Bigg Boss ಟೈಟಲ್ನಲ್ಲಿ ಹೆಚ್ಚುವರಿ G ಏಕೆ? ಇದಕ್ಕಿದೆ ಸಂಖ್ಯಾಶಾಸ್ತ್ರದ ಲೆಕ್ಕಾಚಾರ
ಬಿಗ್ ಬಾಸ್ ಕನ್ನಡ ಶೋಗೆ ಹೆಚ್ಚುವರಿ 'ಜಿ' ಏಕೆ ಸೇರಿಸಲಾಗಿದೆ ಎಂಬುದರ ಹಿಂದಿನ ಕಾರಣ ಸಂಖ್ಯಾಶಾಸ್ತ್ರದಲ್ಲಿದೆ. ಪರಾಸ್ ಛಬ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಸಂಜಯ್ ಜುಮಾನಿ ಅವರು ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. 24 ಸಂಖ್ಯೆ ಶುಕ್ರನಿಗೆ ಸಂಬಂಧಿಸಿದ್ದು, ಐಷಾರಾಮಿ ಮತ್ತು ಖ್ಯಾತಿಯನ್ನು ತರುತ್ತದೆ ಎಂದು ಅವರು ಹೇಳಿದ್ದಾರೆ.

ಕನ್ನಡದಲ್ಲಿ ಬಿಗ್ ಬಾಸ್ ಶೋ ಬರಲು ರೆಡಿ ಆಗಿದೆ. ಹಿಂದಿ, ಮಲಯಾಳಂ, ಹಿಂದಿ ಭಾಷೆಯಲ್ಲಿ ಈ ಶೋ ಈಗಾಗಲೇ ಆರಂಭ ಆಗಿದೆ. ಈ ಮಧ್ಯೆ, ‘BIGG BOSS‘ ಶೋ ಹೆಸರಿಗೆ ಹೆಚ್ಚುವರಿ ಆಗಿ ‘G’ ಏಕೆ ನೀಡಲಾಗಿದೆ ಎಂಬ ಬಗ್ಗೆ ಯೋಚಿಸಿದ್ದೀರಾ? ಇದು ಕೇವಲ ಹೆಸರಿನ ಆಕರ್ಷಣೆಯೇ ಅಥವಾ ಜ್ಯೋತಿಷ್ಯದ ಕಾರಣವೇ? ಅನೇಕರಿಗೆ ಇದು ತಿಳಿದಿಲ್ಲದಿರಬಹುದು. ಆದ್ದರಿಂದ ಇದರ ಹಿಂದಿನ ನಿಜವಾದ ಕಾರಣವನ್ನು ಕಂಡುಹಿಡಿಯೋಣ.
‘ಬಿಗ್ ಬಾಸ್ ಹಿಂದಿ ಸೀಸನ್ 13’ರ ಸ್ಪರ್ಧಿ ಪರಸ್ ಛಬ್ರಾ ಬಗ್ಗೆ ಅನೇಕರಿಗೆ ತಿಳಿದಿದೆ. ಈ ಕಾರ್ಯಕ್ರಮದ ನಂತರ, ಪರಾಸ್ ‘ಆಬ್ರಾ ಕಾ ಡಾಬ್ರಾ ಶೋ’ ಎಂಬ ತಮ್ಮದೇ ಆದ ಪಾಡ್‌ಕ್ಯಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ. ಅವರು ವಿವಿಧ ಕ್ಷೇತ್ರಗಳ ಪ್ರಸಿದ್ಧ ಜನರೊಂದಿಗೆ ಸಂವಹನ ನಡೆಸುತ್ತಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಖಗೋಳಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ತಜ್ಞ ಸಂಜಯ್ ಬಿ. ಜುಮಾನಿ ಅವರೊಂದಿಗೆ ಪರಾಸ್ ಮಾತನಾಡುತ್ತಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ, ಸಂಜಯ್ ಜುಮಾನಿ ಬಿಗ್ ಬಾಸ್‌ಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು.
ಬಿಗ್ ಬಾಸ್ ಹೆಚ್ಚುವರಿ ಜಿ ಅರ್ಥ ವಿವರಣೆ
View this post on Instagram
‘ನಾವು ಕಾರ್ಯಕ್ರಮದ ನಿರ್ಮಾಪಕರಿಗೆ ಶೋ ಹೆಸರಿಗೆ ಹೆಚ್ಚುವರಿ ‘ಜಿ’ ಸೇರಿಸಲು ಸೂಚಿಸಿದೆವು. ಆಗ ಅದು ಅದು 24 ಸಂಖ್ಯೆಯನ್ನು ನೀಡುತ್ತಿತ್ತು. 24ನೇ ಸಂಖ್ಯೆಯು ಐಷಾರಾಮಿ, ಹಣ ಮತ್ತು ಖ್ಯಾತಿಯನ್ನು ಆಕರ್ಷಿಸುವ ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಒಂದು ಜಿ ಕಡಿಮೆ ಇದ್ದಿದ್ದರೆ 21 ನಂಬರ್ ಬರುತ್ತಿತ್ತು’ ಎಂದು ಸಂಜಯ್ ಹೇಳಿದ್ದಾರೆ.
ಇದನ್ನೂ ಓದಿ: ಮತ್ತೆ ಬಂತು ಬಿಗ್ಬಾಸ್: ಈ ಸಲ ಕಿಚ್ಚು ಹೆಚ್ಚು
‘ಶೋನ ನಿರ್ದೇಶಕ ಸಂದೀಪ್ ಸಿಕಂದ್ ಜಿ ನಮ್ಮ ಹಳೆಯ ಅನುಯಾಯಿಗಳಲ್ಲಿ ಒಬ್ಬರು. ಅವರು ಶೀರ್ಷಿಕೆಯೊಂದಿಗೆ ನಮ್ಮ ಬಳಿಗೆ ಬಂದಿದ್ದರು. ನಾವು ಕಾರ್ಯಕ್ರಮದ ಹೆಸರಿನಲ್ಲಿ ಹೆಚ್ಚುವರಿ G ಸೇರಿಸಲು ಹೇಳಿದ್ದೆವು. ಏಕೆಂದರೆ Big Boss ಎಂದು ಟೈಟಲ್ ಇದ್ದಿದ್ದರೆ ಸಂಖ್ಯೆ 21ಕ್ಕೆ ಬರುತ್ತಿತ್ತು’ ಎಂದರು ಅವರು.
ಸಂಖ್ಯಾಶಾಸ್ತ್ರ ಏನು ಹೇಳುತ್ತದೆ?
ಇಂಗ್ಲಿಷನ್ ಪ್ರತಿಯೊಂದು ಅಕ್ಷರವು ಒಂದು ಸಂಖ್ಯೆಯೊಂದಿಗೆ ಸಂಬಂಧ ಹೊಂದಿದೆ. A, I, Q, J, Y-1, B, K, R-2, C, G, S, L-3, D, M, T-4, E, H, N, X-5. U, V, W-6, O, Z -7, F, P-8 ಪ್ರತಿನಿಧಿಸುತ್ತದೆ. ಇದರ ಪ್ರಕಾರ ನೋಡೋದಾದರೆ Bigg Boss ಸಂಖ್ಯೆಯಿಂದ (+1+3+3 + 2+7+3+3= 24) ಆಗುತ್ತದೆ. ಶುಕ್ರನು ಪ್ರೀತಿ, ಸೌಂದರ್ಯ, ಆಕರ್ಷಣೆ, ಸಂತೋಷ, ಸಂಪತ್ತು ಮತ್ತು ಕಲೆಯನ್ನು ನೀಡುತ್ತಾನೆ. ಶುಕ್ರನ ಕೃಪೆಯಿಂದ, ಒಬ್ಬ ವ್ಯಕ್ತಿಯು ಸಮಾಜದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತಾನೆ. ಅಲ್ಲದೆ, ಈ ಸಂಖ್ಯೆಯು ಐಷಾರಾಮಿ, ಹಣ ಮತ್ತು ಖ್ಯಾತಿಯನ್ನು ಆಕರ್ಷಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







