AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಶ್ರೀ ಮದುವೆಯಲ್ಲಿ ಅಪ್ಪು; ಈ ಉಡುಗೊರೆಗೆ ಬೆಲೆ ಕಟ್ಟೋಕೆ ಆಗುತ್ತಾ?

ಅನುಶ್ರೀ ಅವರು ತಮ್ಮ ಮದುವೆಯಲ್ಲಿ ಅಪ್ಪುಗೆ ಅಪಾರ ಪ್ರೀತಿ ಮತ್ತು ಗೌರವ ಸಲ್ಲಿಸಿದ್ದಾರೆ. ಅಪ್ಪು ಫೋಟೋದೊಂದಿಗೆ ಮಾಡಿದ ಭಾವುಕ ಉಡುಗೊರೆ ವೈರಲ್ ಆಗಿದೆ. ಶಿವರಾಜ್ ಕುಮಾರ್, ಅರ್ಜುನ್ ಜನ್ಯ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿ ಆಶೀರ್ವದಿಸಿದ್ದಾರೆ. ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅನುಶ್ರೀ ಮದುವೆಯಲ್ಲಿ ಅಪ್ಪು; ಈ ಉಡುಗೊರೆಗೆ ಬೆಲೆ ಕಟ್ಟೋಕೆ ಆಗುತ್ತಾ?
ಅನುಶ್ರೀ
ರಾಜೇಶ್ ದುಗ್ಗುಮನೆ
|

Updated on:Aug 30, 2025 | 8:59 AM

Share

ಆ್ಯಂಕರ್ ಅನುಶ್ರೀ (Anushree) ಅವರ ವಿವಾಹ ಇತ್ತೀಚೆಗೆ ನೆರವೇರಿದೆ. ಐಟಿ ಉದ್ಯೋಗಿ ರೋಷನ್ ಅವರ ಜೊತೆ ಅನುಶ್ರೀ ಅವರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇಬ್ಬರೂ ಅಪ್ಪು ಅಭಿಮಾನಿಗಳು. ಪುನೀತ್ ರಾಜ್​ಕುಮಾರ್ ಮೇಲೆ ಇವರಿಗೆ ವಿಶೇಷ ಪ್ರೀತಿ ಇದೆ. ಈಗ ಇವರಿಗೆ ಬೆಲೆ ಕಟ್ಟಲಾಗದ ಉಡುಗೊರೆ ಒಂದು ಸಿಕ್ಕಿದೆ. ಇದನ್ನು ನೋಡಿ ಅನುಶ್ರೀ ಅವರು ಭಾವುಕರಾಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

ಅನುಶ್ರೀ ಅವರು ಆಗಸ್ಟ್ 28ರಂದು ಬೆಂಗಳೂರಿನ ಹೊರ ವಲಯದಲ್ಲಿರೋ ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ನಡೆದಿದೆ. ಆಪ್ತರು ಹಾಗೂ ಗೆಳೆಯರು ಮಾತ್ರ ವಿವಾಹದಲ್ಲಿ ಭಾಗಿ ಆಗಿದ್ದರು. ಅನುಶ್ರೀ ಹಾಗೂ ರೋಷನ್ ಇಬ್ಬರೂ ಅಪ್ಪು ಅಭಿಮಾನಿಗಳಾಗಿರುವುದರಿಂದ ಅಲ್ಲಿ ಪುನೀತ್ ಫೋಟೋ ಇಟ್ಟು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಇದು ಇವರ ಅಭಿಮಾನಕ್ಕೆ ಸಾಕ್ಷಿ ಆಗಿತ್ತು.

ಇದನ್ನೂ ಓದಿ
Image
ಗರ್ಲ್​ಫ್ರೆಂಡ್​ಗೆ ಮನೆ ಕೊಟ್ಟು ಬಾಡಿಗೆ ಪಡೆದ ಹೃತಿಕ್ ರೋಷನ್
Image
ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ರಾಜ್ ಬಿ. ಶೆಟ್ಟಿ; ಕಾರಣ ಏನು?
Image
ಧೂಳೆಬ್ಬಿಸಿದ ರಾಜ್ ಹಂಚಿಕೆ ಮಾಡ್ತಿರೋ ‘ಲೋಕಃ’ ಸಿನಿಮಾ; 9.5 ರೇಟಿಂಗ್
Image
Bigg Boss ಟೈಟಲ್​ನಲ್ಲಿ ಹೆಚ್ಚುವರಿ G ಏಕೆ? ಸಂಖ್ಯಾಶಾಸ್ತ್ರದ ಲೆಕ್ಕಾಚಾರ

ಅನುಶ್ರೀಗೆ ಸಿಕ್ಕ ಗಿಫ್ಟ್

ಈಗ ಅನುಶ್ರೀ ಅವರು ಭಾವುಕರಾಗುವಂತಹ ಘಟನೆ ಒಂದು ನಡೆದಿದೆ. ಅನುಶ್ರೀ ಹಾಗೂ ರೋಷನ್ ಮಧ್ಯದಲ್ಲಿ ಅಪ್ಪು ಇರುವ ರೀತಿಯಲ್ಲಿ ಫೋಟೋನ ಎಡಿಟ್ ಮಾಡಲಾಗಿದೆ. ಇದನ್ನು ಅನುಶ್ರೀ ಅವರಿಗೆ ನೀಡಲಾಗಿದೆ. ಫೋಟೋ ನೋಡಿದ ಬಳಿಕ ಅನುಶ್ರೀ ಅವರಿಗೆ ಖುಷಿ ಆಗಿದೆ. ಅಲ್ಲದೆ, ಅವರು ಭಾವುಕ ಕೂಡ ಆದರು. ಅಪ್ಪು ಯೂತ್ ಬ್ರಿಗೇಡ್ ಈ ಗಿಫ್ಟ್​ನ ಕೊಟ್ಟಿದೆ.

ಇದನ್ನೂ ಓದಿ:  ‘ಅಪ್ಪು ನಮ್ಮನ್ನು ಸೇರಿಸಿದ್ರು’; ವಿವಾಹದ ಬಳಿಕ ಮೊದಲ ರಿಯಾಕ್ಷನ್ ಕೊಟ್ಟ ಅನುಶ್ರೀ

ಅನುಶ್ರೀ ಅವರ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಶಿವರಾಜ್​ಕುಮಾರ್, ಅರ್ಜುನ್ ಜನ್ಯ, ವಿಜಯ್ ರಾಘವೇಂದ್ರ, ವಿಜಯ್ ಪ್ರಕಾಶ್, ಡಾಲಿ ಧನಂಜಯ್ ಸೇರಿದಂತೆ ಅನೇಕರು ವಿವಾಹಕ್ಕೆ ಆಗಮಿಸಿ ದಂಪತಿಗೆ ಹಾರೈಸಿದ್ದಾರೆ. ಮದುವೆಯ ವಿಡಿಯೋಗಳನ್ನು ಅನುಶ್ರೀ ಅವರು ಹಂಚಿಕೊಳ್ಳುತ್ತಿದ್ದಾರೆ. ಅನುಶ್ರೀ ಅವರು ಮದುವೆ ಬಳಿಕವೂ ತಮ್ಮ ಕೆಲಸವನ್ನು ಮುಂದುವರಿಸಲಿದ್ದಾರೆ. ವಿವಿಧ ಕಾರ್ಯಕ್ರಮಗಳು ಹಾಗೂ ಶೋಗಳನ್ನು ಅವರು ಹೋಸ್ಟ್ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:57 am, Sat, 30 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ