಾಂಕರ್ ಮಾಫಿಯಾ ಎಗ್ಗಿಲ್ಲದೇ ನಡೀತಿದೆ. ಎಲ್ಲೆಲ್ಲಿ ಚೆನ್ನಾಗಿ ನೀರು ಸಿಗುತ್ತೋ ಅಲ್ಲಿ ಬೋರ್ ವೆಲ್ ಕೊರೆಸಿ ರಸ್ತೆಬದಿ ಟ್ಯಾಂಕರ್ ಗಳಿಗೆ ಫಿಲ್ಲಿಂಗ್ ಪಾಯಿಂಟ್ ಮಾಡಿ ಪ್ರತಿನಿತ್ಯ ನೂರಾರು ಟ್ಯಾಂಕರ್ ನೀರನ್ನ ಮಾರಾಟ ಮಾಡಲಾಗ್ತಿದೆ. ಈಗಾಗಲೇ ನೀರಿಲ್ಲದೇ ಬಸವಳಿದ ಜನರಿಗೆ ಇದೀಗ ಟ್ಯಾಂಕರ್ ಮಾಫಿಯಾದಿಂದ ಇತರೆ ಬೋರ್ ವೆಲ್ ನೀರು ಕೂಡ ಬಂದ್ ಆಗಿರೋದು ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ನೀವು ಮುಸ್ಲಿಮರ ಕೈ ಕಡೆದರೂ ಅವರು ನಿಮಗೇ ಮತ ಹಾಕುತ್ತಾರೆ: ಪ್ರತಾಪ್​ ಸಿಂಹ

ಇನ್ನು ಊರಿನಲ್ಲಿ ನಡೀತಿರೋ ಅಕ್ರಮ ಟ್ಯಾಂಕರ್ ದಂಧೆಗೆ ಕಡಿವಾಣ ಹಾಕಿ ಅಂತಾ ಕಳೆದ 5 ವರ್ಷಗಳಿಂದ ಬಿಬಿಎಂಪಿಗೆ ಪತ್ರ ಬರೆದ್ರೂ ಯಾರೊಬ್ಬರೂ ಕ್ರಮ ತೆಗೆದುಕೊಂಡಿಲ್ಲ. ಅತ್ತ ಯಾರಾದ್ರೂ ಟ್ಯಾಂಕರ್ ಮಾಫಿಯಾ ಬಗ್ಗೆ ಮಾತಾಡಿದ್ರೆ ಧಮ್ಕಿ ಹಾಕೋದು ಕೂಡ ನಡೀತಿರೋ ಆರೋಪ ಕೇಳಿ ಬರ್ತಿದ್ದು, ಟ್ಯಾಂಕರ್ ದಂಧೆ ಬಗ್ಗೆ ತುಟಿಬಿಚ್ಚೋಕು ಕೂಡ ಜನ ಹೆದರುವಂತಾಗಿದೆ. ಸಮಸ್ಯೆ ಅರಿವಿದ್ರೂ ಸೈಲೆಂಟ್ ಆಗಿರೋ ಅಧಿಕಾರಿಗಳ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ನೀರಿನ ಅಭಾವದಿಂದ ರಾಮಗೊಂಡನಹಳ್ಳಿಯ ಜನರು ತತ್ತರಿಸಿದ್ರೆ, ಮತ್ತೊಂದೆಡೆ ಟ್ಯಾಂಕರ್ ಮಾಫಿಯ ಜನರ ನಿದ್ದೆಗೆಡಿಸಿದೆ. ಇಷ್ಟೆಲ್ಲ ಸಮಸ್ಯೆಯಿದ್ರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮೌನ ಮುರಿಯದೇ ಇರೋದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಸದ್ಯ ಸಂಬಂಧಪಟ್ಟವರು ಇನ್ನಾದ್ರೂ ಎಚ್ಚೆತ್ತುಕೊಂಡು ಜನರ ಸಮಸ್ಯೆಗೆ ಪರಿಹಾರ ನೀಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ