AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ದಂಧೆ, ಕಣ್ಮುಚ್ಚಿ ಕುಳಿತಿದೆಯಾ ಎಸ್​ಐಟಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಡಿಎಂ ಮಾಡಿ. ಡಿಎಂ ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ. ಪ್ರಜ್ವಲ್ ರೇವಣ್ಣನ ಎಲ್ಲಾ ವಿಡಿಯೋಗಳಿವೆ. ಡಿಎಂ ಮಾಡಿ ಲೈಕ್ ಮಾಡಿ ವಿಡಿಯೋ ಬೇಕಿದ್ರೆ ಹಣ ಕಳಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ದಂಧೆ, ಕಣ್ಮುಚ್ಚಿ ಕುಳಿತಿದೆಯಾ ಎಸ್​ಐಟಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಸಾಮಾಜಿಕ ಜಾಲತಾಣದಲ್ಲಿ ದಂಧೆ
ರಾಚಪ್ಪಾಜಿ ನಾಯ್ಕ್
| Edited By: |

Updated on: Jun 05, 2024 | 9:06 AM

Share

ಬೆಂಗಳೂರು, ಜೂನ್.05: ಹಾಸನ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna) ಅವರದ್ದು ಎನ್ನಲಾದ ವಿಡಿಯೋ ಇಟ್ಟುಕೊಂಡು ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಡಿಎಂ ಮಾಡಿ. ಡಿಎಂ( direct message) ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಲೈಕ್​ಗಳಿಗಾಗಿ ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ. ವಿಡಿಯೋ ಬೇಕೆಂದರೆ ಇಂತಿಷ್ಟು ಹಣ ನೀಡಬೇಕು ಎಂದು ಹಣ ಮಾಡುವ ಅನಿಷ್ಟ ದಂಧೆಗೆ ಕೈ ಹಾಕಿದ್ದಾರೆ.

ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಕೆಲವು ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಇಡೀ ಹಾಸನದೆಲ್ಲೆಡೆ ಹರಿದಾಡಿತ್ತು. ಕಿಡಿಗೇಡಿಗಳು ಪ್ರಜ್ವಲ್ ರೇವಣ್ಣ ಹೆಸರು ಹಾಳು ಮಾಡುವ ಉದ್ದೇಶದಿಂದ ಹಾಸನದ ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಕಡೆ ಪೆನ್ ಡ್ರೈವ್​ಗಳನ್ನು ಇಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ವಿಡಿಯೋ ಹರಿಬಿಟ್ಟಿದ್ದರು. ಮಹಿಳೆಯ ಮುಖ ಕೂಡ ಬ್ಲರ್ ಮಾಡಿರಲಿಲ್ಲ. ವಿಡಿಯೋ ವೈರಲ್ ಆದ ಬಳಿಕ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಅದೆಷ್ಟೋ ಮಹಿಳೆಯರು ಸಾಯಲು ಯತ್ನಿಸಿದ್ದಾರೆ. ಕುಟುಂಬದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಮಾನನಷ್ಟ ಅನುಭವಿಸಿದ್ದಾರೆ. ಇದೆಲ್ಲ ಒಂದು ಕಡೆ ಆದ್ರೆ ಮತ್ತೊಂದೆಡೆ ಕೆಲ ಕಿಡಿಗೇಡಿಗಳು ಇದೇ ವಿಡಿಯೋಗಳನ್ನು ಇಟ್ಟುಕೊಂಡು ದಂಧೆಗೆ ಇಳಿದಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಡಿಎಂ ಮಾಡಿ. ಡಿಎಂ ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ. ಪ್ರಜ್ವಲ್ ರೇವಣ್ಣನ ಎಲ್ಲಾ ವಿಡಿಯೋಗಳಿವೆ. ಡಿಎಂ ಮಾಡಿ ಲೈಕ್ ಮಾಡಿ ವಿಡಿಯೋ ಬೇಕಿದ್ರೆ ಹಣ ಕಳಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದಂಧೆಗಿಳಿದಿದ್ದಾರೆ. ಲೈಕ್ ಗೋಸ್ಕರ, ಹಣಕ್ಕಾಗಿ ಪ್ರಜ್ವಲ್ ರೇವಣ್ಣ ವಿಡಿಯೋ ಆಮಿಷವೊಡ್ಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಂತ್ರಸ್ತೆಯರ ಫೋಟೋ ಬಳಸಿ ದಂಧೆ ನಡೆಸಲಾಗುತ್ತಿದೆ. ಕೆಲ‌ ಸ್ಟಾರ್‌ ನಟಿಯರ ಫೋಟೋ ಬಳಸಿಯೂ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ.

ಇದನ್ನೂ ಓದಿ: ಸುಧಾಕರ್ ಗೆಲುವು ಬೆನ್ನಲ್ಲೇ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜು ಪುಡಿ ಪುಡಿ

ಸಂತ್ರಸ್ತೆಯರಲ್ಲದೆ ತೆಲುಗು ನಾಯಕ ನಟಿಯರ ಫೊಟೋ ಬಳಸಿ ವಿಡಿಯೋ ಇದೆ ಎಂದು ವಂಚನೆ ಮಾಡಲಾಗುತ್ತಿದೆ. ಈಗಾಗಲೆ ಎಸ್ಐಟಿ ವಿಡಿಯೋಗಳನ್ನ ಶೇರ್ ಮಾಡದಂತೆ ಸುತ್ತೋಲೆ ಹೊರಡಿಸಿದೆ. ಆದರೂ ವಿಡಿಯೋಗಳನ್ನ ಹಣಕ್ಕಾಗಿ, ಲೈಕ್ ಗಾಗಿ ಬಳಕೆ ಮಾಡಲಾಗುತ್ತಿದ್ದು ಈ ಬಗ್ಗೆ ಆದಷ್ಟು ಬೇಗ ಗಮನ ಹರಿಸಿ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕಿದೆ.

ಪ್ರಜ್ವಲ್ ವಿಡಿಯೋ ಪಡೆಯಲು ಕೆಲವರು ಮುಗಿಬಿದ್ದು ವಿಡಿಯೋ ಪಡೆಯುತ್ತಿದ್ದಾರೆ ಎಬ ಮಾಹಿತಿ ಸಿಕ್ಕಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ವಿಡಿಯೋ ಟ್ರೆಂಡಿಂಗ್ ಆಗಿದೆ. ವಿಡಿಯೋ ವೈರಲ್ ಆಗ್ತಿರೋದನ್ನ ತಡೆಯೋದ್ರಲ್ಲಿ ವಿಫಲವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ