AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ ಉಪಚುನಾವಣೆ: ಜನ ತಿರಸ್ಕರಿಸಿದ್ದಾರೆ, ಈಗಲೇ ಮತ್ತೆ ಸ್ಪರ್ಧಿಸಿದರೆ ನಗುತ್ತಾರೆ; ಡಿಕೆ ಸುರೇಶ್ ಮಾರ್ಮಿಕ ಮಾತು

ಡಿಸಿಎಂ ಡಿಕೆ ಶಿವಕುಮಾರ್ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದಂದಿನಿಂದಲೇ ಚನ್ನಪಟ್ಟಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದೀಗ ಆ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿದ್ದಾರೆ. ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದು ಎಂಬ ಬಗ್ಗೆ ಅವರು ನೀಡಿರುವ ಸುಳಿವು ಇಲ್ಲಿದೆ.

ಚನ್ನಪಟ್ಟಣ ಉಪಚುನಾವಣೆ: ಜನ ತಿರಸ್ಕರಿಸಿದ್ದಾರೆ, ಈಗಲೇ ಮತ್ತೆ ಸ್ಪರ್ಧಿಸಿದರೆ ನಗುತ್ತಾರೆ; ಡಿಕೆ ಸುರೇಶ್ ಮಾರ್ಮಿಕ ಮಾತು
ಜನ ತಿರಸ್ಕರಿಸಿದ್ದಾರೆ, ಈಗಲೇ ಮತ್ತೆ ಸ್ಪರ್ಧಿಸಿದರೆ ನಗುತ್ತಾರೆ; ಡಿಕೆ ಸುರೇಶ್ ಮಾರ್ಮಿಕ ಮಾತು
ಪ್ರಸನ್ನ ಗಾಂವ್ಕರ್​
| Edited By: |

Updated on: Jun 24, 2024 | 2:08 PM

Share

ಬೆಂಗಳೂರು, ಜೂನ್ 24: ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ (Channapatna) ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ (By Election) ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ (DK Suresh) ಮಾತನಾಡಿದ್ದಾರೆ. ರಾಮನಗರ ನಮ್ಮ ಜಿಲ್ಲೆ, ಪಕ್ಷದ ಅಧ್ಯಕ್ಷ, ಡಿಸಿಎಂ ಆಗಿ ಡಿಕೆ ಶಿವಕುಮಾರ್​​ಗೆ ಜವಾಬ್ದಾರಿ ಇದೆ. ಉಪಚುನಾವಣೆ ಬರುವುದರಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಿಲ್ಲ. ಹಾಗಾಗಿ ಕಾರ್ಯಕರ್ತರು ಸಾಕಷ್ಟು ಅಹವಾಲು ಕೊಡುತ್ತಾ ಇದ್ದಾರೆ. ಹಾಗಾಗಿ ಡಿಕೆ ಶಿವಕುಮಾರ್​ ಚನ್ನಪಟ್ಟಣಕ್ಕೆ ಭೇಟಿ ಕೊಡುತ್ತಿದ್ದಾರೆ. ಜನ ಯಾರನ್ನು ಬಯಸುತ್ತಾರೋ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಸುರೇಶ್ ಹೇಳಿದರು.

ಜನರು ಬಯಸಿದರೆ ನಾನೇ ಸ್ಪರ್ಧೆ ಮಾಡುತ್ತೇನೆಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕ್ಷೇತ್ರದ ಜನ ಏನು ತೀರ್ಮಾನ ಮಾಡುತ್ತಾರೆಯೋ ಅದಕ್ಕೆ ತಲೆ ಬಾಗುತ್ತೇವೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.

ನನ್ನನ್ನು ಜನರು ತಿರಸ್ಕರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತು ಒಂದು ತಿಂಗಳೂ ಆಗಿಲ್ಲ. ಆಗಲೇ ಇನ್ನೊಂದು ಚುನಾವಣೆ ಎಂದರೆ ಜನ ನಗುತ್ತಾರೆ. ಬೇರೆಯವರು ಕೆಲಸ ಮಾಡಲಿ, ನಾವು ಸಹಕಾರ ಕೊಡೋಣ. ಮೊದಲಿಂದಲೂ ಚನ್ನಪಟ್ಟಣ ಕ್ಷೇತ್ರದ ಜೊತೆ ಒಡನಾಟವಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲವಾಗಿದೆ‌‌‌, ನಾಯಕತ್ವ ಇರಲಿಲ್ಲ. ನಮ್ಮ ಪಕ್ಷಕ್ಕೆ ಬರೋದು ಹೋಗೋದರಿಂದ ನಮಗೆ ಹಿನ್ನಡೆ ಆಗಿತ್ತು ಎಂದು ಸುರೇಶ್ ಹೇಳಿದರು.

ಅಧಿಕಾರಿಗಳಿಗೆ ಹೆಚ್​ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಅವರಿಗೆ ನನ್ನನ್ನು ಮತ್ತು ಡಿಕೆ ಶಿವಕುಮಾರ್​​ರನ್ನು ನೆನಪಿಸಿಕೊಳ್ಳದಿದ್ದರೆ ಅವರ ರಾಜಕಾರಣ ನಡೆಯಲ್ಲ. ನಮ್ಮನ್ನು ನೆನಪಿಸಿಕೊಳ್ಳದಿದ್ರೆ ಅವರ ದಿನಚರಿಯೂ ನಡೆಯಲ್ಲ. ಹೀಗಾಗಿ ಅವರ ರಾಜಕಾರಣಕ್ಕೆ ನಮ್ಮನ್ನು ಎಳೆದು ತರ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಾಹಿತಿಗಳೂ ರಾಜಕಾರಣಿಗಳೇ: ಡಿಕೆ ಶಿವಕುಮಾರ್​ ಹೇಳಿಕೆಗೆ ಪ್ರಗತಿಪರರ ಆಕ್ರೋಶ, ಸಿಎಂಗೆ ಪತ್ರ

ಚನ್ನಪಟ್ಟಣ ತ್ಯಜಿಸಿ ಕುಮಾರಸ್ವಾಮಿ ಮಂಡ್ಯಕ್ಕೆ ಹೋದರು. ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಏನು ಮಾಡಿದ್ದಾರೆ? ಜನರನ್ನ, ಅಧಿಕಾರಿಗಳನ್ನ ಬೆದರಿಸುವ ಕೆಲಸ ಮಾಡಿದ್ದಾರೆ. ಬೆದರಿಸುವ ಕೆಲಸ ಹಿಂದೆಯೂ ಆಗಿದೆ, ಈಗಲೂ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ಸುಳ್ಳು ಹೇಳುವುದನ್ನೂ ನಿಲ್ಲಿಸಬೇಕು ಎಂದು ಸುರೇಶ್ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ