- Kannada News Photo gallery A Beautiful art Made of waste Electric Material in orion mall bengaluru news kannada news
ಕಸದಿಂದ ರಸ: ಎಲೆಕ್ಟ್ರಿಕ್ ಇ ವಸ್ತುಗಳಿಂದ ತಯಾರಾದ ಸುಂದರ ಚಿತ್ರ, ಸಿಲಿಕಾನ್ ಸಿಟಿ ಮಂದಿ ಫಿದಾ
ನಗರದ ಒರಿಯನ್ ಮಾಲ್ನಲ್ಲಿ ವೇಸ್ಟೇಜ್ನಲಿ ಇ ವಸ್ತುಗಳನ್ನ ಬಳಸಿಕೊಂಡು ಮನುಷ್ಯನನ್ನ ಹೋಲುವ ಸುಂದರ ನೇಚರ್ ನಾ ಚಿತ್ರ ಬಿಡಿಸಲಾಗಿದೆ. ಈ ಚಿತ್ರ 25 ಅಡಿ ಇದ್ದು ನೋಡುಗರ ಗಮನ ಸೆಳೆಯುತ್ತಿದೆ. ಇಂತಹ ಆರ್ಟ್ ಗಳನ್ನ ಮನೆಯಲ್ಲಿ ಕೂಡ ಮಾಡಬಹುದು ಅಂತ ಇ ವೇಸ್ಡ್ ಮೋರಲ್ ನಾ ಕಲಾಕಾರಾರು ಮೇಸಜ್ ಕೊಟ್ಟಿದ್ದಾರೆ.
Updated on: Jun 05, 2024 | 6:41 AM

ರಾಜಧಾನಿ ಬೆಂಗಳೂರು ದಿನದಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದು, ಎಲ್ಲವೂ ಎಲೆಕ್ಟ್ರಿಕ್ ಮಯವಾಗುತ್ತಿದೆ. ಹೊಸ ಎಲೆಕ್ಟ್ರಿಕ್ ವಸ್ತುಗಳು ಬರುತ್ತಿದ್ದಂತೆ ಹಳೆಯ ವಸ್ತುಗಳನ್ನ ಗುಜರಿಗೆ ಹಾಕುವ ಈ ಯುಗದಲ್ಲಿ, ಎಲ್ಲಾ ಹಳೆಯ ಎಲೆಕ್ಟ್ರಿಕ್ ವಸ್ತುಗಳನ್ನ ಬಳಸಿಕೊಂಡು ಒಂದು ಸುಂದರ ಕಲಾಕೃತಿ ಮೂಡಿದೆ.

ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪ್ರತಿದಿನ ಹೊಸ ಹೊಸ ಕಂಪ್ಯೂಟರ್ಗಳು, ಪೋನ್ಗಳು, ಟಿವಿಗಳು ಬರುತ್ತಿವೆ. ಹಳೆಯ ಇ ವಸ್ತುಗಳು ಮೂಲೆ ಗುಂಪಾಗುತ್ತಿವೆ. ಇಂತಹ ಹಳೆಯ ವಸ್ತುಗಳನ್ನೆ ಒಂದೆಡೆ ಸಂಗ್ರಹಿಸಿ ಒಂದು ಚಿತ್ರಬಿಡಿಸಿದ್ದು, ನೋಡುಗರನ್ನ ಆ ಚಿತ್ರ ಗಮನ ಸೆಳೆಯುತ್ತಿವೆ.

ನಗರದ ಒರಿಯನ್ ಮಾಲ್ನಲ್ಲಿ ವೇಸ್ಟೇಜ್ನಲಿ ಇ ವಸ್ತುಗಳನ್ನ ಬಳಸಿಕೊಂಡು ಮನುಷ್ಯನನ್ನ ಹೋಲುವ ಸುಂದರ ನೇಚರ್ ನಾ ಚಿತ್ರ ಬಿಡಿಸಲಾಗಿದೆ. ಈ ಚಿತ್ರ 25 ಅಡಿ ಇದ್ದು ನೋಡುಗರ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಕೀಬೋರ್ಡ್ಗಳು, ರಿಮೋಟ್ ಕಂಟ್ರೋಲ್‌ಗಳು, ಇಂಟರ್‌ನೆಟ್ ಕೇಬಲ್‌ಗಳು, ಎಕ್ಸಾಟ್ ಫ್ಯಾನ್‌ಗಳು, ವಿಡಿಯೋ ಕಾನ್ಫೆರೆನ್ಸ್ ಉಪಕರಣಗಳು, ಅನಲಾಗ್ ಕ್ಯಾಸೆಟ್‌ಗಳು, ಕಾರ್ಡ್ಲೆಡ್ ಫೋನ್‌ಗಳು, ಸಿಡಿಗಳು, ಡಿವಿಡಿಗಳು ಮುಂತಾದ ವಿದ್ಯುನ್ಮಾನ ತ್ಯಾಜ್ಯ ಇ-ವೇಸ್ಟ್ಗಳಿಂದ ಬಳಸಿಕೊಂಡು ಎರಡು ತಿಂಗಳು ಕಾಲ ಶ್ರಮವಹಿಸಿ ಚಿತ್ರ ಬಿಡಿಸಲಾಗಿದೆ.

ಅಂದಹಾಗೇ ಇನ್ನು ಎಷ್ಟೇ ಟೆಕ್ನಾಲಜಿ ಬಂದ್ರು ಹಳೆಯ ವಸ್ತುಗಳಿಂದ ನಾವು ಹೊಸದಾಗಿ ಏನಾದ್ರು ಮಾಡಬಹುದು. ಯಾವ ವಸ್ತುಗಳು ಕೂಡ ವೇಸ್ಟ್ ಆಗೋದಿಲ್ಲ. ಇಂತಹ ಆರ್ಟ್ ಗಳನ್ನ ಮನೆಯಲ್ಲಿ ಕೂಡ ಮಾಡಬಹುದು ಅಂತ ಇ ವೇಸ್ಡ್ ಮೋರಲ್ ನಾ ಕಲಾಕಾರಾರು ಮೇಸಜ್ ಕೊಟ್ಟಿದ್ದಾರೆ.

ಇನ್ನು, ಮನೆಗಳಲ್ಲಿ ಎಷ್ಟೊ ಹಳೆಯ ವಸ್ತುಗಳು ಬಳಕೆ ಬರಲಿಲ್ಲ ಅಂದ್ರೆ ಗುಜರಿಗೆ ಹಾಕ್ತಿವಿ. ಅಥವಾ ರಸ್ತೆಗಳಲ್ಲಿ ಎಸೆದು ಬಿಡ್ತಿವಿ. ಆದ್ರೆ ಈ ಆರ್ಟ್ ನೋಡಿದ ಮೇಲೆ ಎಲ್ಲಾ ವಸ್ತುಗಳನ್ನ ಬಳಕೆ ಬರ್ತಾವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. ತುಂಬ ಸೂಕ್ಷ್ಮವಾಗಿ ಇ ಆರ್ಟ್ ಮಾಡಿದ್ದಾರೆ ಅಂತ ಸಿಲಿಕಾನ್ ಮಂದಿ ಸಂತೋಷ ವ್ಯಕ್ತಪಡಿಸಿದ್ರು.

ಒಟ್ನಲ್ಲಿ, ಪರಿಸರ ದಿನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಲಾಕೃತಿ ರಚನೆ ಮಾಡಿದ್ದು, ಇನ್ನು ಒಂದು ವರ್ಷಗಳ ಕಾಲ ಒರಿಯನ್ ಮಾಲ್ ನಲ್ಲಿ ಇರಲಿದ್ದು, ಜನರು ಇ ಆರ್ಟ್ ಅನ್ನ ನೋಡಬಹುದಾಗಿದೆ.



