Updated on:Jun 05, 2024 | 1:47 PM
ಆಂಧ್ರ ಪ್ರದೇಶ ಚುನಾವಣೆಗಳಲ್ಲಿ ತಮ್ಮ ಮೈತ್ರಿಕೂಟದ ಪ್ರಚಂಡ ವಿಜಯದ ನಂತರ ನಟ, ಯುವ ರಾಜಕೀಯ ನೇತಾರ ಪವನ್ ಕಲ್ಯಾಣ್ ಅವರು ಪತ್ನಿ ಮತ್ತು ಮಗನ ಜೊತೆಗೆ ತೆರಳಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದರು.
ಆಂಧ್ರಪ್ರದೇಶ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ನಂತರ ತೆಲುಗು ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರು ಪತ್ನಿ ಅನ್ನಾ ಲೆಜ್ನೆವಾ ಮತ್ತು ಪುತ್ರ ಜೊತೆಗೂಡಿ ಚಂದ್ರಬಾಬು ನಾಯ್ಡು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಆಂಧ್ರಪ್ರದೇಶದ ಚುನಾವಣೆಯಲ್ಲಿ ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ ಪವನ್ ಕಲ್ಯಾಣ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಆಂಧ್ರಪ್ರದೇಶದಾದ್ಯಂತ ಸಂಭ್ರಮಾಚರಣೆಗಳು ನಡೆದವು. ರಾಜಕೀಯ ಯಶಸ್ಸಿನ ನಡುವೆ ಅವರು ವೈಯಕ್ತಿಕವಾಗಿ ವಿಜಯದ ಕ್ಷಣವನ್ನು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಜೊತೆ ಹಂಚಿಕೊಂಡರು.
ಎನ್‌ಡಿಎ ಮೈತ್ರಿಕೂಟದ ವಿಜಯದ ಹಿನ್ನೆಲೆಯಲ್ಲಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಟಿಡಿಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಾರಾ ಚಂದ್ರಬಾಬು ನಾಯ್ಡು ಅವರನ್ನು ಅಭಿನಂದಿಸಿದರು.
ಪತ್ನಿ ಅನ್ನಾ ಲೆಜ್ನೆವಾ ಮತ್ತು ಪುತ್ರ ಶ್ರೀ ಅಕಿರಾ ನಂದನ್ ಜೊತೆಗೂಡಿ ಶ್ರೀ ನಾರಾ ಚಂದ್ರನಾಯ್ಡು ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸಿದ ಜನಸೇನಾ ಪಾರ್ಟಿಯ ಅಧ್ಯಕ್ಷರಾದ ಶ್ರೀ ಪವನ್ ಕಲ್ಯಾಣ್.
ಶ್ರೀ ನಾರಾ ಚಂದ್ರನಾಯ್ಡು ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸಿದ ಜನಸೇನಾ ಪಾರ್ಟಿಯ ಅಧ್ಯಕ್ಷರಾದ ಶ್ರೀ ಪವನ್ ಕಲ್ಯಾಣ್.
Published On - 12:03 pm, Wed, 5 June 24