ರಾಮೇಶ್ವರಂ ಕೆಫೆ ಸ್ಫೋಟ ತನಿಖೆ ಅಖಾಡಕ್ಕೆ ಎನ್​ಐಎ: ಕಾರ್ಯಾಚರಣೆ ಹೇಗಿರಲಿದೆ ಗೊತ್ತೇ?

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಘಟನೆಯ ತೀವ್ರತೆಯನ್ನು ಅರಿತಿರುವ ಸರ್ಕಾರ ಇದೀಗ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಎನ್​ಐಎ ತನಿಖೆ ರಾಜ್ಯಪೂಲಿಸರಿಗಿಂತ ಭಿನ್ನವಾಗಿದ್ದು ಯಾವ ರೀತಿ ಪ್ರಕರಣವನ್ನು ಬಯಲಿಗೆಳೆಯಲಿದೆ, ಶಂಕಿತನ ಬಂಧನಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ? ಒಟ್ಟಾರೆ ಎನ್​ಐಎ ತನಿಖೆಯ ಪ್ರಕ್ರಿಯೆ ಹೇಗಿರಲಿದೆ ಎಂಬುದನ್ನು ತಿಳಿಯುವ ಪ್ರಯತ್ನ ಇಲ್ಲಿದೆ.

ರಾಮೇಶ್ವರಂ ಕೆಫೆ ಸ್ಫೋಟ ತನಿಖೆ ಅಖಾಡಕ್ಕೆ ಎನ್​ಐಎ: ಕಾರ್ಯಾಚರಣೆ ಹೇಗಿರಲಿದೆ ಗೊತ್ತೇ?
ಎನ್​ಐಎ
Follow us
| Updated By: ಗಣಪತಿ ಶರ್ಮ

Updated on:Mar 04, 2024 | 11:46 AM

ಬೆಂಗಳೂರು, ಮಾರ್ಚ್​​ 4: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ್ದ ಸ್ಪೋಟ (Bomb Blast) ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ತನಿಖೆ ನಡೆಸಲಿದೆ. ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಎನ್​ಐಎ ಶೀಘ್ರ ತನಿಖೆಯ ಅಖಾಡಕ್ಕಿಳಿಯಲಿದೆ. ಎನ್​​ಐಎ ತನಿಖೆಯ ವೈಖರಿ ಹೇಗಿರಲಿದೆ? ಶಂಕಿತನ ಬಗ್ಗೆ ಮಾಹಿತಿ ಕಲೆಹಾಕಲು ಎನ್​ಐಎ ಅನುಸರಿಸುವ ವಿಧಾನವೇನು? ಎನ್​ಐ ಅಧಿಕಾರಿಗಳು ಏನೇನು ಮಾಡಲಿದ್ದಾರೆ? ತನಿಖೆಯ ಮುಂದಿನ ಆಯಾಮ ಹೇಗಿರಲಿದೆ ಎಂಬುದನ್ನು ತಿಳಿಯುವ ಪ್ರಯತ್ನ ಇಲ್ಲಿದೆ.

ಹೀಗಿರಲಿದೆ ಎನ್​ಐಎ ತನಿಖೆ

  1. ಆರ್​​ಸಿ ದಾಖಲಿಸಿಕೊಂಡ ಬಳಿಕ ಎನ್​ಐಎ ಅಧಿಕಾರಿಗಳು ಮತ್ತೊಮ್ಮೆ ಘಟನಾ ಸ್ಥಳಕ್ಕೆ ಆಗಮಿಸಲಿದ್ದಾರೆ.
  2. ಎನ್​ಐಎ ಅಧಿಕಾರಿಗಳು ಘಟನಾ ಸ್ಥಳದ ಮರುಪರಿಶೀಲನೆ ನಡೆಸಲಿದ್ದಾರೆ.
  3. ಈ ಹಿಂದೆ ತನಿಖೆ ಕೈಗೊಂಡ ತನಿಖಾ ತಂಡದಿಂದ ಕಡತಗಳ ಹಸ್ತಾಂತರ ನಡೆಯಲಿದೆ.
  4. ಈವರೆಗೂ ನಡೆಸಿದ ತನಿಖೆ ಹಾಗೂ ಸಿಕ್ಕ ಮಾಹಿತಿಗಳನ್ನು ಎನ್​ಐಎ ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ.
  5. ಈಗಿನ ತನಿಖಾ ವಿಧಾನ ಬಿಟ್ಟು ಬೇರೆ ಆಯಾಮದಲ್ಲೇ ಎನ್​ಐಎ ತನಿಖಾ ತಂಡ ತನಿಖೆ ನಡೆಸಲಿದೆ.
  6. ಭಿನ್ನವಾಗಿ ಶಂಕಿತನ ಜಾಡು ಹಿಡಿಯಲು ಎನ್​ಐಯ ಮುಂದಾಗಲಿದೆ.
  7. ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳಿಂದಲೇ ಎನ್​ಐಎ ಭಿನ್ನವಾಗಿ ಆರೋಪಿಯ ಜಾಡು ಹಿಡಿಯುತ್ತದೆ.
  8. ಸ್ಫೋಟಕ್ಕೆ ಬಳಸಿದ ವಸ್ತುಗಳ ಆಧಾರದ ಮೇಲೆ ತನಿಖೆ ನಡೆಸಲಿದೆ.
  9. ಸ್ಪೋಟಕ್ಕೆ ಬಳಸಿದ ವಸ್ತುಗಳು ಯಾವುದು ಎಂದು ಮೊದಲು ಎನ್​ಐಎ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
  10. ಸ್ಪೋಟಕ್ಕೆ ಬಳಸಿದ ವಸ್ತುಗಳ ಮಾರ್ಕೆಟ್​​​ನ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
  11. ಅಧಿಕೃತ ಹಾಗೂ ಅನಧಿಕೃತ ಮಾರಾಟಗಾರರ ಇಂಚಿಂಚು ಮಾಹಿತಿ ಕಲೆಹಾಕಲಿದ್ದಾರೆ.
  12. ಪತ್ತೆಯಾದ ಸ್ಫೋಟಕಕ್ಕೆ ಬಳಸಿದ ವಸ್ತು ಮಾರಿದ ವ್ಯಕ್ತಿಯ ಪತ್ತೆಗೆ ಕ್ರಮ ಕೈಗೊಳ್ಳಲಿದ್ದಾರೆ.
  13. ಕಚ್ಚಾ ವಸ್ತುಗಳ ಕಾಳಸಂತೆಯ ಬಗ್ಗೆಯೂ ಮಾಹಿತಿ ಪಡೆಯಲಿದೆ.
  14. ಶಂಕಿತನ ಒಂದು ಫೋಟೊ ಮುಖಾಂತರವೇ ಇಡೀ ದೇಶದಲ್ಲಿ ಪರಿಶೀಲನೆ ನಡೆಸಲಾಗುತ್ತದೆ.
  15. ಎನ್​​ಐಎ ರೇಡಾರ್​​ನಲ್ಲಿ ಕೆಲವೇ ನಿಮಿಷಗಳಲ್ಲಿ ಸಂಶಯಾಸ್ಪದ ವ್ಯಕ್ತಿಯ ಮಾಹಿತಿ ಸಿಗುತ್ತದೆ.
  16. ದೇಶದ ಎಲ್ಲಾ ಕಡೆ ಶಂಕಿತನ ಬಗ್ಗೆ ಮಾಹಿತಿ ಜೊತೆಗೆ ಪರಿಶೀಲನೆ ನಡೆಯುತ್ತದೆ.
  17. ಎನ್​​ಐಎ ಅಧಿಕಾರಿಗಳು ತಮ್ಮದೇ ಆದ ಮಾಹಿತಿದಾರರನ್ನು ಹೊಂದಿರುತ್ತಾರೆ.
  18. ಪ್ರತಿಕಡೆಯೂ ತಮ್ಮದೇ ಆದ ಪೇಯ್ಡ್ ಇನ್ಫಾರ್ಮೆಂಟ್ಸ್ ಮೂಲಕ ಮಾಹಿತಿ ಸಂಗ್ರಹ ನಡೆಯುತ್ತದೆ.
  19. ರಾಜ್ಯ ಹಾಗೂ ಹೊರರಾಜ್ಯದಲ್ಲೂ ಸಹ ಮಾಹಿತಿದಾರರಿಂದ ಪರಿಶೀಲನೆ ಮಾಡಲಾಗುತ್ತದೆ.
  20. ಒಂದು ಕಡೆ ಸಣ್ಣ ಸುಳಿವು ಸಿಕ್ಕರೂ ಕೆಲವೇ ನಿಮಿಷದಲ್ಲಿ ಶಂಕಿತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಬೇಟೆಗಾಗಿ ಪೊಲೀಸರ ತಲಾಶ್: ಶಂಕಿತನ ಮತ್ತೊಂದು ದೃಶ್ಯ ಲಭ್ಯ, ಇಲ್ಲಿದೆ ಪ್ರಕರಣದ ಸಮಗ್ರ ಮಾಹಿತಿ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್​ 1ರಂದು ಸಂಭವಿಸಿದ್ದ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಘಟನೆ ನಂತರ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆದಾಗ್ಯೂ, ಘಟನೆ ನಡೆದು 3 ದಿನ ಕಳೆದರೂ ಆರೋಪಿಯನ್ನು ಬಂಧಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಇದೀಗ ಘಟನೆಯ ತನಿಖೆಯ ಹೊಣೆಯನ್ನು ಎನ್​ಐಎ ವಹಿಸಿಕೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:36 am, Mon, 4 March 24