Kannada Rajyotsava: ವ್ಹೀಲ್ ಚೇರ್ನಲ್ಲಿ ಬಂದು ಧ್ವಜಾರೋಹಣ ಮಾಡಿದ ನಟಿ ಲೀಲಾವತಿ
Senior Actress Leelavathi: ಹಿರಿಯ ನಟಿ ಲೀಲಾವತಿ ಅವರು ವ್ಹೀಲ್ ಚೇರ್ನಲ್ಲಿ ಇದ್ದಾರೆ. ಈ ಪರಿಸ್ಥಿತಿಯಲ್ಲೂ ಕೂಡ ಅವರಿಗೆ ಕನ್ನಡದ ಮೇಲಿನ ಪ್ರೇಮ ಕಡಿಮೆ ಆಗಿಲ್ಲ. ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ವ್ಹೀಲ್ ಚೇರ್ನಲ್ಲಿಯೇ ಬಂದು ಅವರು ಧ್ವಜಾರೋಹಣ ಮಾಡಿರುವುದು ವಿಶೇಷ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಹಿರಿಯ ನಟಿ ಲೀಲಾವತಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber) ಬಂದು ಧ್ವಜಾರೋಹಣ ಮಾಡಿದ್ದಾರೆ. ಅವರಿಗೆ ಇಗ 86 ವರ್ಷ ವಯಸ್ಸು. ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಸದ್ಯ ಅವರು ವ್ಹೀಲ್ ಚೇರ್ನಲ್ಲಿ ಇದ್ದಾರೆ. ಈ ಪರಿಸ್ಥಿತಿಯಲ್ಲೂ ಕೂಡ ಅವರಿಗೆ ಕನ್ನಡದ ಮೇಲಿನ ಪ್ರೇಮ ಕಡಿಮೆ ಆಗಿಲ್ಲ. ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವದ (Kannada Rajyotsava) ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ವ್ಹೀಲ್ ಚೇರ್ನಲ್ಲಿಯೇ ಬಂದು ಅವರು ಧ್ವಜಾರೋಹಣ ಮಾಡಿರುವುದು ವಿಶೇಷ. ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಅವರು ಲೀಲಾವತಿ (Leelavathi) ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ನಟ ವಿನೋದ್ ರಾಜ್ ಕೂಡ ಭಾಗಿ ಆಗಿದ್ದರು. ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಪ್ರಮೀಳಾ ಜೋಶಾಯ್, ಭಾ.ಮ. ಹರೀಶ್ ಮುಂತಾದವರು ಕೂಡ ಉಪಸ್ಥಿತರಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

