Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜವಾರ: ಹಾಲಿಗೆ ನೀರು ಸೇರಿಸಿ ಕೆಎಂಎಫ್​​ಗೆ ಭಾರೀ ವಂಚನೆ, ಹಾಲಿನ ಡೈರಿ ಗುಮಾಸ್ತ-ಕಾರ್ಯದರ್ಶಿ ಸಸ್ಪೆಂಡ್​

Ajjavara kmf milk cooperative society fraud: ರೈತರು ಹಾಕುವ ಹಾಲಿಗೆ ನ್ಯಾಯಯುತವಾಗಿ ಹಣ ನೀಡದೆ... ರೈತರ ಹಾಲಿಗೆ ನೀರು ಮಿಶ್ರಣ ಮಾಡಿ... ನೀರು ಸಮೇತ ಹೆಚ್ಚುವರಿ ಹಾಲನ್ನು KMF ಡೈರಿಗೆ ಹಾಕಿದ್ದಾರೆ. ರೈತರು ಡೈರಿ ಹಾಗೂ ಕೆಎಂಎಫ್​​ಗೂ ಮೂಸ ಮಾಡಿದ್ದಾರೆ. ಮಾಡಿದ ತಪ್ಪಿಗೆ ಅಜ್ಜವಾರ ಡೈರಿ ಆಡಳಿತ ಮಂಡಳಿ ಇಬ್ಬರನ್ನೂ ಇದೀಗ ವಜಾಗೊಳಿಸಿದೆ.

ಅಜ್ಜವಾರ: ಹಾಲಿಗೆ ನೀರು ಸೇರಿಸಿ ಕೆಎಂಎಫ್​​ಗೆ ಭಾರೀ ವಂಚನೆ, ಹಾಲಿನ ಡೈರಿ ಗುಮಾಸ್ತ-ಕಾರ್ಯದರ್ಶಿ ಸಸ್ಪೆಂಡ್​
ಹಾಲಿಗೆ ನೀರು ಸಿ ಕೆಎಂಎಫ್​​ಗೆ ಭಾರೀ ವಂಚನೆ, ಇಬ್ಬರು ಸಸ್ಪೆಂಡ್​
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on:Jun 24, 2024 | 2:00 PM

ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್​​ಗೆ Karnataka Milk Federation (KMF) ಹಾಲು ಸರಬರಾಜು ಮಾಡುವ ಬಿ.ಎಂ.ಸಿ ಹಾಲಿನ ಡೈರಿಯೊಂದಲ್ಲಿ ಕೆಲಸ ಮಾಡುವ ಡೈರಿ ಗುಮಾಸ್ತ ಹಾಗೂ ಕಾರ್ಯದರ್ಶಿ ಸೇರಿಕೊಂಡು ರೈತರು ತಂದು ಕೊಡುವ ಹಾಲಿಗೆ ನೀರು ಮಿಶ್ರಣ ಮಾಡಿ ಹೆಚ್ಚುವರಿ ಹಾಲಿನ ಲೆಕ್ಕ ತೋರಿಸಿದ್ದಾರೆ. ನಂತರ ಹೆಚ್ಚುವರಿಯಾಗಿ ಬಂದ ಹಾಲಿನ ಹಣವನ್ನು ಬೇನಾಮಿ ಅಕೌಂಟ್ ಗಳಿಗೆ ವರ್ಗಾವಣೆ ಮಾಡಿ ಲಕ್ಷ ಲಕ್ಷ ಹಣ ಗುಳಂ ಮಾಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ!!

ಗುಮಾಸ್ತ-ಕಾರ್ಯದರ್ಶಿ ವಂಚನೆಯ ವಿರೋಧ ಆಕ್ರೋಶಗೊಂಡ ಹಾಲು ಉತ್ಪಾದಕರು ಹಾಲು ಉತ್ಪಾದಕ ಸಹಕಾರ ಸಂಘದ ಡೈರಿ (Ajjavara kmf milk cooperative society fraud ) ಮುಂದೆ ಪ್ರತಿಭಟನೆ ನಡೆಸಿದ್ದಾರೆ… ಸಂಘದ ಕಾರ್ಯದರ್ಶಿ ಮತ್ತು ಗುಮಾಸ್ತ ಸೇರಿ ಅಕ್ರಮವಾಗಿ ತಿಂದಿರುವ ಹಣ ವಾಪಸ್​​ ಕಟ್ಟಲೇ ಬೇಕು ಎಂದು ಆಗ್ರಹಿಸಿದ್ದಾರೆ. ಈ ವಿದ್ಯಮಾನಗಳು/ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲಿನ ಡೈರಿಯಲ್ಲಿ.

Also Read: ಬೀದರ್​ನ ಬರಡು ಭೂಮಿಯಲ್ಲಿ ನೇರಳೆ ಹಣ್ಣು ಬೆಳೆದು ಯಶಸ್ಸು ಕಂಡ ಪಂಜಾಬ್​ ರೈತ

ಡೈರಿಯ ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ಎನ್ನುವವರು, ರೈತರು ತಂದು ಕೊಡುವ ಹಾಲಿಗೆ ನೀರು ಮಿಶ್ರಣ ಮಾಡಿ, ಹೆಚ್ಚುವರಿ ಹಾಲಿನ ಹಣ ತರಿಸಿಕೊಂಡಿದ್ದಾರೆ. ನಂತರ ಹೆಚ್ಚುವರಿಯಾಗಿ ಬಂದ ಹಾಲಿನ ಹಣವನ್ನು ತಮಗೆ ಬೇಕಾದ ಸಂಬಂಧಿಕರು ಹಾಗೂ ಬೇನಾಮಿ ಅಕೌಂಟ್ ಗಳಿಗೆ ಹಣ ವರ್ಗಾವಣೆ ಮಾಡಿ ಲಕ್ಷ ಲಕ್ಷ ಹಣ ಗುಳಂ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರಾದ ಕೇಶವ ಮಾಹಿತಿ ನೀಡಿದ್ದಾರೆ.

ಇನ್ನು ಗ್ರಾಮದ ರೈತ ಹರೀಶ ಎನ್ನುವವರು ಡೈರಿಯ ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ಜೋಡಿಯ ಅಕ್ರಮವನ್ನು ಪತ್ತೆ ಹಚ್ಚಿ ಸಂಘದ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ, ಇಬ್ಬರನ್ನೂ ತಕ್ಷಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಇಬ್ಬರೂ ಸೇರಿ ನಾಲ್ಕು ತಿಂಗಳಿಂದ 4 ಲಕ್ಷದ 70 ಸಾವಿರ ಹಣವನ್ನು ಗೋಲ್ ಮಾಲ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಘದ ಸದಸ್ಯರು ಡೈರಿಯ ಮುಂದೆ ಹಾಲಿನ ಕ್ಯಾನ್ ಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Mon, 24 June 24

Daily horoscope: ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily horoscope: ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ