ರವಿವಾರಗಳಂದೂ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಿದ್ದ ಡಿಕೆ ಸುರೇಶ್ ಸೋತಿದ್ದು ನೋವು ತಂದಿದೆ: ಜಮೀರ್ ಅಹ್ಮದ್ ಖಾನ್
ಅವರನ್ನು ಸೋಲಿಸಿದ್ದು ಯಾರದ್ದೋ ಜಿದ್ದಲ್ಲ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಯೂ ಅಲ್ಲ, ಜನ ಅವರನ್ನು ಸೋಲಿಸಿದ್ದಾರೆ, ಅಂಥ ಕೆಲಸಗಾರನನ್ನು ಸೋಲಿಸಿರುವುದು ವೇದನೆಯನ್ನುಂಟು ಮಾಡುತ್ತದೆ ಎಂದು ಸಚಿವ ಹೇಳಿದರು. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಿಂದ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಪ್ರದರ್ಶನ ಬಹಳ ಚೆನ್ನಾಗಿದೆ, ಕಳೆದ ಬಾರಿ ಕೇವಲ ಒಂದು ಸೀಟು ಸಿಕ್ಕಿತ್ತು, ಈ ಬಾರಿ 9ನ ಸಿಕ್ಕಿವೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದ ಮೂರು ಬಾರಿಯ ಸಂಸದ ಡಿಕೆ ಸುರೇಶ್ (DK Suresh) ಮನೆಗೆ ಭೇಟಿ ನೀಡಿದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅಲ್ಲಿಂದ ಹೊರಬಂದ ಮೇಲೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಸುರೇಶ್ ಅವರ ಸೋಲು ಆಘಾತಕಾರಿಯಾಗಿದೆ (shocking) ಮತ್ತು ಮನಸ್ಸಿಗೆ ಬಹಳ ನೋವನ್ನುಂಟು ಮಾಡಿದೆ, ಯಾಕೆಂದರೆ ದೇಶದ ಎಲ್ಲ ಸಂಸತ್ ಸದಸ್ಯರ ಪೈಕಿ ಅತಿಹೆಚ್ಚು ಕೆಲಸ ಮಾಡಿದವರೆಂದರೆ ಸುರೇಶ್, ಅವರು ಪ್ರತಿದಿನ ತಮ್ಮ ಕ್ಷೇತ್ರದ ಯಾವುದೋ ಒಂದು ಕೆಲಸ ಇಲ್ಲವೇ ಕಾರ್ಯಕ್ರಮದಲ್ಲಿ ತೊಡಗಿರುತ್ತಿದ್ದರು. ಸಂಡೇಯಂದು ಎಲ್ಲರೂ ವಿಶ್ರಾಮ ಪಡೆಯುತ್ತಿದ್ದರೆ ಸುರೇಶ್ ಕೆಲಸ ಮಾಡುತ್ತಿದ್ದರು ಎಂದ ಜಮೀರ್ ಅಹ್ಮದ್ ಹೇಳಿದರು. ಅವರನ್ನು ಸೋಲಿಸಿದ್ದು ಯಾರದ್ದೋ ಜಿದ್ದಲ್ಲ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಯೂ ಅಲ್ಲ, ಜನ ಅವರನ್ನು ಸೋಲಿಸಿದ್ದಾರೆ, ಅಂಥ ಕೆಲಸಗಾರನನ್ನು ಸೋಲಿಸಿರುವುದು ವೇದನೆಯನ್ನುಂಟು ಮಾಡುತ್ತದೆ ಎಂದು ಸಚಿವ ಹೇಳಿದರು. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಿಂದ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಪ್ರದರ್ಶನ ಬಹಳ ಚೆನ್ನಾಗಿದೆ, ಕಳೆದ ಬಾರಿ ಕೇವಲ ಒಂದು ಸೀಟು ಸಿಕ್ಕಿತ್ತು, ಈ ಬಾರಿ 9ನ ಸಿಕ್ಕಿವೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಸೋಲನ್ನು ಸ್ಪೋರ್ಟ್ ಆಗಿ ಸ್ವೀಕರಿಸಿರುವ ಡಿಕೆ ಸುರೇಶ್ ಗೆದ್ದ ಡಾ ಮಂಜುನಾಥ್ ರನ್ನು ಅಭಿನಂದಿಸಿದರು