ಆ್ಯಂಕರ್ ಅನುಶ್ರೀ ವೈಭವದ ಮದುವೆ: ಕಲರ್​​ಫುಲ್ ವಿಡಿಯೋ ಇಲ್ಲಿದೆ ನೋಡಿ..

Updated on: Aug 31, 2025 | 1:21 PM

ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರು ರೋಷನ್ ಜೊತೆ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ವಿಡಿಯೋವನ್ನು ಅವರೇ ಹಂಚಿಕೊಂಡಿದ್ದಾರೆ. ವಿವಾಹದ ಮಧುರ ಕ್ಷಣಗಳು ಈ ವಿಡಿಯೋದಲ್ಲಿದೆ. ಅನುಶ್ರೀ ಮದುವೆಗೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಶಿವಣ್ಣ, ರಚಿತಾ ರಾಮ್ ಮುಂತಾದವರು ಆಗಮಿಸಿದ್ದರು.

ಕಿರುತೆರೆಯ ಫೇಮಸ್ ನಿರೂಪಕಿ ಅನುಶ್ರೀ (Anchor Anushree) ಅವರು ರೋಷನ್ ಜೊತೆ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ವಿಡಿಯೋವನ್ನು (Anushree Marriage Video) ಅವರೇ ಈಗ ಹಂಚಿಕೊಂಡಿದ್ದಾರೆ. ಆ್ಯಂಕರ್ ಅನುಶ್ರೀ ಮದುವೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಶಿವರಾಜ್​​ಕುಮಾರ್, ರಚಿತಾ ರಾಮ್, ರಾಜ್​ ಬಿ. ಶೆಟ್ಟಿ, ತರುಣ್ ಸುಧೀರ್, ಹಂಸಲೇಖ, ಪ್ರೇಮಾ, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ಡಾಲಿ ಧನಂಜಯ ಮುಂತಾದವರು ಆಗಮಿಸಿದ್ದರು. ವಿವಾಹದ ಮಧುರ ಕ್ಷಣಗಳು ಈ ವಿಡಿಯೋದಲ್ಲಿವೆ. ಮದುವೆಗೆ ಬಂದು ಹಾರೈಸಿದ ಎಲ್ಲರಿಗೂ ಅನುಶ್ರೀ ಮತ್ತು ರೋಷನ್ ಅವರು ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.