Tv9 Digital Live: ಜಮೀರ್ ಅಹ್ಮದ್ ಖಾನ್ ಮತ್ತು ಹಿಂದೂ ಜಾಗರಣ ವೇದಿಕೆ ಸದಸ್ಯರ ತಿಕ್ಕಾಟ; ಚಾಮರಾಜಪೇಟೆ ಬಂದ್ಗೆ ರಾಜಕೀಯ ತಿರುವು
ಮೈದಾನದ ಸುತ್ತುಲೂ ಖಾಕಿ ಪಡೆ ಕಾವಲು ಕಾಯುತ್ತಿದೆ. ಚಾಮರಾಜಪೇಟೆಯಲ್ಲಿ ಅಲ್ಲೊಂದು ಇಲ್ಲೊಂದು ಹೊಟೇಲ್ಗಳು ತೆರೆದುಕೊಂಡಿವೆ. ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆಯಲ್ಲಿ ಶಾಂತಿಯುತ ಬಂದ್ ನಡೆಯುತ್ತಿದ್ದು, ಮೈದಾನದ ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿಲ್ಲ.
ಬೆಂಗಳೂರು: ಈದ್ಗಾ ಮೈದಾನ ವಿವಾದ(Chamrajpet Edga Ground) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಈಗ ಬಂದ್ ಕರೆ ನೀಡಲಾಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭೂ ಮಾಲೀಕತ್ವದ ವಿಚಾರವಾಗಿ ಶುರುವಾದ ಕಿತ್ತಾಟ, ಈಗ ಬಂದ್ಗೆ ಕರೆ ಕೊಡೋವರೆಗೂ ಹೋಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ 7 ವಾರ್ಡ್ಗಳ ನಾಗರಿಕರ ಒಕ್ಕೂಟದ ವೇದಿಕೆ ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸುವಂತೆ ಬಂದ್ಗೆ ಕರೆ ಕೊಟ್ಟಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೂ ಬಂದ್ ಇರಲಿದ್ದು, ಬಂದ್ಗೆ ಹಿಂದೂ ಸಂಘಟನೆಗಳು, ಕನ್ನಡ ಸಂಘಟನೆಗಳು ಸೇರಿದಂತೆ 50ಕ್ಕೂ ಅಧಿಕ ಸಂಘಗಳು ಬೆಂಬಲ ಸೂಚಿಸಿವೆ. ಆದ್ರೆ ಮತ್ತೊಂದು ಕಡೆ ಮುಸ್ಲಿಮರು ತಮ್ಮ ಅಂಗಡಿಗಳನ್ನು ಯಥಾಸ್ಥಿತಿ ತೆರೆದುಕೊಂಡು ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಉಳಿದ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ.
ಮೈದಾನದ ಸುತ್ತುಲೂ ಖಾಕಿ ಪಡೆ ಕಾವಲು ಕಾಯುತ್ತಿದೆ. ಚಾಮರಾಜಪೇಟೆಯಲ್ಲಿ ಅಲ್ಲೊಂದು ಇಲ್ಲೊಂದು ಹೊಟೇಲ್ಗಳು ತೆರೆದುಕೊಂಡಿವೆ. ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆಯಲ್ಲಿ ಶಾಂತಿಯುತ ಬಂದ್ ನಡೆಯುತ್ತಿದ್ದು, ಮೈದಾನದ ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿಲ್ಲ. ಚಾಮರಾಜಪೇಟೆಯ ಅಥೆನಾ ಪಬ್ಲಿಕ್ ಸ್ಕೂಲ್ಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಇನ್ನೊಂದೆಡೆ ರಾಜಕೀಯ ದೃಷ್ಟಿಯಿಂದ ನೋಡಿದರೆ ಈ ಬಂದ್ ಭಾರೀ ಪ್ರಭಾವ ಬೀರಲಿದೆ. ಚಾಮರಾಜಪೇಟೆ ಬಂದ್ ರಾಜಕೀಯದ ಕುರಿತಾದ ಇಂದಿನ ಡಿಜಿಟಲ್ ಲೈವ್ ಚರ್ಚೆಯನ್ನು ಆ್ಯಂಕರ್ ಚಂದ್ರಮೋಹನ್ ನಡೆಸಿಕೊಟ್ಟಿದ್ದಾರೆ.