ತಮ್ಮ ಮೇಲೆ ಆರೋಪಗಳು ಬಂದಾಗ ಬೇರೆಯವರ ಕಡೆ ಬೊಟ್ಟು ಮಾಡುವುದು ದೇವೇಗೌಡರ ಕುಟುಂಬಕ್ಕೆ ಅಭ್ಯಾಸವಾಗಿದೆ: ಡಿಕೆ ಸುರೇಶ್

ತಮ್ಮ ಮೇಲೆ ಆರೋಪಗಳು ಬಂದಾಗ ಬೇರೆಯವರ ಕಡೆ ಬೊಟ್ಟು ಮಾಡುವುದು ದೇವೇಗೌಡರ ಕುಟುಂಬಕ್ಕೆ ಅಭ್ಯಾಸವಾಗಿದೆ: ಡಿಕೆ ಸುರೇಶ್
|

Updated on: Jun 24, 2024 | 5:47 PM

ತಾವು ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದ ಸಂದರ್ಭಗಳಲ್ಲೆಲ್ಲ ಬೇರೆಯವರನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸುವುದು, ಅವರ ಮೇಲೆ ಗೂಬೆ ಕೂರಿಸುವುದು ಆ ಕುಟುಂಬಕ್ಕೆ ಅಭ್ಯಾಸವಾಗಿಬಿಟ್ಟಿದೆ ಎಂದು ಸುರೇಶ್ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇನ್ನು ಮುದೆ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಓಡಾಡಿಕೊಂಡಿರುತ್ತೇನೆ ಎಂದು ಅವರು ಹೇಳಿದರು.

ಬೆಂಗಳೂರು: ಸೂರಜ್ ರೇವಣ್ಣ (Suraj Revanna) ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮಾಜಿ ಸಂಸದ ಡಿಕೆ ಸುರೇಶ್ (DK Suresh) ನೀಡಿದ ಪ್ರತಿಕ್ರಿಯೆ ಆಶ್ಚರ್ಯ ಮೂಡಿಸುತ್ತದೆ. ಅದನ್ನು ಅವರು ವ್ಯಂಗ್ಯವಾಗಿ ಹೇಳಿದರೋ ಅದಥವಾ ಸಹಜವಾಗಿ ಹೇಳಿದರೋ ಗೊತ್ತಾಗಲಿಲ್ಲ. ಅದು ಮಾಜಿ ಪ್ರಧಾನಿಗಳ (Former Prime Minister) ಕುಟುಂಬ ಹಾಗಾಗಿ ನೀವ್ಯಾರೂ ಸೂರಜ್ ಬಗ್ಗೆ ಮಾತಾಡಬೇಡಿ, ನಾವು ಮಾತಾಡಿದರೆ ತಪ್ಪಾಗುತ್ತದೆ, ಅದರೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಮತ್ತ್ತು ಅವರೇ ಸೂಕ್ತವಾದ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಸುರೇಶ್ ಹೇಳಿದರು. ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಬೇರೆ ಸದಸ್ಯರ ದೃಷ್ಟಿಕೋನಗಳು ಭಿನ್ನವಾಗಿರುತ್ತವೆ. ತಾವು ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದ ಸಂದರ್ಭಗಳಲ್ಲೆಲ್ಲ ಬೇರೆಯವರನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸುವುದು, ಅವರ ಮೇಲೆ ಗೂಬೆ ಕೂರಿಸುವುದು ಆ ಕುಟುಂಬಕ್ಕೆ ಅಭ್ಯಾಸವಾಗಿಬಿಟ್ಟಿದೆ ಎಂದು ಸುರೇಶ್ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇನ್ನು ಮುದೆ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಓಡಾಡಿಕೊಂಡಿರುತ್ತೇನೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರವಿವಾರಗಳಂದೂ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಿದ್ದ ಡಿಕೆ ಸುರೇಶ್ ಸೋತಿದ್ದು ನೋವು ತಂದಿದೆ: ಜಮೀರ್ ಅಹ್ಮದ್ ಖಾನ್

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ